Life Insurance Premium Increase:ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂ ದುಬಾರಿ?

Suvarna News   | Asianet News
Published : Dec 16, 2021, 08:10 PM IST
Life Insurance Premium Increase:ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂ ದುಬಾರಿ?

ಸಾರಾಂಶ

*ರೀಇನ್ಸುರೆನ್ಸ್ ಕಂಪನಿಗಳು ಶುಲ್ಕ ಹೆಚ್ಚಳ ಮಾಡಲಿರೋ ಕಾರಣ ಜೀವ ವಿಮಾ ಪ್ರೀಮಿಯಂನಲ್ಲಿ ಏರಿಕೆ *ಪ್ರೀಮಿಯಂ ಹೆಚ್ಚಳ ಕೋರಿ IRDAI ಗೆ ಅರ್ಜಿ *ಆರೋಗ್ಯ ವಿಮಾ ಪ್ರೀಮಿಯಂಗಳಲ್ಲಿ ಕೂಡ ಹೆಚ್ಚಳ ಸಾಧ್ಯತೆ

ನವದೆಹಲಿ (ಡಿ.16): ಹೊಸ ವರ್ಷದಲ್ಲಿ ಜೀವ ವಿಮಾ ಪ್ರೀಮಿಯಂಗಳಲ್ಲಿ ( Life insurance premium) ಹೆಚ್ಚಳವಾಗೋ ಸಾಧ್ಯತೆಯಿದೆ. 2022ರಲ್ಲಿ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಲು ಅನುಮತಿ ಕೋರಿ ಅನೇಕ ಜೀವ ವಿಮಾ ಕಂಪನಿಗಳು ಈಗಾಗಲೇ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರಕ್ಕೆ (IRDAI) ಅರ್ಜಿ ಸಲ್ಲಿಸಿವೆ ಕೂಡ. 2022ರಲ್ಲಿ ಅನೇಕ ರೀಇನ್ಸುರೆನ್ಸ್ ಕಂಪನಿಗಳು (reinsurance companies) ಶುಲ್ಕ ಹೆಚ್ಚಳ ಮಾಡಲಿವೆ. ಜೀವ ವಿಮಾ ಕಂಪನಿಗಳು ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಪ್ರೀಮಿಯಂ ಹೆಚ್ಚಿಸಲಿವೆ.

ರೀಇನ್ಸುರೆನ್ಸ್ ಎಂದ್ರೇನು?
ರೀಇನ್ಸುರೆನ್ಸ್ (reinsurence) ಅಂದ್ರೆ ಜೀವ ವಿಮಾ ಕಂಪನಿಗಳು ( Life insurance companies) ಇನ್ನೊಂದು ಜೀವ ವಿಮಾ ಕಂಪನಿಯಿಂದ ಖರೀದಿಸೋ ವಿಮೆ (insurance). ಮಹತ್ವದ ಕ್ಲೇಮ್ ಗಳ ಅಪಾಯದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಜೀವ ವಿಮಾ ಕಂಪನಿಗಳು ಇನ್ನೊಂದು ವಿಮಾ ಕಂಪನಿಯಿಂದ ವಿಮೆ ಪಡೆದಿರುತ್ತವೆ. ಈ ವಿಮೆ ಶುಲ್ಕದಲ್ಲಿ ಹೆಚ್ಚಳ ಮಾಡಿದಾಗ ಆ ಆರ್ಥಿಕ ಹೊರೆಯನ್ನು ಜೀವ ವಿಮಾ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸುತ್ತವೆ.  ರೀಇನ್ಸುರೆನ್ಸ್ ಕಂಪನಿಗಳು 2022ರಲ್ಲಿ ಶುಲ್ಕವನ್ನು ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡೋ ಸಾಧ್ಯತೆಯಿರೋದ್ರಿಂದ ಕೆಲವು ಮೂಲಗಳ ಪ್ರಕಾರ ಇನ್ಯುರೆನ್ಸ್ ಪ್ರೀಮಿಯಂಗಳಲ್ಲಿ ಶೇ.20-40ರಷ್ಟು ಏರಿಕೆ ಕಂಡುಬರೋ ಸಾಧ್ಯತೆಯಿದೆ. 

