ಭಾರತದಲ್ಲಿನ ತನ್ನೆಲ್ಲಾ ವ್ಯವಹಾರ ಕ್ಲೋಸ್ ಮಾಡ್ತಿದೆ ಬ್ಯಾಂಕ್; ನಿಮ್ಮ ಅಕೌಂಟ್ ಇದ್ಯಾ?

Published : Sep 02, 2025, 01:09 PM IST
Bank

ಸಾರಾಂಶ

ಭಾರತದಲ್ಲಿ ತನ್ನ ಚಿಲ್ಲರೆ ವ್ಯವಹಾರಗಳನ್ನು ಮಾರಾಟ ಮಾಡಲು ಬಿಡ್‌ಗಳನ್ನು ಆಹ್ವಾನಿಸಿದೆ. ಈ ಕ್ರಮವು ಬ್ಯಾಂಕಿನ ವೆಚ್ಚ ಕಡಿತದ ಕ್ರಮಗಳ ಭಾಗವಾಗಿದೆ ಮತ್ತು ಭಾರತದಲ್ಲಿ ವಿದೇಶಿ ಬ್ಯಾಂಕ್‌ಗಳು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ. 

ನವದೆಹಲಿ: ಭಾರತದಲ್ಲಿರುವ ತನ್ನೆಲ್ಲಾ ಎಲ್ಲಾ ಚಿಲ್ಲರೆ ವ್ಯವಹಾರಗಳನ್ನು ಮಾರಾಟ ಮಾಡುವ ಕುರಿತು ಬ್ಯಾಂಕ್ ಮುಂದಾಗಿದೆ ಎಂದು ವರದಿಯಾಗಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್, ಜರ್ಮನಿಯ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾಗಿರುವ Deutsche Bank ಕುರಿತ ವರದಿಯೊಂದನ್ನು ಪ್ರಕಟಿಸಿದೆ. ಈ ವರದಿ ಪ್ರಕಾರ, ತನ್ನ ಚಿಲ್ಲರೆ ಬ್ಯಾಂಕಿಂಗ್ ಸ್ವತ್ತುಗಳನ್ನು ಮಾರಾಟ ಮಾಡಲು ದೇಶೀಯ ಮತ್ತು ವಿದೇಶಿ ಬ್ಯಾಂಕುಗಳನ್ನು ಬಿಡ್ ಮಾಡಲು ಆಹ್ವಾನಿಸಿದೆ. ಬಿಡ್ ಮಾಡಲು ಆಗಸ್ಟ್ 29ರ ಗಡವು ನೀಡಿತ್ತು. ಈಗಾಗಲೇ ಗಡವು ಮುಕ್ತಾಯಗೊಂಡಿದ್ದು, ಇಲ್ಲಿಯವರೆಗೆ ಯಾವೆಲ್ಲಾ ಬ್ಯಾಂಕ್‌ಗಳು ಬಿಡ್ ಮಾಡಲು ಮುಂದಾಗಿವೆ ಎಂಬ ಮಾಹಿತಿಯನ್ನು ಡಾಯ್ಚ ಬ್ಯಾಂಕ್ ಬಹಿರಂಗಪಡಿಸಿಲ್ಲ.

ಕಳೆದ ಕೆಲ ವರ್ಷಗಳಿಂದ ಡಾಯ್ಚ ಬ್ಯಾಂಕ್ ಭಾರತದಲ್ಲಿನ ತನ್ನ ಎಲ್ಲಾ ಚಿಲ್ಲರೆ ವ್ಯವಹಾರಗಳನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಲು ಮುಂದಾಗಿದ್ದು, ಈ ಸಂಬಂಧ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಡಾಯ್ಚ ಬ್ಯಾಂಕ್ ಭಾರತದಲ್ಲಿ ಒಟ್ಟು 17 ಶಾಖೆಗಳನ್ನು ಹೊಂದಿದ್ದು, ಈ ವರ್ಷದ ಆರಂಭದಿಂದ ಚಿಲ್ಲರೆ ವ್ಯಾಪಾರವನ್ನು ಹೆಚ್ಚು ಲಾಭದಾಯಕವನ್ನಾಗಿ ಮಾಡಲು ಹಲವು ವಿಶೇಷ ಯೋಜನೆಗಳನ್ನು ರೂಪಿಸಿತ್ತು.

