LIC IPO:ಯಶಸ್ವಿಯಾಗಿ ಮುಗಿದ ಎಲ್ಐಸಿ ಐಪಿಒ; ಷೇರು ಹಂಚಿಕೆ ಯಾವಾಗ? ಒಬ್ಬರಿಗೆ ಎಷ್ಟು ಷೇರು ಸಿಗುತ್ತೆ?ಚೆಕ್ ಮಾಡೋದು ಹೇಗೆ?

By Suvarna News  |  First Published May 10, 2022, 2:06 PM IST

*ಭರ್ಜರಿ ಯಶಸ್ಸು ಕಂಡ ಎಲ್ಐಸಿ ಐಪಿಒಗೆ ನಿನ್ನೆ (ಮೇ 9) ತೆರೆ
*ಎಲ್ಲ ವರ್ಗದ ಹೂಡಿಕೆದಾರರನ್ನು ಸೆಳೆದ ಎಲ್ಐಸಿ ಐಪಿಒ
* 47.83 ಕೋಟಿ ಈಕ್ವಿಟಿ ಷೇರುಗಳಿಗೆ ಬಿಡ್ಡಿಂಗ್ ಸಲ್ಲಿಕೆ


ಮುಂಬೈ (ಮೇ 10): ಭಾರತೀಯ ಜೀವ ವಿಮಾ ನಿಗಮದ (LIC) ಐಪಿಒ (IPO) ಸೋಮವಾರ (ಮೇ 9) ಮುಕ್ತಾಯಗೊಂಡಿದ್ದು, ಸದ್ಯ ಎಲ್ಲರ ಕಣ್ಣು ಷೇರು ವಿತರಣೆ ಪ್ರಕ್ರಿಯೆ ಮೇಲೆ ನೆಟ್ಟಿದೆ. ಮೇ 4ರಿಂದ ಮೇ 9 ರ ತನಕ ಆರು ದಿನಗಳ ತನಕ ನಡೆದ ಎಲ್ಐಸಿ ಐಪಿಒಗೆ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 2.95 ಬಾರಿ ಷೇರುಗಳ ಚಂದಾದಾರಿಕೆ ಆಗಿದೆ. 16.2 ಕೋಟಿ ಈಕ್ವಿಟಿ ಷೇರುಗಳ ಗಾತ್ರದ ಎಲ್ಐಸಿ ಐಪಿಒಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗಿದ್ದು, 47.83 ಕೋಟಿ ಈಕ್ವಿಟಿ ಷೇರುಗಳಿಗೆ ಬಿಡ್ಡಿಂಗ್ ಸಲ್ಲಿಕೆಯಾಗಿವೆ. 

ಎಲ್ಐಸಿ ಪಾಲಿಸಿದಾರರಿಗೆ ಮೀಸಲಿಟ್ಟ ಷೇರುಗಳು  6.11 ಬಾರಿ ಸಬ್ ಸ್ಕ್ರೈಬ್ ಆಗಿವೆ. ಉದ್ಯೋಗಿಗಳ ಮೀಸಲು ಕೋಟಾದಡಿ 4.39 ಬಾರಿ ಹಾಗೂ ರಿಟೇಲ್ ಹೂಡಿಕೆದಾರರ ಕೋಟಾದಡಿ 1.99 ಬಾರಿ ಚಂದಾದಾರಿಕೆ ಆಗಿವೆ. ಇನ್ನು ಅರ್ಹ ಸಾಂಸ್ಥಿಕ ಹೂಡಿಕೆದಾರರಿಗೆ ಮೀಸಲಿಟ್ಟ ಷೇರುಗಳು 2.83 ಬಾರಿ ಬುಕ್ ಆಗಿದ್ದರೆ, ಸಾಂಸ್ಥಿಕವಲ್ಲದ ಹೂಡಿಕೆದಾರರ ವಿಭಾಗದಲ್ಲಿ 2.91 ಬಾರಿ ಸಬ್ ಸ್ಕ್ರೈಬ್ ಆಗಿವೆ.

Tap to resize

Latest Videos

LIC IPO: ಇಂದು ಹೂಡಿಕೆಗೆ ಕೊನೆಯ ಅವಕಾಶ; ಎಲ್ಐಸಿ ಷೇರಿನ GMP ಎಷ್ಟಿದೆ? ಮಾರುಕಟ್ಟೆ ತಜ್ಞರ ಸಲಹೆ ಏನು? ಇಲ್ಲಿದೆ ಮಾಹಿತಿ

ಷೇರು ವಿತರಣೆ, ಲಿಸ್ಟಿಂಗ್ ಯಾವಾಗ?
ಎಲ್ಐಸಿಯ ಷೇರುಗಳು ಬಿಎಸ್ ಇ (BSE) ಹಾಗೂ ಎನ್ಎಸ್ ಇಯಲ್ಲಿ ( NSE) ಮೇ 17ರಂದು ಲಿಸ್ಟಿಂಗ್ ಆಗಲಿದೆ. ಇನ್ನು ಎಲ್ಐಸಿ ಷೇರುಗಳನ್ನು ಡಿಮ್ಯಾಟ್ ಖಾತೆಗಳಿಗೆ ಮೇ 12ರಂದು ಹಂಚಿಕೆ ಮಾಡುವ ನಿರೀಕ್ಷೆಯಿದೆ.

