‘ಹಾಲು ಮತ್ತು ಮರ್ಸಿಡಿಸ್ ಒಂದೇ ದರಕ್ಕೆ ಸಿಗಲು ಸಾಧ್ಯವೇ?’

Published : Jul 01, 2018, 04:18 PM IST
‘ಹಾಲು ಮತ್ತು ಮರ್ಸಿಡಿಸ್ ಒಂದೇ ದರಕ್ಕೆ ಸಿಗಲು ಸಾಧ್ಯವೇ?’

ಸಾರಾಂಶ

‘ಹಾಲು ಮತ್ತು ಮರ್ಸಿಡಿಸ್ ಒಂದೇ ದರಕ್ಕೆ ಸಿಗಲು ಸಾಧ್ಯವೇ?’ ಎಲ್ಲ ಉತ್ಪನ್ನಗಳಿಗೆ ಒಂದೇ ಸ್ಲ್ಯಾಬ್ ಸಾಧ್ಯವಿಲ್ಲ ಎಂದ ಪ್ರಧಾನಿ ಜಿಎಸ್‌ಟಿ ಟೀಕೆಗಳಿಗೆ ಪ್ರಧಾನಿ ಮೋದಿ ಪ್ರತ್ಯುತ್ತರ ಲಾಜಿಸ್ಟಿಕ್ ಇಂಡಸ್ಟ್ರಿ ಮೇಲೆ ಜಿಎಸ್‌ಟಿ ಧನಾತ್ಮಕ ಪರಿಣಾಮ  

ನವದೆಹಲಿ(ಜು.1): ಎಲ್ಲ ಉತ್ಪನ್ನಗಳನ್ನು ಒಂದೇ ತೆರಿಗೆ ಸ್ಲ್ಯಾಬ್ ನಡಿ ತರಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಮರ್ಸಿಡಿಸ್ ಬೆಂಝ್ ಕಾರು ಮತ್ತು ಹಾಲು ಒಂದೇ ದರಕ್ಕೆ ಸಿಗುವುದೇ ಎಂದು ಪ್ರಶ್ನಿಸಿರುವ ಪ್ರಧಾನಿ, ಜಿಎಸ್‌ಟಿ ಕುರಿತ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

 ಜಿಎಎಸ್‌ಟಿ ಜಾರಿಯಾಗಿ ಒಂದು ವರ್ಷದ ಸಂಭ್ರಮಾಚರಣೆ ವೇಳೆ, ಜಿಎಸ್ ಟಿ ಕುರಿತಂತೆ ವ್ಯಕ್ತವಾದ ಟೀಕೆಗಳಿಗೆ ಪ್ರಧಾನಿ ಮೋದಿ ಈ ರೀತಿ ಪ್ರಶ್ನಿಸಿದ್ದಾರೆ. ನಿಯತಕಾಲಿಕೆಯೊಂದಕ್ಕೆ ಸಂದರ್ಶನ ನೀಡಿದ ಮೋದಿ, ಒಂದು ಸ್ಲ್ಯಾಬ್‌ನಲ್ಲಿ ಶೂನ್ಯ ತೆರಿಗೆ ಇದ್ದರೆ ಆಹಾರ ವಸ್ತುಗಳಿಗೆಲ್ಲ ಅದೇ ಅನ್ವಯವೆಂದು ಅರ್ಥವಲ್ಲ. ಹಾಲು ಮತ್ತು ಮರ್ಸಿಡಿಸ್ ಒಂದೇ ದರಕ್ಕೆ ಸಿಗಲು ಸಾಧ್ಯವೇ, ಕಾಂಗ್ರೆಸ್ ಸೇರಿದಂತೆ ಹಲವರು ಒಂದೇ ತೆರಿಗೆ ದರ ಬೇಕು ಎನ್ನುತ್ತಿದ್ದಾರೆ ಎಂದು ಹೇಳಿದರು. 

ಜಿಎಸ್ ಟಿ ಜಾರಿಯಿಂದ ಲಾಜಿಸ್ಟಿಕ್ ಇಂಡಸ್ಟ್ರಿ ಮೇಲೆ ಬಹಳಷ್ಟು ಧನಾತ್ಮಕ ಪರಿಣಾಮ ಗೋಚರಿಸುತ್ತಿದೆ. ಚೆಕ್ ಪೋಸ್ಟ್ ವ್ಯವಸ್ಥೆ ರದ್ದುಗೊಳ್ಳುತ್ತಿದ್ದು ಇದರಿಂದ ಸಮಯ, ಸಂಪನ್ಮೂಲ, ಹಣ ಉಳಿತಾಯವಾಗುತ್ತದೆ. ಇದು ದೇಶದ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಪ್ರಧಾನಿ ವಿವರಣೆ ನೀಡಿದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!