ಬೆಂಗಳೂರಿನ TCS ಕಚೇರಿ ಬಾಡಿಗೆ ತಿಂಗಳಿಗೆ 9.31 ಕೋಟಿ ರೂ; ಅಡ್ವಾನ್ಸ್ ಕೊಟ್ಟಿದ್ದೆಷ್ಟು? ಒಪ್ಪಂದ ಷರತ್ತುಗಳೇನು?

Published : Sep 02, 2025, 10:49 AM IST
tcs

ಸಾರಾಂಶ

ಬೆಂಗಳೂರಿನಲ್ಲಿ ಟಿಸಿಎಸ್ ತನ್ನ ಹೊಸ ಕಚೇರಿಗಾಗಿ ಭಾರಿ ಮೊತ್ತದ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. 15 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ಒಪ್ಪಂದದ ನಿಯಮಗಳು ಮತ್ತು ಷರತ್ತುಗಳೇನು ಎಂಬುದು ಕುತೂಹಲ ಮೂಡಿಸಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ ಕಚೇರಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಮಾಸಿಕ 9.31 ಕೋಟಿ ರೂಪಾಯಿ ಪಾವತಿಸಲಿದೆ. 15 ವರ್ಷಕ್ಕೆ ಟಿಸಿಎಸ್ ಈ ಒಪ್ಪಂದ ಮಾಡಿಕೊಂಡಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ 360 ಬ್ಯುಸಿನೆಸ್ ಪಾರ್ಕ್‌ನಲ್ಲಿ ಟಿಸಿಎಸ್ ಕಚೇರಿ ಇರಲಿದೆ. 1.4 ಮಿಲಿಯನ್ ಚದರ ಅಡಿ ವಿಸ್ತೀರ್ಣವುಳ್ಳ ಕಟ್ಟಡ ಇದಾಗಿದೆ. ಈ ಬೃಹತ್ ಮೊತ್ತದ ಒಪ್ಪಂದಕ್ಕೆ ಟಿಸಿಎಸ್ ಸಹಿ ಹಾಕಿಕೊಂಡಿದೆ. TCS ಪ್ರತಿ ಚದರ ಅಡಿಗೆ 66.5 ರೂ.ಗಳಂತೆ ಮಾಸಿಕ 9.31 ಕೋಟಿ ರೂ.ಗಳ ಬಾಡಿಗೆಯನ್ನು ಪಾವತಿಸುತ್ತಿದೆ. ಈ ಒಪ್ಪಂದಕ್ಕೆ 112 ಕೋಟಿ ರೂ.ಗಳ ಭದ್ರತಾ ಠೇವಣಿಯನ್ನು ಟಿಸಿಎಸ್ ಇರಿಸಿದೆ.

ಟಿಸಿಎಸ್ 360 ಬಿಸಿನೆಸ್ ಪಾರ್ಕ್‌ನಲ್ಲಿ ಕ್ರಮವಾಗಿ 6.8 ಲಕ್ಷ ಚದರ ಅಡಿ ಮತ್ತು 7.2 ಲಕ್ಷ ಚದರ ಅಡಿ ವಿಸ್ತೀರ್ಣದ 5ಎ ಮತ್ತು 5ಬಿ ಸ್ಥಳವನ್ನು ಪಡೆದುಕೊಳ್ಳಲಿದೆ. ಟಿಸಿಎಸ್ ಲ್ಯಾಬ್‌ಜೋನ್ ಎಲೆಕ್ಟ್ರಾನಿಕ್ಸ್ ಸಿಟಿ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಬಾಡಿಗೆ ಒಪ್ಪಂದದ ಪ್ರಮುಖ ಅಂಶಗಳು ಹೀಗಿವೆ

  • ಈ ಒಪ್ಪಂದ 15 ವರ್ಷಗಳ ಅವಧಿಯನ್ನು ಹೊಂದಿದೆ. ಒಟ್ಟು ಎರಡು ಹಂತಗಳಲ್ಲಿ ಈ ಒಪ್ಪಂದ ಇರಲಿದೆ
  • ಹಂತ 1: ಗ್ರೌಂಡ್ ಫ್ಲೋರ್‌ನಿಂದ 7ನೇ ಮಹಡಿವರೆಗೆ ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ
  • ಹಂತ 2: 8-13 ಮಹಡಿಗಳಿಗೆ ಒಪ್ಪಂದ ಆಗಸ್ಟ್ 1, 2026 ರಿಂದ ಜಾರಿಗೆ ಬರುತ್ತದೆ.
  • ಮೂರು ವರ್ಷಗಳಿಗೊಮ್ಮೆ ಶೇ.12ರಷ್ಟು ಬಾಡಿಗೆ ಏರಿಕೆಯಾಗಲಿದೆ.
  • ಈ ವೆಚ್ಚವು ಒಟ್ಟು ಅಂದಾಜು 2,130 ಕೋಟಿ ರೂಪಾಯಿ ಆಗಲಿದೆ