ಷೇರು ಹಂಚಿಕೆ ಹೇಗೆ?
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಎಲ್ಐಸಿ ಐಪಿಒ ಅರ್ಜಿದಾರರಿಗೆ ಅವರು ಸಲ್ಲಿಕೆ ಮಾಡಿರುವ ವಿಭಾಗದ ಆಧಾರದಲ್ಲಿ ಷೇರುಗಳ ಹಂಚಿಕೆ ನಡೆಯಲಿದೆ ಎಂದು ಹೇಳಲಾಗಿದೆ. ರಿಟೇಲ್ ವಿಭಾಗದಲ್ಲಿ ಅರ್ಜಿ ಸಲ್ಲಿಕೆ ಮಾಡಿರುವ ಹೂಡಿಕೆದಾರರಿಗೆ ಲಾಟ್ಸ್ ಗಳನ್ನು ಡ್ರಾ ಮುಖಾಂತರ ಹಂಚಿಕೆ ಮಾಡಲಾಗುತ್ತದೆ. ಇನ್ನು ಎಲ್ಐಸಿ ಪಾಲಿಸಿದಾರರು ಹಾಗೂ ಉದ್ಯೋಗಿಗಳ ವಿಭಾಗದಲ್ಲಿ ಅರ್ಜಿ ಸಲ್ಲಿಕೆ ಮಾಡಿರೋರಿಗೆ ಅನುಪಾತದ ಆಧಾರದಲ್ಲಿ ಷೇರುಗಳ ಹಂಚಿಕೆ ನಡೆಯಲಿದೆ.

ಷೇರು ಹಂಚಿಕೆ ಚೆಕ್ ಮಾಡೋದು ಹೇಗೆ?
ಎಲ್ಐಸಿ ಐಪಿಒನಲ್ಲಿ ಅರ್ಜಿ ಸಲ್ಲಿಕೆ ಮಾಡಿರುವವರು ತಮ್ಮ ಡಿಮ್ಯಾಟ್ ಖಾತೆಗೆ ಎಲ್ಐಸಿ ಷೇರು ಹಂಚಿಕೆ ಆಗಿದೆಯೋ ಇಲ್ಲವೋ ಎನ್ನೋದನ್ನು ಎನ್ ಎಸ್ ಇ (  NSE) ಅಧಿಕೃತ ವೆಬ್ ಸೈಟ್ ನಲ್ಲಿ ಚೆಕ್ ಮಾಡಬಹುದು.
*ಮೊದಲಿಗೆ  NSE ಅಧಿಕೃತ ವೆಬ್ ಸೈಟ್  https://www.nseindia.com ಭೇಟಿ ನೀಡಿ.
*ಈಗ “equity” ಆಯ್ಕೆ ಮಾಡಿ. ಆ ಬಳಿಕ ಡ್ರಾಪ್ ಮೆನುವಿನಿಂದ  “LIC IPO” ಆಯ್ಕೆ ಮಾಡಿ.
*ನಿಮ್ಮ ಅರ್ಜಿ ಹಾಗೂ ಪ್ಯಾನ್ ಸಂಖ್ಯೆ ನಮೂದಿಸಿ. 
*ಪರಿಶೀಲನಾ (verification) ಪ್ರಕ್ರಿಯೆ ಪೂರ್ಣಗೊಳಿಸಿದ್ರೆ ನಿಮ್ಮ ಎಲ್ಐಸಿ ಐಪಿಒ ಷೇರು ಹಂಚಿಕೆ ವಿವರ ಲಭಿಸುತ್ತದೆ.
ಬಿಎಸ್ ಇಯಲ್ಲಿ (BSE) ಎಲ್ಐಸಿ ಐಪಿಒ ಷೇರು ಹಂಚಿಕೆ ಚೆಕ್ ಮಾಡಲು BSE ಅಧಿಕೃತ ವೆಬ್ ಸೈಟ್ https://www.bseindia.com ಭೇಟಿ ನೀಡಿ. ಮೇಲೆ ವಿವರಿಸಿದ ಹಂತಗಳನ್ನೇ ಇಲ್ಲೂ ಅನುಸರಿಸಿ. 

IPO:ಎಲ್ಐಸಿ ಐಪಿಒ ಬಳಿಕ ಇನ್ನೊಂದು ಇನ್ಯೂರೆನ್ಸ್ ಕಂಪನಿ ಖಾಸಗೀಕರಣಕ್ಕೆ ಸರ್ಕಾರದ ಚಿಂತನೆ?

ಎಲ್ಐಸಿ GMP ಎಷ್ಟಿದೆ?
ಸೋಮವಾರ ಎಲ್ ಐಸಿ ಐಪಿಒ ಗ್ರೇ ಮಾರುಕಟ್ಟೆ ಪ್ರೀಮಿಯಂನಲ್ಲಿ (GMP) ಇಳಿಕೆ ಕಂಡುಬಂದಿತ್ತು. ಎಲ್ಐಸಿಯ ಪ್ರತಿ ಷೇರಿಗೆ ಗ್ರೇ ಮಾರುಕಟ್ಟೆ ಪ್ರೀಮಿಯಂ 40ರೂ. ಆಗಿತ್ತು. ಎಲ್ಐಸಿ ಐಪಿಒ ಆರಂಭದ ದಿನ ಎಲ್ಐಸಿ ಷೇರಿನ ಜಿಎಂಪಿ 85ರೂ. ಇದ್ದು, ಆ ಬಳಿಕ ಇಳಿಕೆ ಕಂಡಿದೆ.  ಗ್ರೇ ಮಾರುಕಟ್ಟೆಯಲ್ಲಿ 92ರೂ. ತನಕ ಏರಿಕೆ ಕಂಡ ಬಳಿಕ ಎಲ್ಐಸಿ  ಷೇರುಗಳ ಪ್ರೀಮಿಯಂ ದರ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಟೆಕ್ ಷೇರು ಮಾರುಕಟ್ಟೆ ದುರ್ಬಲಗೊಳ್ಳುತ್ತಿದೆ ಎಂಬ ಭಾವನೆಯೇ ಈ ಕುಸಿತಕ್ಕೆ ಕಾರಣ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದರು. 
 

click me!