Liquor price hike in US: ಅಮೆರಿಕದಲ್ಲಿ ಹಣದುಬ್ಬರ ಮಾತ್ರವಲ್ಲ, ಮದ್ಯ ಬೆಲೆಯಲ್ಲೂ ಏರಿಕೆ!

By Suvarna News  |  First Published Dec 16, 2021, 4:40 PM IST

*ಅಮೆರಿಕದಲ್ಲಿ ದುಬಾರಿಯಾದ ಮದ್ಯ, ರಜೆ ಮೂಡ್ ನಲ್ಲಿರೋ ಜನರಿಗೆ ಶಾಕ್
*ಚಿಲ್ಲರೆ ಹಣದುಬ್ಬರ ಏರಿಕೆ, ಪೂರೈಕೆ ಸರಪಳಿಯಲ್ಲಿನ ಬಿಕ್ಕಟ್ಟು ಏರಿಕೆಗೆ ಕಾರಣ
*ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಮದ್ಯ ಬೆಲೆ ಹೆಚ್ಚಳ


ನ್ಯೂಯಾರ್ಕ್(ಡಿ.16): ಅಮೆರಿಕದಲ್ಲಿ(US) ಹಣದುಬ್ಬರ (inflation))ದರ ಮಾತ್ರವಲ್ಲ, ಎಣ್ಣೆ ಬೆಲೆಯೂ ಏರಿಕೆ ಕಾಣುತ್ತಿರೋದು ಮದ್ಯಪ್ರಿಯರ ನೆಮ್ಮದಿ ಕೆಡಿಸಿದೆ. ಅಮೆರಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ವೈನ್(Wine) ಹಾಗೂ ಇತರ ಮದ್ಯಗಳು(liquor) ದುಬಾರಿಯಾಗಿವೆ. ಕಳೆದ ವಾರ ಅಮೆರಿಕದ ಕಾರ್ಮಿಕ ಸಚಿವಾಲಯ(Labour Ministry) ಬಿಡುಗಡೆ ಮಾಡಿರೋ ಅಂಕಿಅಂಶಗಳ ಪ್ರಕಾರ ಅಮೆರಿಕದಲ್ಲಿ ವರ್ಷದಿಂದ ವರ್ಷಕ್ಕೆ ಮದ್ಯದ ದರದಲ್ಲಿ ಶೇ.1ರಷ್ಟು ಏರಿಕೆಯಾಗುತ್ತಿರೋದು ಕಂಡುಬಂದಿದೆ. 

ಬೆಲೆಯೇರಿಕೆಗೆ ಕಾರಣವೇನು?
ಮದ್ದ ತಯಾರಿಕಾ ಸಂಸ್ಥೆಗಳ ಪ್ರಕಾರ ಮದ್ಯದ ಬೆಲೆಯೇರಿಗೆ ಪೂರೈಕೆ ಸರಳಪಳಿಯಲ್ಲಿ ಪ್ರಸ್ತುತ ಎದುರಾಗಿರೋ ಬಿಕ್ಕಟ್ಟೇ ಕಾರಣ. ಅಮೆರಿಕದ ಆರ್ಥಿಕತೆಯ ಪೂರೈಕೆ ಸರಪಳಿಯಲ್ಲಿ ಕಳೆದ ಕೆಲವು ಸಮಯದಿಂದ ಬಿಕ್ಕಟ್ಟು ಕಾಣಿಸಿಕೊಂಡಿದ್ದು, ಇದರ ಪರಿಣಾಮವಾಗಿ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಮದ್ಯ ಉದ್ಯಮದ ಮೇಲೂ ಇದು ಪರಿಣಾಮ ಬೀರಿದ್ದು, ಮದ್ಯ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಪೂರೈಕೆಯಿಂದ ಹಿಡಿದು ಅವುಗಳನ್ನು ಬಾಟಲ್ ಗಳಲ್ಲಿ ತುಂಬಿಸಿ ಮಾರುಕಟ್ಟೆಗೆ ರವಾನೆ ಮಾಡೋ ತನಕ ಎಲ್ಲ ಪ್ರಕ್ರಿಯೆಗಳ ದರವೂ ಹಿಂದಿಗಿಂತ ಹೆಚ್ಚಿವೆ. ಹೀಗಾಗಿ ಮದ್ಯದ ಬೆಲೆಯಲ್ಲೂ ಹೆಚ್ಚಳವಾಗಿದೆ ಎಂದು ಮದ್ಯ ತಯಾರಿಕಾ ಕಂಪನಿಗಳು ಹೇಳಿವೆ.

Latest Videos

Works To Complete Before Dec.31: ಜೇಬಿನ ಮೇಲೆ ಪರಿಣಾಮ ಬೀರೋ ಈ 4 ಕೆಲಸಗಳನ್ನು ತಕ್ಷಣ ಮಾಡಿಬಿಡಿ

