ಯೂರೋಪ್ ಉಕ್ಕು ಉದ್ಯಮಕ್ಕೆ ಟಾಟಾ ಸ್ಟೀಲ್ ಬಾಸ್!

Published : Jul 01, 2018, 03:43 PM IST
ಯೂರೋಪ್ ಉಕ್ಕು ಉದ್ಯಮಕ್ಕೆ ಟಾಟಾ ಸ್ಟೀಲ್ ಬಾಸ್!

ಸಾರಾಂಶ

ಯೂರೋಪ್ ಉಕ್ಕು ಉದ್ಯಮಕ್ಕೆ ಟಾಟಾ ಸ್ಟೀಲ್ ಬಾಸ್ ಥೈಸೆನ್ಕ್ರಾಪ್​ ಜತೆ ಸಹಭಾಗಿತ್ವಕ್ಕೆ ಟಾಟಾ ಸ್ಟೀಲ್ ಮುಂದು ಯುರೋಪ್‌ನ 2ನೇ ಅತಿದೊಡ್ಡ ಉಕ್ಕು ಉತ್ಪಾದನೆ ಸಂಸ್ಥೆ ಶೇ. 50 ರಷ್ಟು ಷೇರುಗಳನ್ನು ಖರೀದಿಸಿದ ಟಾಟಾ ಸಂಸ್ಥೆ  

ಫ್ರಾಂಕ್ಫರ್ಟ್(ಜು.1):  ಪ್ರಖ್ಯಾತ ಉಕ್ಕು ತಯಾರಿಕಾ ಕಂಪನಿ ಟಾಟಾ ಸ್ಟೀಲ್, ಥೈಸೆನ್ಕ್ರಾಪ್​ ಜತೆ ಸಹಭಾಗಿತ್ವ ಹೊಂದಲು ಮೇಲ್ವಿಚಾರಣಾ ಮಂಡಳಿ ಅನುಮತಿ ನೀಡಿದೆ. ಈ ಮೂಲಕ ಯುರೋಪ್​ ಉಕ್ಕು ಕ್ಷೇತ್ರದಲ್ಲೀ ಭಾರೀ ಬದಲಾವಣೆಗೆ ಈ ಒಪ್ಪಂದ ನಾಂದಿ ಹಾಡಲಿದೆ.

2006ರಲ್ಲಿ ಮಿತ್ತಲ್  ಯುರೋಪ್​ನ ಅತಿ ದೊಡ್ಡ ಕಂಪನಿ ಆರ್ಸೆಲರ್ ಜೊತೆಗೆ ಜಂಟಿ ಉದ್ಯಮ ಆರಂಭಿಸುವ ಮೂಲಕ, ಯೂರೋಪ್​ನ ದೊಡ್ಡ ಉಕ್ಕು ಉದ್ಯಮವಾಗಿ ಹೊರಹೊಮ್ಮಿದ್ದರು. ಇದೀಗ ನಷ್ಟದ ಹಾದಿಯಲ್ಲಿದ್ದ  ಥೈಸೆನ್ಕ್ರಾಪ್ ಜತೆ ಟಾಟಾ ಸ್ಟೀಲ್ ಕೈ ಜೋಡಿಸಲು ಮುಂದಾಗಿದ್ದು, ಆ ಕಂಪನಿಯ ಶೇ 50ರಷ್ಟು ಷೇರುಗಳನ್ನು ಕೊಂಡುಕೊಳ್ಳುವ ಮೂಲಕ ಯುರೋಪಿನ 2ನೇ ಅತಿದೊಡ್ಡ ಉಕ್ಕು ಉತ್ಪಾದನೆ ಸಂಸ್ಥೆಯಾಗಿ ಹೊರಹೊಮ್ಮಲಿದೆ.  

ಈ ನಡುವೆ ಯುರೋಪ್​ನಿಂದ ಆಮದಾಗುವ ಉಕ್ಕಿನ ಮೇಲೆ ಅಮೆರಿಕ ಆಮದು ಸುಂಕ ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ಉಕ್ಕು ಉದ್ಯಮ ನಷ್ಟ ಅನುಭವಿಸುತ್ತಿದೆ. ಹೀಗಾಗಿ  ಥೈಸೆನ್ಕ್ರಾಪ್ ಕಂಪನಿ ಮಾರಾಟ ಮಾಡಲು ಮುಂದಾಗಿದೆ. ಟಾಟಾ ಸ್ಟೀಲ್​ ಶೇ 50 ರಷ್ಟು ಷೇರುಗಳನ್ನು ಖರೀದಿಸುವ ಮೂಲಕ ಯುರೋಪ್​ನ ದೈತ ಥೈಸೆನ್ಕ್ರಾಪ್​ ಜೊತೆ ಜಂಟಿ ಸಹಭಾಗಿತ್ವದಲ್ಲಿ ಉದ್ಯಮ ಮುಂದುವರೆಸಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!