*2021ರಲ್ಲಿ ಜನರು ಶಾಪಿಂಗ್ ವೊಂದಕ್ಕೆ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿರೋ ಪಾವತಿ 52,000 ಕೋಟಿ ರೂ.
*ಡಿಜಿಟಲ್ ವ್ಯಾಲೆಟ್ ಮೂಲಕ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿರೋ ಪಾವತಿ 40,000 ಕೋಟಿ ರೂ.
*ಅಕ್ಟೋಬರ್ ನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಅತ್ಯಧಿಕ ಶಾಪಿಂಗ್.
ನವದೆಹಲಿ (ಡಿ.16): 2021ರಲ್ಲಿ ಜನರು ಕ್ರೆಡಿಟ್ ಕಾರ್ಡ್ ಗಳನ್ನು (Credit card) ಶಾಪಿಂಗ್(Shopping) ಹಾಗೂ ಡಿಜಿಟಲ್ ಪಾವತಿಗಳಿಗೆ(Digital payments)ಹೆಚ್ಚಾಗಿ ಬಳಸಿದ್ದಾರೆ ಎಂದು ಆನ್ ಲೈನ್ ಪಾವತಿ ಆಪ್(Online payments app) ಸಂಗ್ರಹಿಸಿದ ಮಾಹಿತಿ ತಿಳಿಸಿದೆ.
ಶಾಪಿಂಗ್ ಹಾಗೂ ಡಿಜಿಟಲ್ ಪಾವತಿ ಬಿಟ್ರೆ ಇಎಂಐ(EMIs), ಆಹಾರ(food) ಹಾಗೂ ಇತರ ಬಿಲ್ ಗಳ ಪಾವತಿಗೆ ಜನರು ಕ್ರೆಡಿಟ್ ಕಾರ್ಡ್ ಗಳನ್ನು ಹೆಚ್ಚಾಗಿ ಬಳಸಿದ್ದಾರೆ. ಶಾಪಿಂಗ್ ವೊಂದಕ್ಕೆ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿರೋ ಪಾವತಿ ಒಟ್ಟು 52 ಸಾವಿರ ಕೋಟಿ ರೂ. ಇನ್ನು ವಿವಿಧ ಪಾವತಿಗಳಿಗೆ ಡಿಜಿಟಲ್ ವ್ಯಾಲೆಟ್ ಗಳನ್ನು(digital wallets )ಬಳಸಿ ಕ್ರೆಡಿಟ್ ಕಾರ್ಡ್ ನಿಂದ ಪಾವತಿಸಿರೋ ಹಣ 40,000 ಕೋಟಿ ರೂ. ಇದ್ರಲ್ಲಿ 7,850 ಕೋಟಿ ರೂ.ವನ್ನು ಬರೀ ಟ್ರಾವೆಲ್ ಗಾಗಿಯೇ(Travel) ವೆಚ್ಚ ಮಾಡಲಾಗಿದೆ. ಇನ್ನು ಆಹಾರ (Food)ಹಾಗೂ ಪಾನೀಯಗಳ (Bevarages) ಖರೀದಿಗೆ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿರೋ ವೆಚ್ಚ 12,500 ಕೋಟಿ ರೂ.
undefined
Liquor price hike in US: ಅಮೆರಿಕದಲ್ಲಿ ಹಣದುಬ್ಬರ ಮಾತ್ರವಲ್ಲ, ಮದ್ಯ ಬೆಲೆಯಲ್ಲೂ ಏರಿಕೆ!
ಅಕ್ಟೋಬರ್ ನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಅತ್ಯಧಿಕ ಶಾಪಿಂಗ್ (Shopping) ಮಾಡಲಾಗಿದೆ. ಈ ಅವಧಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿರೋ ಶಾಪಿಂಗ್ ವೆಚ್ಚ 7,535 ಕೋಟಿ ರೂ. ಜೂನ್ ಹಾಗೂ ಅಕ್ಟೋಬರ್ ನಡುವಿನ 5 ತಿಂಗಳ ಅವಧಿಯಲ್ಲಿ ಡಿಜಿಟಲ್ ಪಾವತಿಗಳು ಹಾಗೂ ವ್ಯಾಲೆಟ್ ಮೂಲಕ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿರೋ ಪಾವತಿಗಳ ಮೊತ್ತ ಹೆಚ್ಚಿರೋದು ಕಂಡುಬಂದಿದೆ. ಈ ಅವಧಿಯಲ್ಲಿ ಜನರು ಮನೆಬಾಡಿಗೆ(house rent) ಹಾಗೂ ಶಾಲಾ ಶುಲ್ಕಗಳ(School fees) ಪಾವತಿಗೆ ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಬಳಸಿರೋದು ಕಂಡುಬಂದಿದೆ. ಈ ಅವಧಿಯಲ್ಲಿ ಬಹುತೇಕ ಪೋಷಕರು ಮಕ್ಕಳ ಶಾಲಾ ಶುಲ್ಕ ಪಾವತಿಸುತ್ತಾರೆ. ಕೊರೋನಾ ಕಾರಣಕ್ಕೆ ಆನ್ ಲೈನ್ ಕ್ಲಾಸ್ ಗಳಿರೋ ಕಾರಣ ಪೋಷಕರು ಕೂಡ ಶುಲ್ಕ ಪಾವತಿಸಲು ಈ ವರ್ಷ ಶಾಲೆಗೆ ಹೋಗಿರೋದಿಲ್ಲ. ಬದಲಿಗೆ ಡಿಜಿಟಲ್ ಪಾವತಿ(Digital payment) ಮೂಲಕವೇ ಶುಲ್ಕ ಪಾವತಿಸಿರುತ್ತಾರೆ.