ಚಿಲ್ಲರೆ ಹಣದುಬ್ಬರ(Retail Inflation) ಏರಿಕೆ ಪರಿಣಾಮ
ಇನ್ನು ಅಮೆರಿಕದಲ್ಲಿ  ಕಳೆದ ಕೆಲವು ತಿಂಗಳಿಂದ ಚಿಲ್ಲರೆ ಹಣದುಬ್ಬರ (retail inflation) ದರ ಹೆಚ್ಚುತ್ತಿದೆ. ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.2ಕ್ಕೆ ಏರಿಕೆ ಕಂಡಿತ್ತು. ಇದು ಕಳೆದ 31 ವರ್ಷಗಳಲ್ಲಿ ಅತ್ಯಧಿಕ ಏರಿಕೆಯಾಗಿದೆ. ಇದು ಕೂಡ ಮದ್ಯ ಬೆಲೆ ಮೇಲೆ ಪರಿಣಾಮ ಬೀರಿದೆ. ಇನ್ನು ಡಿಸೆಂಬರ್ ತಿಂಗಳೆಂದ್ರೆ ಅದು ರಜೆಯ ಮಾಸ. ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಸುದೀರ್ಘ ರಜೆಗಳಿರೋ ಕಾರಣ ಈ ಅವಧಿಯಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಎಲ್ಲರೂ ಪಾರ್ಟಿ ಮಾಡೋ ಮೂಡ್ ನಲ್ಲಿರೋ ಕಾರಣ ವೈನ್ ಹಾಗೂ ಇತರ ಮದ್ಯ ಬ್ರಾಂಡ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ. ಹೀಗಾಗಿ ಬೇಡಿಕೆ ಹೆಚ್ಚಿರೋ ಸಮಯದಲ್ಲಿ ಬೆಲೆ ಕೂಡ ಹೆಚ್ಚಾಗೋದು ಸಹಜ.

ಬೆಲೆಯಲ್ಲಿ ಇನ್ನೂ ಏರಿಕೆ ಸಾಧ್ಯತೆ
'ನಿಮಗೆ ಸಾಧ್ಯವಿರೋವಾಗಲೇ ಮದ್ಯ ಖರೀದಿಸಿ. ಏಕೆಂದ್ರೆ ಮದ್ಯದ ಬೆಲೆಗಳು ಇನ್ನು ಮುಂದೆ ಏರಿಕೆ ಕಾಣೋ ಸಾಧ್ಯತೆಯಿದೆ' ಎಂದು ಕ್ಯಾಲಿಫೋರ್ನಿಯಾ ಆರ್ಟಿಸನಲ್ ಡಿಸ್ಟಿಲ್ಲರ್ಸ್ ಗಿಲ್ಡ್(California Artisanal Distillers Guild) ಉಪಾಧ್ಯಕ್ಷ ರಾಯನ್ ಫ್ರೈಸೆನ್(Ryan Friesen) ಲಾಸ್ ಎಂಜೆಲ್ಸ್ ಟೈಮ್ಸ್ (Los Angeles Times)ನೀಡಿರೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮದ್ಯ ಉತ್ಪಾದಕರು ಉತ್ಪಾದನೆಯ ವೆಚ್ಚದ ಆದಷ್ಟು ಹೊರೆಯನ್ನು ತಾವೇ ಭರಿಸೋ ಮೂಲಕ ಅದು ಗ್ರಾಹಕರಿಗೆ ವರ್ಗಾವಣೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ದೀರ್ಘಾವಧಿಯಲ್ಲಿ ಇದು ಸಾಧ್ಯವಾಗೋ ಮಾತಲ್ಲ ಎಂದು ಫ್ರೈಸೆನ್ ಹೇಳಿದ್ದಾರೆ. ಫ್ರೈಸೆನ್ ಬ್ಲಿಂಕಿಂಗ್ ಔಲ್ (Blinking Owl) ಮದ್ಯ ತಯಾರಿಕಾ ಸಂಸ್ಥೆ ಮುಖ್ಯಸ್ಥರಾಗಿದ್ದಾರೆ. ವೋಡ್ಕ( vodka),ವಿಸ್ಕಿ(whiskey) ಜಿನ್(gin) ಹಾಗೂ ಅಕ್ವವಿಟ್(aquavit) ಈ ಕಂಪನಿ ಜನಪ್ರಿಯ ಮದ್ಯ ಬ್ರಾಂಡ್ ಗಳಾಗಿವೆ.  

Money Transfer : ತಪ್ಪಾದ ಖಾತೆಗೆ ಹಣ ಹೋದ್ರೆ ವಾಪಸ್ ಪಡೆಯೋದು ಹೇಗೆ?

ಅಮೆರಿಕದಲ್ಲಿ ಪ್ರಸ್ತುತ ಚಿಲ್ಲರೆ ಹಣದುಬ್ಬರ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಅಮೆರಿಕದ ಫೆಡರಲ್ ಬ್ಯಾಂಕ್ (Federal Bank)ಆರ್ಥಿಕ ನೀತಿಗಳನ್ನು ಬಿಗಿಗೊಳಿಸಲು ಮುಂದಾಗಿದೆ. ಬಡ್ಡಿದರದಲ್ಲಿ ಹೆಚ್ಚಳ ಮಾಡೋ ಮೂಲಕ ಹಣದುಬ್ಬರವನ್ನು ಕಟ್ಟಿಹಾಕಲು ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಅದೇನೇ ಇರಲಿ ಈ ಬಾರಿ ಕ್ರಿಸ್ ಮಸ್ ರಜೆಯಲ್ಲಿ ಎಣ್ಣೆಯೊಂದಿಗೆ ಭರ್ಜರಿ ಪಾರ್ಟಿ ಮಾಡಬೇಕೆಂದು ಕಾದು ಕುಳಿತ ಅಮರಿಕದ ಜನರಿಗೆ ಮದ್ಯದ ಬೆಲೆಯೇರಿಕೆ ಶಾಕ್ ನೀಡಿರೋದಂತೂ ಸುಳ್ಳಲ್ಲ. 

click me!