
ನವದೆಹಲಿ (ಮೇ.07): ಇದೇ ತಿಂಗಳ 10ನೇ ತಾರೀಖಿನಿಂದ ಸರ್ಕಾರಿ ಸ್ವಾಮ್ಯದ ಎಲ್‌ಐಸಿ ಸಂಸ್ಥೆ ವಾರಕ್ಕೆ 5 ದಿನಗಳು ಮಾತ್ರವೇ ಕಾರ‍್ಯ ನಿರ್ವಹಿಸಲಿದೆ.
ಭಾರತೀಯ ಜೀವ ವಿಮಾ ಕಂಪನಿಗೆ ಶನಿವಾರವೂ ರಜೆ ಇರಲಿದೆ ಎಂದು 2021ರ ಏ.15ರಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
LIC ಸಿಬ್ಬಂದಿ ವೇತನ ಶೇ.25ರಷ್ಟು ಏರಿಕೆ, ವಾರದಲ್ಲಿ 5 ದಿನ ಕೆಲಸ!
ಈ ಹಿನ್ನೆಲೆಯಲ್ಲಿ ಮೇ 10ರ ಬಳಿಕ ದೇಶದಲ್ಲಿರುವ ಎಲ್‌ಐಸಿ ಕಚೇರಿಗಳು ಶನಿವಾರ ತೆರೆಯುವುದಿಲ್ಲ ಎಂದು ವಿಮೆದಾರರು ಮತ್ತು ಇತರರಿಗೆ ಎಲ್‌ಐಸಿ ಮಾಹಿತಿ ನೀಡಿದೆ. ಪ್ರತೀ ನಿತ್ಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಎಲ್‌ಐಸಿ ಕಂಪನಿಗಳು ಕಾರ‍್ಯ ನಿರ್ವಹಿಸಲಿವೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.