ಮನೆ ಮುಂದೆ ನಡೆದ ಗಲಾಟೆ ವಿಷ್ಯಕ್ಕೆ ಸದ್ಯ ಸುದ್ದಿಯಲ್ಲಿರುವ ಕುಮಾರ್ ವಿಶ್ವಾಸ್, ಅದ್ಧೂರಿಯಾಗಿ ತಮ್ಮ ಮಗಳ ಮದುವೆ ಮುಗಿಸಿದ್ದಾರೆ. ಅವರ ಅಳಿಯ ಯಾರು? ಅವರ ಸಂಪಾದನೆ ಎಷ್ಟು ಎಂಬ ಮಾಹಿತಿ ಇಲ್ಲಿದೆ.
ಪ್ರಸಿದ್ಧ ಕವಿ ಹಾಗೂ ರಾಜಕಾರಣಿ ಕುಮಾರ್ ವಿಶ್ವಾಸ್ (Kumar Vishwas) ಸದ್ಯ ಸುದ್ದಿಯಲ್ಲಿದ್ದಾರೆ. ಒಂದು ಮಗಳ ಅದ್ಧೂರಿ ಮದುವೆಯಾದ್ರೆ ಇನ್ನೊಂದು ಮನೆ ಮುಂದೆ ನಡೆದ ಜಗಳ. ಕೆಲ ದಿನಗಳ ಹಿಂದಷ್ಟೆ ಮಗಳ ಮದುವೆಯನ್ನು ಕುಮಾರ್ ವಿಶ್ವಾಸ್ ಮಾಡಿ ಮುಗಿಸಿದ್ದಾರೆ. ಮಾರ್ಚ್ 6ರಂದು ಅದ್ಧೂರಿಯಾಗಿ ಮದುವೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಮದುವೆ ವೈಭವ ಸಾಕಷ್ಟು ಸುದ್ದಿಯಲ್ಲಿದೆ. ಕುಮಾರ್ ವಿಶ್ವಾಸ್ ಮಗಳು ಅಗ್ರತಾ ಶರ್ಮಾ (Agratha Sharma), ಪವಿತ್ರ ಖಂಡೇಲ್ವಾಲ್ (Pavitra Khandelwal) ಜೊತೆ ಸಪ್ತಪದಿ ತುಳಿದಿದ್ದಾರೆ. ಅಗ್ರತಾ ಶರ್ಮಾ, ಮದುವೆ ಸಮಾರಂಭವು ಮೂರು ದಿನಗಳ ಕಾಲ ನಡೆದಿದೆ. ನಂತ್ರ ದೆಹಲಿಯಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಪ್ರಮುಖ ನಾಯಕರು ಸಹ ಆರತಕ್ಷತೆಯಲ್ಲಿ ಭಾಗವಹಿಸಿದ್ದರು. ಮದುವೆ ನಂತ್ರ ಕುಮಾರ್ ವಿಶ್ವಾಸ್ ಮಗಳನ್ನು ಕೈ ಹಿಡಿದ ಪವಿತ್ರ ಖಂಡೇಲ್ವಾಲ್ ಬಗ್ಗೆ ಚರ್ಚೆ ಶುರುವಾಗಿದೆ. ಕುಮಾರ್ ವಿಶ್ವಾಸ್, ತಮ್ಮ ಮಗಳನ್ನು ಯಾರಿಗೆ ಧಾರೆ ಎರೆದಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಕುಮಾರ್ ವಿಶ್ವಾಸ್, ತಮ್ಮ ಮಗಳನ್ನು ಹಾಲು ಮಾರಾಟಗಾರನಿಗೆ ಮದುವೆ ಮಾಡಿದ್ದಾರೆ.
ಪವಿತ್ರ ಖಂಡೇಲ್ವಾಲ್ ಯಾರು? : ಪವಿತ್ರ ಖಂಡೇಲ್ವಾಲ್, ಹಾಲು ಮಾರಾಟಗಾರರು. ಅವರು ವೃತ್ತಿಯಲ್ಲಿ ಬ್ಯುಸಿನೆಸ್ ಮೆನ್. ಡೈರಿ ಉತ್ಪನ್ನ ಬ್ಯುಸಿನೆಸ್ ನಡೆಸುತ್ತಿದ್ದಾರೆ ಪವಿತ್ರ ಖಂಡೇಲ್ವಾಲ್. ಪವಿತ್ರ ಖಂಡೇಲ್ವಾಲ್ ಅವರ ಕಂಪನಿಯ ಹೆಸರು 'ಆಲ್ಟ್ ಫುಡ್ಸ್'. ಆದಾಗ್ಯೂ, ಅವರ ಬ್ರಾಂಡ್ ಹೆಸರು ಬೆಟರ್ ಬೆಟ್.