ರಾಜಧಾನಿ ಬೆಂಗಳೂರು ಜಗತ್ತಿನ ಪ್ರಮುಖ ಐಟಿ ಕೇಂದ್ರಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಪ್ರಮುಖ ಮತ್ತು ದೊಡ್ಡ ಪ್ರಮಾಣದಲ್ಲಿ ಕಚೇರಿ ಆರಂಭಕ್ಕೆ ಟಿಸಿಎಸ್ ಮುಂದಾಗಿದೆ. ಐಟಿ ಕೇಂದ್ರವಾಗಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಟಿಸಿಎಸ್ ಮುಂದಾಗಿದೆ. ಇದಕ್ಕೂ ಮೊದಲು ಟಿಸಿಎಸ್ ಸತ್ವ–ದರ್ಶಿತ ಸದರ್ನ್ ಇಂಡಿಯಾ ಹ್ಯಾಪಿ ಹೋಮ್ಸ್‌ನಿಂದ 1.4–1.6 ಮಿಲಿಯನ್ ಚದರ ಅಡಿ ಸ್ಥಳವನ್ನು 2,250 ಕೋಟಿ ರೂ.ಗಳಿಗೆ ಸ್ವಾಧೀನಪಡಿಸಿಕೊಂಡಿತ್ತು. ಟಿಸಿಎಚ್ ದೈತ್ಯ ಟಿಆರ್‌ಐಎಲ್‌ನಿಂದ 3.2 ಮಿಲಿಯನ್ ಚದರ ಅಡಿಗಳನ್ನು 1,625 ಕೋಟಿ ರೂ.ಗಳಿಗೆ ಸ್ವಾಧೀನಪಡಿಸಿಕೊಂಡಿತ್ತು. ಏಕಕಾಲದಲ್ಲಿ 25 ಸಾವಿರ ಸೀಟ್‌ ಸೇರಿಸುವ ನಿರೀಕ್ಷೆಗಳಿವೆ.

ದಕ್ಷಿಣ ಭಾರತದಲ್ಲಿ ಟಿಸಿಎಸ್ ವಿಸ್ತರಣೆ

ಟಿಸಿಎಸ್ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಾಗಿದೆ. ಈ ಒಪ್ಪಂದ 2025 ರಲ್ಲಿ ಘೋಷಿಸಲಾದ ಟಿಸಿಎಸ್‌ನ 4,500 ಕೋಟಿ ರೂಪಾಯಿ ಹೂಡಿಕೆಯ ಒಂದು ಭಾಗವಾಗಿದೆ. ಕೊಯಮತ್ತೂರು, ಹೈದರಾಬಾದ್, ವಿಶಾಖಪಟ್ಟಣಂನಂತಹ ನಗರಗಳಲ್ಲಿ 21.6 ಎಕರೆಗಳನ್ನು ರಾಜ್ಯ ಸರ್ಕಾರದಿಂದ 99 ವರ್ಷಗಳ ಗುತ್ತಿಗೆಗೆ ಪಡೆದುಕೊಂಡಿದೆ. ಕೊಚ್ಚಿಯಲ್ಲಿ 37 ಎಕರೆ ಕಿನ್ಫ್ರಾ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ನಿಂದ 690 ಕೋಟಿ ರೂ.ಗಳಿಗೆ ಖರೀದಿಸಿದೆ. ಹೆಚ್ಚುವರಿಯಾಗಿ, ಕೋಲ್ಕತ್ತಾದಲ್ಲ ಟಿಸಿಎಸ್ ಸಂಚಿತಾ ಪಾರ್ಕ್ ಮತ್ತು ಬಂಗಾಳ ಸಿಲಿಕಾನ್ ವ್ಯಾಲಿ ಹಬ್‌ನಲ್ಲಿ 30 ಎಕರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇಲ್ಲಿ 16,500 ಜನರು ಏಕಕಾಲದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರಲಿದೆ.

ದಕ್ಷಿಣ ಭಾರತದ ನಗರಗಳತ್ತ ಮುಖ ಮಾಡ್ತಿರೋ ಎಂಎನ್‌ಸಿಗಳು

ಟಿಸಿಎಸ್ ಮಾತ್ರವಲ್ಲ ಅಮೆಜಾನ್ ಕೂಡ ಬೆಂಗಳೂರಿನಲ್ಲೇ 1.1 ಮಿಲಿಯನ್ ಚದರ ಅಡಿ ಗುತ್ತಿಗೆ ಪಡೆದುಕೊಂಡಿದೆ. ಅದೇ ರೀತಿ ಗೂಗಲ್ ಇಂಡಿಯಾ ಬೆಂಗಳೂರಿನ ಬಾಗ್ಮನೆ ರಿಯೊ ಪಾರ್ಕ್‌ನಲ್ಲಿ 1.6 ಮಿಲಿಯನ್ ಚದರ ಅಡಿ ಜಾಗವನ್ನು ತೆಗೆದುಕೊಂಡಿದೆ. ಹೈದರಾಬಾದ್‌ನಲ್ಯೂಲಿ 3.7 ಲಕ್ಷ ಚದರ ಅಡಿ ಜಾಗವನ್ನು ನವೀಕರಿಸಿದೆ. ಮುಂಬೈ ಕೂಡ ಆದ್ಯತೆಯ ಸ್ಥಳವಾಗಿ ಹೊರಹೊಮ್ಮುತ್ತಿದೆ. ಜೆಪಿ ಮಾರ್ಗನ್ ಮತ್ತು ಮೋರ್ಗನ್ ಸ್ಟ್ಯಾನ್ಲಿ ಮುಂಬೈನಲ್ಲಿ ಕ್ರಮವಾಗಿ 1.16 ಮಿಲಿಯನ್ ಚದರ ಅಡಿ ಮತ್ತು 1 ಮಿಲಿಯನ್ ಚದರ ಅಡಿ ಜಾಗವನ್ನು ತೆಗೆದುಕೊಳ್ಳುತ್ತಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?