ಮೊದಲು ಉದ್ಯೋಗ ಕಡಿತ, ಇದೀಗ ಬಿಡ್‌ಗೆ ಆಹ್ವಾನ

ಈ ರೂಪುರೇಷಗಳ ಬೆನ್ನಲ್ಲೇ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಸುಮಾರು 2,000 ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಡಾಯ್ಚ ಬ್ಯಾಂಕ್‌ನ ಸಿಇಒ ಕ್ರಿಶ್ಚಿಯನ್ ಸೀವಿಂಗ್ ಹೇಳಿಕೆ ನೀಡಿದ್ದರು. ಈ ಆರ್ಥಿಕ ವರ್ಷದಿಂದ ಬ್ಯಾಂಕ್‌ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ಗಮನಿಸಿದ್ರೆ, ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಲಕ್ಷಣಗಳು ಕಂಡು ಬರುತ್ತಿವೆ. 2017ರಲ್ಲಿ ಯೂ ಡಾಯ್ಚ್ ಬ್ಯಾಂಕ್ ತನ್ನ ಚಿಲ್ಲರೆ ಮತ್ತು ಸಂಪತ್ತು ನಿರ್ವಹಣಾ ವ್ಯವಹಾರವನ್ನು ಮಾರಾಟ ಮಾಡಲು ಪ್ರಯತ್ನಿಸಿತ್ತು. ಆದ್ರೆ ಇದು ಹಲವು ಕಾರಣಗಳಿಂದಾಗಿ ಮುಂದೂಡಿಕೆಯಾಗಿತ್ತು. ಇದೀಗ ಮತ್ತೆ Deutsche Bank ಬಿಡ್ ಆಹ್ವಾನಿಸಿದೆ.

ಭಾರತದಲ್ಲಿ ಡಾಯ್ಚ್ ಬ್ಯಾಂಕಿನ ಮೌಲ್ಯವೆಷ್ಟು?

ಡಾಯ್ಚ ಬ್ಯಾಂಕ್ ಸದ್ಯದ ಭಾರತದಲ್ಲಿ ತನ್ನ ಚಿಲ್ಲರೆ ವ್ಯವಹಾರದ ಮೌಲ್ಯಮಾಪನದ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 2025 ರ ಹಣಕಾಸು ವರ್ಷದಲ್ಲಿ ಚಿಲ್ಲರೆ ವ್ಯವಹಾರದಿಂದ ಬ್ಯಾಂಕಿನ ಆದಾಯ $ 278.3 ಮಿಲಿಯನ್ ಆಗಿತ್ತು. ಸದ್ಯದ ಮೌಲ್ಯದ ಕುರಿತು ಅಧಿಕೃತಮ ಮಾಹಿತಿ ಲಭ್ಯವಾಗಿಲ್ಲ.

ಭಾರತದಲ್ಲಿ ಕಡಿಮೆಯಾಗುತ್ತಿರೋ ವಿದೇಶಿ ಹೂಡಿಕೆ

ಸದ್ಯ ಭಾರತ ಆರ್ಥಿಕವಾಗಿ ಬೆಳವಣಿಗೆಯಾಗುತ್ತಿರುವ ರಾಷ್ಟ್ರವಾಗಿದೆ. ಇಷ್ಟು ಮಾತ್ರವಲ್ಲ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಹಾಗೆಯೇ ವರ್ಷದಿಂದ ವರ್ಷಕ್ಕೆ ಭಾರತದ ಶ್ರೀಮಂತರ ಸಂಖ್ಯೆಯೂ ಹೆಚ್ಚಳಗೊಂಡಿದೆ. ಇದಾಗಿಯೂ ಭಾರತದಲ್ಲಿನ ವಿವಿಧ ಬ್ಯಾಂಕ್‌ಗಳ ಕಠಿಣ ಸ್ಪರ್ಧೆ ಮತ್ತು ಹಲವು ನಿಯಂತ್ರಣ ಕ್ರಮಗಳಿಂದಾಗಿ ವಿದೇಶಿ ಬ್ಯಾಂಕ್‌ಗಳು ಭಾರತದಲ್ಲಿ ಅಸ್ತಿತ್ವ ಕಾಯ್ದುಕೊಳ್ಳಲು ಪರದಾಡುತ್ತಿವೆ. ಇಂತಹ ಕಾರಣಗಳಿಂದಾಗಿ ವಿದೇಶಿ ಬ್ಯಾಂಕ್‌ಗಳು ಭಾರತದಲ್ಲಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ.

