ಎಬಿಸಿ ಅಧ್ಯಕ್ಷರಾಗಿ ಕರುಣೇಶ್ ಬಜಾಜ್ ಆಯ್ಕೆ

Published : Sep 03, 2025, 09:00 AM IST
Karunesh Bajaj

ಸಾರಾಂಶ

ಐಟಿಸಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಕರುಣೇಶ್ ಬಜಾಜ್ ಅವರನ್ನು 2025-26ನೇ ಸಾಲಿನ ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್ (ಎಬಿಸಿ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮೋಹಿತ್ ಜೈನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೊಸ ನಿರ್ವಹಣಾ ಮಂಡಳಿಯನ್ನು ಸಹ ರಚಿಸಲಾಗಿದೆ.

ಮುಂಬೈ: ಐಟಿಸಿ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ರಫ್ತುಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಕರುಣೇಶ್ ಬಜಾಜ್ ಅವರನ್ನು 2025-2026ನೇ ಸಾಲಿಗೆ ಮುದ್ರಣ ಮಾಧ್ಯಮಗಳ ಪ್ರಮಾಣೀಕರಣ ಮತ್ತು ಲೆಕ್ಕಪರಿಶೋಧನಾ ಸಂಸ್ಥೆಯಾದ ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್‌ನ (ಎಬಿಸಿ) ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಬೆನೆಟ್ ಕೋಲ್ಮನ್ & ಕಂ. ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಕಾಶನ) ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮೋಹಿತ್ ಜೈನ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

2026 ನೇ ಸಾಲಿನ ನಿರ್ವಹಣಾ ಮಂಡಳಿಯ ಸದಸ್ಯರು

ಅನಿರುದ್ಧ ಹಾಲ್ದಾರ್‌, ಪಾರ್ಥೋ ಬ್ಯಾನರ್ಜಿ, ಧ್ರುವ ಮುಖರ್ಜಿ, ರಿಯಾಜ್ ಮ್ಯಾಥ್ಯೂ, ಗಿರೀಶ್ ಅಗರ್ವಾಲ್, ಶೈಲೇಶ್ ಗುಪ್ತಾ, ಕರಣ್ ದರ್ಬಾ, ಪ್ರತಾಪ್ ಜಿ. ಪವಾರ್, ಆದಿಮೂಲಂ, ವಿಕ್ರಮ್ ಸಖುಜಾ, ಶ್ರೀನಿವಾಸನ್ ಕೆ. ಸ್ವಾಮಿ, ಪ್ರಶಾಂತ್ ಕುಮಾರ್, ವೈಶಾಲಿ ವರ್ಮಾ, ಸೇಜಲ್ ಶಾ ಹಾಗೂ ಆದಿಲ್ ಕಸಬ್ 2025-2026 ನೇ ಸಾಲಿನ ನಿರ್ವಹಣಾ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಗ್ರಾಹಕರಿಗೆ ಮುಕ್ತವಾದ ಆಪಲ್‌ ಹೆಬ್ಬಾಳ: ದಕ್ಷಿಣ ಭಾರತದ ಮೊದಲ ಆಪಲ್‌ ಸ್ಟೋರ್‌, ಕನ್ನಡದಲ್ಲೂ ಸಿಗಲಿದೆ ಮಾಹಿತಿ

3 ದಶಕಗಳ ಅನುಭವಿ ಅಧ್ಯಕ್ಷರಾಗಿ ಆಯ್ಕೆ

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕರುಣೇಶ್ ಬಜಾಜ್ ಗ್ರಾಹಕ ಸರಕುಗಳು ಮತ್ತು ಚಿಲ್ಲರೆ ವ್ಯಾಪಾರ ವಲಯಗಳಲ್ಲಿ ಬ್ರ್ಯಾಂಡ್ ನಿರ್ಮಾಣ, ಮಾರ್ಕೆಟಿಂಗ್ ತಂತ್ರ ಮತ್ತು ನಾಯಕತ್ವ ಕ್ಷೇತ್ರಗಳಲ್ಲಿ 3 ದಶಕಗಳಿಗೂ ಅಧಿಕ ಅನುಭವ ಹೊಂದಿದ್ದಾರೆ. ಪ್ರಸ್ತುತ ಐಟಿಸಿ ಲಿಮಿಟೆಡ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 25ಕ್ಕೂ ಅಧಿಕ ವರ್ಷಗಳಿಂದ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಹಲವು ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹೊಟ್ಟೆ ಉರಿಸಿದ ರಷ್ಯಾ; ಇಬ್ಬರ ಜಗಳದಲ್ಲಿ ಭಾರತಕ್ಕೆ ಸಿಕ್ತು ಬಂಪರ್ ಲಾ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!