ಇನ್ನು ಇ-ಕಾಮರ್ಸ್(e-commerce)ತಾಣಗಳ ಮೂಲಕ ಶಾಪಿಂಗ್ ಗೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿರೋದು ಜನವರಿಯಿಂದ ಏಪ್ರಿಲ್ ಅವಧಿಯಲ್ಲಿ ಹಾಗೂ ಆಗಸ್ಟ್ ನಿಂದ ಅಕ್ಟೋಬರ್ ಸಮಯದಲ್ಲಿ ಹೆಚ್ಚಿರೋದು ಕಂಡುಬಂದಿದೆ. ಈ ಎರಡೂ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಬ್ಬಗಳಿದ್ದವು. ಈ ಹಿನ್ನೆಲೆಯಲ್ಲಿ ಹಬ್ಬದ ಪ್ರಯುಕ್ತ ಜನರು ಹೆಚ್ಚಿನ ಶಾಪಿಂಗ್ ನಡೆಸಿದ್ದಾರೆ. ಇನ್ನು ಆಹಾರ ಹಾಗೂ ವಿದ್ಯುತ್, ನೀರು ಬಿಲ್ ಮುಂತಾದ ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸಿರೋದು ವರ್ಷದುದ್ದಕ್ಕೂ ಒಂದೇ ರೀತಿ ಇದೆ. ಆದ್ರೆ ಆಹಾರ ಹಾಗೂ ಪಾನೀಯಗಳ ಮೇಲಿನ ವೆಚ್ಚದಲ್ಲಿ ಜುಲೈನಲ್ಲಿ ಲಾಕ್ ಡೌನ್ ನಿಯಮಗಳ ತೆರವಿನ ಬಳಿಕ ಏರಿಕೆಯಾಗಿರೋದು ಕಂಡುಬಂದಿದೆ.
Money Transfer : ತಪ್ಪಾದ ಖಾತೆಗೆ ಹಣ ಹೋದ್ರೆ ವಾಪಸ್ ಪಡೆಯೋದು ಹೇಗೆ?
ಡಿಜಿಟಲ್ ಪಾವತಿ(Digital payments) ಹೆಚ್ಚಲು ಕಾರಣವೇನು?
ಕೊರೋನಾ ಕಾರಣಕ್ಕೆ ವಿಧಿಸಲಾದ ಲಾಕ್ ಡೌನ್(Lockdown) ನಿಯಮಗಳ ಜೊತೆಗೆ ವೈರಸ್ ಭಯ 2021ರಲ್ಲಿ ಜನರು ಆನ್ಲೈನ್ ಶಾಪಿಂಗ್(Online shopping) ಹಾಗೂ ಡಿಜಿಟಲ್ ಪಾವತಿಗಳತ್ತ(Digital payments)ಮುಖ ಮಾಡುವಂತೆ ಮಾಡಿತು. ಮನೆಯಲ್ಲೇ ಕುಳಿತು ಡಿಜಿಟಲ್ ಪಾವತಿಗಳ ಮೂಲಕ ಹಣ ಪಾವತಿ ಮಾಡೋರ ಸಂಖ್ಯೆ ಹೆಚ್ಚಿತು. ಹಾಗೆಯೇ ಶಾಪಿಂಗ್ ಮಾಡಲು ಮಾಲ್ ಅಥವಾ ಅಂಗಡಿಗಳಿಗೆ ಹೋಗೋ ಬದಲು ಜನರು ಇ-ಕಾಮರ್ಸ್ ತಾಣಗಳನ್ನೇ ನೆಚ್ಚಿಕೊಂಡರು. ಮನೆಯಲ್ಲೇ ಕುಳಿತು ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿದ್ರೆ, ಅವು ಮನೆ ಬಾಗಿಲಿಗೇ ಡೆಲಿವರಿ ಆಗೋದ್ರಿಂದ ಹೊರಹೋಗಬೇಕಾದ ಅಥವಾ ಬೇರೆ ಜನರೊಂದಿಗೆ ಸಂಪರ್ಕ ಬೆಳೆಸಬೇಕಾದ ಸಂದರ್ಭವಿರೋದಿಲ್ಲ. ಹೀಗಾಗಿ ಆನ್ಲೈನ್ ಶಾಪಿಂಗ್ ಹಾಗೂ ಡಿಜಿಟಲ್ ಪಾವತಿ 2021ರಲ್ಲಿ ಏರಿಕೆ ಕಂಡಿದೆ.