ಇದನ್ನೂ ಓದಿ: DMart Business: ಡಿ-ಮಾರ್ಟ್ ಮುಚ್ಚುವಂತೆ ಆಗ್ರಹ; ವ್ಯಾಪಾರಿಗಳ ಹೋರಾಟಕ್ಕೆ ಶಾಸಕರ ಬೆಂಬಲ

ಡಾಯ್ಚ ಬ್ಯಾಂಕ್ ಗಿಂತ ಮೊದಲು, ಸಿಟಿಬ್ಯಾಂಕ್ ಕೂಡ 2022 ರಲ್ಲಿ ಭಾರತದಲ್ಲಿ ತನ್ನ ಹೂಡಿಕೆಯನ್ನು ಕಡಿಮೆ ಮಾಡಲು ನಿರ್ಧರಿಸಿತ್ತು. ಈ ವೇಳೆ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಮತ್ತು ಚಿಲ್ಲರೆ ವ್ಯವಹಾರವನ್ನು ಮಾರಾಟ ಮಾಡುವ ಬಗ್ಗೆ ಯೋಚಿಸಿತ್ತು. ಕಳೆದ ವರ್ಷ ಸ್ಟ್ಯಾಂಡರ್ಡ್ ಚಾರ್ಟರ್ಡ್ ತನ್ನ $488 ಮಿಲಿಯನ್ ವೈಯಕ್ತಿಕ ಸಾಲ ಪುಸ್ತಕವನ್ನು ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಮಾರಾಟ ಮಾಡಿತ್ತು.

ಗ್ರಾಹಕರ ಮೇಲೆ ಯಾವ ಪರಿಣಾಮ?

ಹೊಸ ಬ್ಯಾಂಕ್ ಡಾಯ್ಚ ಬ್ಯಾಂಕಿನ ಚಿಲ್ಲರೆ ವ್ಯವಹಾರವನ್ನು ಖರೀದಿಸಿದರೆ, ಅದು ಬ್ಯಾಂಕಿನ ಸೇವಾ ನೀತಿ ಮತ್ತು ನೆಟ್‌ವರ್ಕ್ ಮೇಲೆ ಪರಿಣಾಮ ಬೀರುತ್ತದೆ. ಸಾಲದ ಮೇಲಿನ ಬಡ್ಡಿದರ, ಸಂಸ್ಕರಣಾ ಶುಲ್ಕ ಮತ್ತು ಇತರ ಶುಲ್ಕ ಸಹ ಬದಲಾಗಬಹುದು. ಯಾರಾದರೂ ಡಾಯ್ಚ ಬ್ಯಾಂಕಿನಿಂದ ವೈಯಕ್ತಿಕ ಅಥವಾ ಗೃಹ ಸಾಲವನ್ನು ಪಡೆದಿದ್ದರೆ, ಅದನ್ನೂ ಹೊಸ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಗ್ರಾಹಕರಿಗೆ ಮುಂಚಿತವಾಗಿಯೇ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಹೊಸ ಬ್ಯಾಂಕಿನೊಂದಿಗಿನ ವಹಿವಾಟಿನ ಅನುಭವವು ವಿಭಿನ್ನವಾಗಿರಬಹುದು. ಮೊಬೈಲ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಸೇರಿದಂತೆ ವಿವಿಧ ಸೇವೆಗಳಲ್ಲಿ ಕೊಂಚ ವ್ಯತ್ಯಾಸವಿರುತ್ತದೆ.

ಇದನ್ನೂ ಓದಿ: ಬೆಂಗಳೂರಿನ TCS ಕಚೇರಿ ಬಾಡಿಗೆ ತಿಂಗಳಿಗೆ 9.31 ಕೋಟಿ ರೂ; ಅಡ್ವಾನ್ಸ್ ಕೊಟ್ಟಿದ್ದೆಷ್ಟು? ಒಪ್ಪಂದ ಷರತ್ತುಗಳೇನು?

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!