ಕೊರೋನಾ ಹಾವಳಿ ಮಧ್ಯೆ ಹೆಚ್ಚುತ್ತಿದೆ ಆನ್‌ಲೈನ್ ಖರೀದಿ| ಆನ್‌ಲೈನ್ ಖರೀದಿ ಇಷ್ಟೊಂದು ತಡೆವಾಗ್ತಿರೋದೇಕೆ?| ಆರ್ಡರ್ ಮಾಡುವ ವೇಳೆ ಈ ವಿಚಾರ ಗಮನದಲ್ಲಿಡಿ
ನವದೆಹಲಿ(ಮೇ.06): ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಿರುವ ಬೆನ್ನಲ್ಲೇ ದಿನಸಿ, ತರಕಾರಿ ಮೊದಲಾದ ಆಹಾರ ಪದಾರ್ಥಗಳ ಆನ್‌ಲೈನ್ ಡೆಲಿವರಿ ಮಾಡುವ ಅಮೆಜಾನ್, ಫ್ಲಿಪ್‌ಕಾರ್ಟ್, ಫ್ಲಿಪ್‌ಕಾರ್ಟ್, ಗ್ರೋಫರ್ಸ್ ಜನರ ಬೇಡಿಕೆಗಳಿಗೆ ಸ್ಪಂದಿಸಲು ಎಲ್ಲಾ ಯತ್ನಗಳನ್ನು ನಡೆಸುತ್ತಿವೆ. ಆದರೆ ಏಕಾಏಕಿ ಹೆಚ್ಚಿರುವ ಆರ್ಡರ್‌ಗಳಿಂದ ಇಲ್ಲೂ ನೀವು ಸರತಿ ಸಾಲಿನಲ್ಲಿ ಕಾಯಬೇಕಿದೆ.
ಹೌದು ಆನ್‌ಲೈನ್ ದಿನಸಿ ಹಾಗೂ ಆಹಾರ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿದೆ. ಏಕಾಏಕಿ ಹೆಚ್ಚಿದ ಬೇಡಿಕೆಯಿಂದ ಈ ದಿನಸಿ ಪದಾರ್ಥಗಳ ಡೆಲಿವರಿಗೆ ಮೂರರಿಂದ ಏಳು ದಿನ ತಗುಲುತ್ತಿದೆ.
6 ಲಕ್ಷ ಮಂದಿ ಹೊಟ್ಟೆ ತುಂಬಿಸಲು 120 ದಿನದಲ್ಲಿ 2 ಕೋಟಿ ರೂ. ಖರ್ಚು ಮಾಡಿದ ಕುಟುಂಬ!
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಗ್ ಬಾಸ್ಕೆಟ್ ದೇಶಾದ್ಯಂತ ಕಠಿಣ ನಿಯಮಗಳಿಂದಾಗಿ ಜನರ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಹೀಗಾಗಿ ನಿತ್ಯವೂ ಬರುವ ಆನ್‌ಲೈನ್ ಆರ್ಡರ್‌ಗಳ ಸಂಖ್ಯೆ ಭಾರೀ ಏರಿಕೆಯಾಗಿದೆ. ಇದಕ್ಕಾ ಸ್ಲಾಟ್‌ಗಳು ಇವೆ. ಈ ಆರ್ಡರ್‌ಗಳನ್ನು ಎರಡು ಮೂರು ದಿನಗಳೊಳಗೆ ಪೂರೈಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದಿದ್ದಾರೆ.
ಜನರಿಗೆ ಸೂಕ್ತ ಸಮಯದಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಪೂರೈಸುವ ಸಲುವಾಗಿ ಎಲ್ಲಾ ವಸ್ತುಗಳನ್ನು ಒಟ್ಟಾಗಿ ಒಂದೇ ಸಮಯದಲ್ಲಿ ಆರ್ಡರ್ ಮಾಡಲು ಮನವಿ ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ಟ್ರಿಪ್‌ಗಳ ಸಂಖ್ಯೆ ಕಡಿಮೆಯಾಗುವುದರೊಂದಿಗೆ ಸಮಯದ ಉಳಿತಾಯವೂ ಆಗುತ್ತದೆ ಎಂದಿದ್ದಾರೆ.
ಇದುಇ ಕೇವಲ ಬಿಗ್ ಬಾಸ್ಕೆಟ್ ಕಥೆಯಲ್ಲ. ಅತ್ತ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಪರಿಸ್ಥಿತಿಯೂ ಇದರಿಂದ ಹೊರತಾಗಿಲ್ಲ. ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಈ ಕಂಪನಿಗಳು ಹೆಚ್ಚುವರಿ ಸಿಬ್ಬಂದಿಯನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಲಭ್ಯವಾದ ವರದಿಯನ್ವಯ ಕಳೆದ ತಿಂಗಳಿನಿಂದ ಆನ್‌ಲೈನ್ ಖರೀದಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona