ರಾಜಕೀಯದಲ್ಲಿ ಮುಳುಗಿದ ಸರ್ಕಾರ, ಕರ್ನಾಟಕದ ಸೆಮಿಕಂಡಕ್ಟರ್‌ ಒಪ್ಪಂದ ಕಸಿದುಕೊಂಡ ತೆಲಂಗಾಣ!

By Santosh Naik  |  First Published Oct 6, 2023, 11:37 PM IST

ರಾಜ್ಯ ಸರ್ಕಾರದ ಪ್ರಮುಖ ಮಂತ್ರಿಗಳು ರಾಜಕೀಯದಲ್ಲಿಯೇ ಮುಳುಗಿದ್ದರೆ, ಕರ್ನಾಟಕಕ್ಕೆ ಬರಬೇಕಾಗಿದ್ದ ಸೆಮಿಕಂಡಕ್ಟರ್‌ ಒಪ್ಪಂದವೊಂದು ತೆಲಂಗಾಣ ಸರ್ಕಾರದ ಪಾಲಾಗಿದೆ. ಕೇನ್ಸ್‌ ಟೆಕ್ನಾಲಜಿ ತೆಲಂಗಾಣದಲ್ಲಿ 2800ಕೋಟಿ ರೂಪಾಯಿ ವೆಚ್ಚದ ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿದೆ.


ಬೆಂಗಳೂರು (ಅ.6): ರಾಜ್ಯ ಸರ್ಕಾರದ ಪ್ರಮುಖ ಸಚಿವರು ರಾಜಕೀಯ ಹೇಳಿಕೆಗಳು, ಸಮರ್ಥನೆಗಳಲ್ಲಿ ನಿರತರಾಗಿರುವ ಹಂತದಲ್ಲಿ ಅರ್ಹ ರೀತಿಯಲ್ಲಿ ಕರ್ನಾಟಕಕ್ಕೆ ಸಲ್ಲಬೇಕಾಗಿದ್ದ ಬಹುದೊಡ್ಡ ಹೂಡಿಕೆಯೊಂದು ನೆರೆಯ ತೆಲಂಗಾಣ ಸರ್ಕಾರದ ಪಾಲಾಗಿದೆ. ಮುಂಬೈ ಮೂಲದ ಕೇನ್ಸ್‌ ಟೆಕ್ನಾಲಜಿ ಕಳೆದ ಆಗಸ್ಟ್‌ನಲ್ಲಿ ಕರ್ನಾಟಕದಲ್ಲಿ 3750 ಕೋಟಿ ರೂಪಾಯಿ ಒಪ್ಪಂದವನ್ನು ಮಾಡಿಕೊಂಡಿತ್ತು. ಇದರಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ (OSAT) ಸೌಲಭ್ಯ ಮತ್ತು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (PCB) ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಸಮ್ಮುಖದಲ್ಲಿಯೇ ಈ ಎಂಓಯು ಮಾಡಿಕೊಳ್ಳಲಾಗಿತ್ತು. ಮೈಸೂರಿನಲ್ಲಿ ಈ ಘಟಕ ಸ್ಥಾಪನೆಯಾಗಲಿದೆ ಎನ್ನಲಾಗಿತ್ತು. ಆದರೆ, ಇದೇ ಘಟಕವನ್ನು ಕಂಪನಿ ಈಗ ತೆಲಂಗಾಣದಲ್ಲಿ ಸ್ಥಾಪನೆ ಮಾಡುವುದಾಗಿ ಎಂಓಯು ಮಾಡಿಕೊಂಡಿದೆ.  ಪ್ರಸ್ತಾವಿತ ಸೌಲಭ್ಯವನ್ನು ಫಾಕ್ಸ್‌ಕಾನ್‌ನ ಮುಂಬರುವ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೌಲಭ್ಯದ ಪಕ್ಕದಲ್ಲಿ ಕೊಂಗರ ಕಲಾನ್‌ನಲ್ಲಿ ಸ್ಥಾಪಿಸಲಾಗುವುದು ಎಂದು ತೆಲಂಗಾಣ ಸರ್ಕಾರ ಘೋಷಣೆ ಮಾಡಿದೆ. 

"ಕಂಪನಿಯು ರಾಜ್ಯದಲ್ಲಿ ಹೊರಗುತ್ತಿಗೆ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ (OSAT) ಮತ್ತು ಸಂಯುಕ್ತ ಸೆಮಿಕಂಡಕ್ಟರ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ತೆಲಂಗಾಣ ಸರ್ಕಾರದೊಂದಿಗೆ ಎಂಒಯು ಮಾಡಿಕೊಂಡಿದೆ" ಎಂದು ಅದು ತನ್ನ ಎಕ್ಸ್‌ಚೇಂಜ್‌ ಫೈಲಿಂಗ್‌ನಲ್ಲಿ ತಿಳಿಸಿದೆ. ಪ್ರಸ್ತಾವಿತ ಹೂಡಿಕೆಯು 2,000 ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕ ಇಷ್ಟು ದೊಡ್ಡ ಮಟ್ಟದ ಹೂಡಿಕೆಯನ್ನು ಕಳೆದುಕೊಂಡಿದ್ದು ಹೇಗೆ ಎಂದು ಇನ್ಫೋಸಿಸ್‌ನ ಮಾಜಿ ಸಿಎಫ್‌ಓ ಹಾಗೂ ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ನ ಚೇರ್ಮನ್‌ ಮೋಹನ್‌ದಾಸ್‌ ಪೈ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

News Hour: ಸರ್ಕಾರದ ಹೊಸ ಕಾರುಬಾರು, ಊರೂರಿಗೆ ಬಾರು ಎಂದ ಡಿಸಿಎಂ, ಚಾನ್ಸೇ ಇಲ್ಲ ಅಂದ ಸಿಎಂ!

ಐಟಿಇ ಮತ್ತು ಸಿ ಮತ್ತು ಕೈಗಾರಿಕಾ ಸಚಿವ ಕೆ ಟಿ ರಾಮರಾವ್ ಅವರು ಕೇನ್ಸ್ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಕುಂಞಿಕಣ್ಣನ್ ಮತ್ತು ಅಧ್ಯಕ್ಷೆ ಸವಿತಾ ರಮೇಶ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಸೌಲಭ್ಯವನ್ನು ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದಾರೆ/ “ಹೈದರಾಬಾದ್‌ನಲ್ಲಿರುವ ನಮ್ಮ ಪ್ರತಿಷ್ಠಿತ OSAT/ATMP ಸ್ಥಾವರಕ್ಕಾಗಿ ತೆಲಂಗಾಣ ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಈ ಘಟಕ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ತೆಲಂಗಾಣ ತಂಡವು ಕಾರ್ಯನಿರ್ವಹಿಸಿದ ವೇಗ ಸಾಟಿಯಿಲ್ಲದ್ದು ಎಂದು ಕುಂಞಿಕಣ್ಣನ್ ಹೇಳಿದ್ದಾರೆ. ತೆಲಂಗಾಣಕ್ಕೆ ಇದು ಹೆಮ್ಮೆಯ ಸಂಗತಿ ಎಂದು ಸಚಿವ ರಾಮರಾವ್ ಹೇಳಿದ್ದಾರೆ. ತೆಲಂಗಾಣ ಈಗ ಜಗತ್ತಿನ ಸೆಮಿಕಂಡಕ್ಟರ್‌ ಹಬ್‌ ಆಗುವ ನಿಟ್ಟಿನಲ್ಲಿ ಮುಂದುವರಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ಫಾಕ್ಸ್‌ಕಾನ್‌ ಮತ್ತು ಕಾರ್ನಿಂಗ್‌ನಂಥ ಪ್ರಮುಖ ಜಾಗತಿಕ ಕಂಪನಿಗಳು ತೆಲಂಗಾಣದಲ್ಲಿ ಹೂಡಿಕೆ ಮಾಡಿವೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಆದ್ಯತೆ ತಾಣವಾಗಿ ತೆಲಂಗಾಣ ಬದಲಾಗಿದೆ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Latest Videos

undefined

'ಬೈಕ್‌ ಸುಟ್ಬಿಡಿ, ಅಲ್ಲಿ ತನಕ ಆತ ಜೈಲಲ್ಲೇ ಇರ್ಲಿ' ವ್ಹೀಲಿಂಗ್‌ ಶೋಕಿ ಮಾಡ್ತಿದ್ದ TTF Vasan ಜಾಮೀನು ಅರ್ಜಿ ವಜಾ!

ಎಲೆಕ್ಟ್ರಾನಿಕ್ಸ್ ಗುತ್ತಿಗೆ ತಯಾರಕ ಕಂಪನಿಯು ಕಂಪನಿಯ ಸ್ಟೆಪ್-ಡೌನ್ ಅಂಗಸಂಸ್ಥೆಗಳ ಮೂಲಕ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಸೌಲಭ್ಯ ಮತ್ತು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು 3,750 ಕೋಟಿ ರೂಪಾಯಿಗ ಎಂಒಯುವನ್ನು ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿತ್ತು.

Delighted to welcome for setting up of OSAT & Compound Semiconductor manufacturing facility in Telangana, with an investment of 2800 Cr generating 2000 jobs. 😊

Proud moment for Telangana as we now join the league of coveted global destinations that host… pic.twitter.com/2Z8e4DJcJ7

— KTR (@KTRBRS)
click me!