Business 2021: ಶಾಪಿಂಗ್, ಡಿಜಿಟಲ್ ಪಾವತಿಗೆ ಹೆಚ್ಚಿದ ಕ್ರೆಡಿಟ್ ಕಾರ್ಡ್ ಬಳಕೆ

ಆರೋಗ್ಯ ವಿಮೆ ಪ್ರೀಮಿಯಂ ಕೂಡ ಹೆಚ್ಚಳ
ಹೊಸ ವರ್ಷದಲ್ಲಿ ಖಾಸಗಿ ಆಸ್ಪತ್ರೆಗಳು(Private hospitals) ಚಿಕಿತ್ಸೆ ವೆಚ್ಚವನ್ನು ಶೇ.10ರಷ್ಟು ಏರಿಕೆ ಮಾಡಲು ಸಿದ್ಧತೆ ನಡೆಸುತ್ತಿವೆ. ಇದು ಕೂಡ ಆರೋಗ್ಯ ವಿಮೆ(Health Insurance) ಪ್ರೀಮಿಯಂ (Premium) ಮೇಲೆ ಪ್ರಭಾವ ಬೀರೋ ಸಾಧ್ಯತೆಯಿದೆ. ವೈಯಕ್ತಿಕ ಆರೋಗ್ಯ ನೀತಿ ಪ್ರೀಮಿಯಂ  ((Premium of Individual Health Policy) ಹೆಚ್ಚಿಸಲು IRDAI ಅನುಮತಿ ಬೇಕು. ಆದ್ರೆ ಕೊರೋನಾ(Corona) ವೈರಸ್ ಚಿಕಿತ್ಸಾ ವೆಚ್ಚವನ್ನು ಖಾಸಗಿ ಆಸ್ಪತ್ರೆಗಳು(Private hospitals) ಹೆಚ್ಚಿಸಿರೋ ಹಿನ್ನೆಲೆಯಲ್ಲಿ ಅದನ್ನೇ ನೆಪವಾಗಿಟ್ಟುಕೊಂಡು ವಿಮಾ ಕಂಪನಿಗಳು(Insurance companies) ವೈಯಕ್ತಿಕ ಆರೋಗ್ಯ ನೀತಿ ಪ್ರೀಮಿಯಂ  ಹೆಚ್ಚಿಸಲು IRDAI ಮೇಲೆ ಒತ್ತಡ ಹೇರುತ್ತಿವೆ.  ಕಳೆದ ವರ್ಷ ಕೊರೋನಾ ಕಾರಣಕ್ಕೆ ಆರೋಗ್ಯ ವಿಮೆಗಳಿಗೆ (Health Insurance)ಬೇಡಿಕೆ ಹೆಚ್ಚಿತ್ತು. ಅಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯ ವಿಮಾ ಪಾಲಿಸಿಗಳು ಕ್ಲೇಮ್ ಆಗಿದ್ದವು. ಇದು ಸಹಜವಾಗಿ ಆರೋಗ್ಯ ವಿಮಾ ಕಂಪನಿಗಳ ಆದಾಯದ ಮೇಲೆ ಪ್ರಭಾವ ಬೀರಿತ್ತು.

ಪಾಲಿಸಿಗಳ ಮೇಲೆ ಪ್ರಭಾವ
ಪ್ರೀಮಿಯಂ ಹೆಚ್ಚಳ ಆನ್ ಲೈನ್ ಹಾಗೂ ಆಪ್ ಲೈನ್ ಎರಡೂ ಪಾಲಿಸಿಗಳ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ. ಕಳೆದ ಆರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆನ್ ಲೈನ್ ಪಾಲಿಸಿ ಮಾರುಕಟ್ಟೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರೋ ಸಾಧ್ಯತೆಯಿದೆ. ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಿನ ಮೊತ್ತದ ಆರೋಗ್ಯ ವಿಮೆಗಳು ಕ್ಲೇಮ್ ಆಗಿರೋದು ರೀ ಇನ್ಸುರೆನ್ಸ ಕಂಪನಿಗಳ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿವೆ. ಇದೇ ಕಾರಣಕ್ಕೆ ರೀಇನ್ಸುರೆನ್ಸ್ ಕಂಪನಿಗಳು ಶುಲ್ಕದಲ್ಲಿ ಹೆಚ್ಚಳ ಮಾಡಿವೆ. 

Liquor price hike in US: ಅಮೆರಿಕದಲ್ಲಿ ಹಣದುಬ್ಬರ ಮಾತ್ರವಲ್ಲ, ಮದ್ಯ ಬೆಲೆಯಲ್ಲೂ ಏರಿಕೆ!

ಟರ್ಮ್ ಇನ್ಯುರೆನ್ಸ್ ಗೆ(Term Insurance) ಹೆಚ್ಚಿದ ಬೇಡಿಕೆ
ಕೊರೋನಾ ಸಮಯದಲ್ಲಿ ಟರ್ಮ್ ಇನ್ಯುರೆನ್ಸ್ ಗೆ ಬೇಡಿಕೆ ಹೆಚ್ಚಿದೆ. ಇದು ಕೂಡ ಶುಲ್ಕ ಹೆಚ್ಚಿಸಲು ಕಾರಣವಾಗಿದೆ. ಪ್ರೀಮಿಯಂ ಹೆಚ್ಚಳದಿಂದ ವಿಮಾ ಕಂಪನಿಗಳ ಪಾಲಿಸಿ ಮಾರಾಟದಲ್ಲಿ ಇಳಿಕೆ ಕಂಡುಬರೋ ಸಾಧ್ಯತೆಯಿದೆ. ಆದ್ರೆ ಪ್ರೀಮಿಯಂ ದರದಲ್ಲಿ ಹೆಚ್ಚಿನ ಏರಿಕೆ ಮಾಡೋ ಕಾರಣ ಸಹಜವಾಗಿ ವಿಮಾ ಕಂಪನಿಗಳಿಗೆ ಹೆಚ್ಚಿನ ಲಾಭವಾಗೋ ಸಾಧ್ಯತೆಯಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