ವರ್ಷ ಪೂರೈಸಿದ ಕುಪ್ಪಂಡ ಜ್ಯುವೆಲರ್ಸ್, ಗ್ರಾಹಕರಿಗೆ ಗಿಫ್ಟ್ ನೀಡ್ತಿದ್ದಾರೆ ತನಿಷಾ
ಪವಿತ್ರ ಖಂಡೇಲ್ವಾಲ್ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಅವರು ಹೆಚ್ಚು ಫಾಲೋವರ್ಸ್ ಕೂಡ ಹೊಂದಿಲ್ಲ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೇವಲ 297 ಫಾಲೋವರ್ಸ್‌ಗಳಿದ್ದಾರೆ ಮತ್ತು ಅವರು 306 ಜನರನ್ನು ಫಾಲೋ ಮಾಡ್ತಿದ್ದಾರೆ. ಇನ್ಸ್ಟಾ ಬಯೋದಲ್ಲಿ ಪವಿತ್ರ ಖಂಡೇಲ್ವಾಲ್ ತಾವು ಹಾಲು ಮಾರಾಟಗಾರ ಎಂದೇ ಬರೆದುಕೊಂಡಿದ್ದಾರೆ.
ಪವಿತ್ರ ಖಂಡೇಲ್ವಾಲ್ ಕಂಪನಿ ಹಾಲಿನ ಬೆಲೆ ಎಷ್ಟು? : ಪವಿತ್ರ ಖಂಡೇಲ್ವಾವ್ ಬೆಟರ್ ಬೆಟ್ ಹೆಸರಿನ ಹಾಲನ್ನು ಮಾರಾಟ ಮಾಡ್ತಿದ್ದಾರೆ. ಬೆಟರ್ ಬೆಟ್ ಲ್ಯಾಕ್ಟೋಸ್ ಮುಕ್ತ ಹಾಲು. ಈ ಹಾಲಿನ ಬೆಲೆ ಲೀಟರ್‌ಗೆ 200 ರೂಪಾಯಿ. ಬೆಟರ್ ಬೆಟ್‌ನ ಸುವಾಸನೆಯುಕ್ತ ಹಾಲನ್ನು ಖರೀದಿ ಮಾಡಿದ್ರೆ ಅದರ ಬೆಲೆ ಲೀಟರ್‌ಗೆ 250 ರೂಪಾಯಿ. ಬೆಟರ್ ಬೆಟ್ ಬರೀ ಹಾಲನ್ನು ಮಾತ್ರವಲ್ಲ ಕಾಫಿ, ಟೀ ಮತ್ತು ಎಳೆ ನೀರನ್ನು ಕೂಡ ಮಾರಾಟ ಮಾಡುತ್ತದೆ. ಅವರ ಕಂಪನಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡ್ತಿದೆ. ಅಗ್ರತಾ ಶರ್ಮಾ ಮತ್ತು ಪವಿತ್ರ ಇಬ್ಬರೂ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದರು. ಪವಿತ್ರ ಇಂಗ್ಲೆಂಡ್‌ನ ವಾರ್ವಿಕ್ ಬಿಸಿನೆಸ್ ಸ್ಕೂಲ್ ನಲ್ಲಿ ಅಧ್ಯಯನ ಮಾಡಿದರೆ, ಅಗ್ರತಾ ಶರ್ಮಾ ಬಿ.ಎಸ್ಸಿ. ಪದವಿ ಪಡೆದಿದ್ದಾರೆ. ಕುಮಾರ್ ವಿಶ್ವಾಸ್ ಅವರಿಗೆ ಅಗ್ರತಾ ಮತ್ತು ಕುಹು ಶರ್ಮಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಗ್ರತಾ ಶರ್ಮಾ ಫ್ಯಾಷನ್ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಡಿಜಿಟಲ್ ಖಿಡ್ಕಿ ಎಂಬ ಕಂಪನಿಯ ನಿರ್ದೇಶಕರಾಗಿದ್ದಾರೆ.
ಬ್ಯಾಂಕ್ ಉದ್ಯೋಗ ಬಿಟ್ಟು, ಸ್ವಂತ ಬ್ಯುಸಿನೆಸ್‌ನಿಂದ ತಿಂಗಳಿಗೆ 5 ಲಕ್ಷ ಸಂಪಾದಿಸುತ್ತಿರೋ ಮಹಿಳೆ
ಕುಮಾರ್ ವಿಶ್ವಾಸ್ ಸಂಭಾವನೆ ಎಷ್ಟು? : ಕವನ ವಾಚಕ ಕುಮಾರ್ ವಿಶ್ವಾಸ್, ಕಾರ್ಯಕ್ರಮದ ಸ್ವರೂಪ, ಸ್ಥಳ ಮತ್ತು ಸಂಘಟಕರ ಪ್ರಕಾರ ಸಂಭಾವನೆ ಪಡೆಯುತ್ತಾರೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಛತ್ತೀಸ್‌ಗಢದ ರಾಯಗಢದಲ್ಲಿ ನಡೆದ ರಾಮಾಯಣ ಮಹೋತ್ಸವದಲ್ಲಿ ಕಾವ್ಯ ವಾಚನಕ್ಕಾಗಿ ಅವರು 60 ಲಕ್ಷ ರೂಪಾಯಿ ಶುಲ್ಕ ವಿಧಿಸಿದ್ದರು. ಸಾಮಾನ್ಯವಾಗಿ, ಅವರು 15-20 ನಿಮಿಷಗಳ ಕಾವ್ಯ ವಾಚನಕ್ಕೆ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ.