ಎಲ್ಐಸಿ ಹೂಡಿಕೆದಾರರಿಗೆ ಶುಭ ಸುದ್ದಿ,, ಸಿಕ್ಕಾಪಟ್ಟೆ ಬೋನಸ್

First Published Jul 4, 2018, 3:21 PM IST
Highlights

ಷೇರು ಮಾರುಕಟ್ಟೆಯಲ್ಲಿ ಎಲ್ ಐಸಿ ಮಾಡಿದ್ದ ಹೂಡಿಕೆಗೆ ಅಪಾರ ಪ್ರಮಾಣದ ಲಾಭ ಬಂದಿದೆ. ಇದನ್ನು ಎಲ್ ಐಸಿ ತನ್ನ ಹೂಡಿಕೆದಾರಿಗೆ ನೀಡಲು ಮುಂದಾಗಿದೆ. ಹಾಗಾದರೆ ಲಾಭಾಂಶದ ಹಂಚಿಕೆ ಪರಿಮಾಣ ಏನು?

ನವದೆಹಲಿ(ಜು.4) ಸಾರ್ವಜನಿಕ ವಲಯದ ಅತಿದೊಡ್ಡ ವಿಮಾ ಸಂಸ್ಥೆ ಎಲ್ ಐಸಿ(ಲೈಫ್ ಇನ್ಸೂರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ) ತನ್ನ ಪಾಲಿಸಿದಾರರಿಗೆ ಹೆಚ್ಚಿನ ಬೋನಸ್ ನೀಡಲಿದೆ. ಷೇರು ಮಾರುಕಟ್ಟೆಯಲ್ಲಿ ದೊರೆತ ಲಾಭವನ್ನು ತನ್ನ ಹೂಡಿಕೆದಾರರಿಗೆ ನೀಡಲಿದೆ.

ಷೇರು ಮಾರಾಟದ ಲಾಭಾಂಶದಲ್ಲಿ ಎಲ್ ಐಸಿ ಶೇ. 33 ಹೆಚ್ಚಳ ಸಾಧಿಸಿದೆ. 2016-17 ರಲ್ಲಿ 21,503 ಕೋಟಿ ರೂ. ಇದ್ದ ಷೇರು ಮಾರಾಟದ ಲಾಭಾಂಶ 2017-18ರಲ್ಲಿ 28,527 ಕೋಟಿ ರೂ. ಗೆ ಏರಿಕೆಯಾಗಿದೆ

ಬಿಎಸ್ ಇ ಸೆನ್ಸೆಕ್ಸ್ ಶೇ.11.30 ರಿಟರ್ನ್ಸ್ ನೀಡಿದೆ. ಇದೇ ಕಾರಣಕ್ಕೆ ಷೇರುದಾದರರಿಗೆ ಶೇ. 67 ರಷ್ಟು ಬೋನಸ್ ನೀಡಲು ಮುಂದಾಗಿದೆ. ಷೇರು ಮಾರುಕಟ್ಟೆಗೆ ಸಂಬಂಧಿಸಿ ಹೇಳುವುದಾದರೆ ಎಲ್ ಐಸಿಗೆ ಅತಿ ಹೆಚ್ಚಿನ ಲಾಭ ಈಕ್ವಿಟಿ ಷೇರುಗಳಿಂದ ಬಂದಿದೆ.

click me!