ಅಂಬಾನಿ ಕುಟುಂಬದ ಭಾವೀ ಸೊಸೆ ರಾಧಿಕಾ ಮರ್ಚೆಂಟ್ ಅವರ ಸಹೋದರಿ ಅಂಜಲಿ ಮರ್ಚೆಂಟ್ ಕೂಡ ಉದ್ಯಮಿಯಾಗಿದ್ದು, ವಿರೇನ್ ಮರ್ಚೆಂಟ್ ಕುಟುಂಬದ ಕುಡಿಯಾಗಿದ್ದಾರೆ. ಎನ್‌ಕೋರ್ ಹೆಲ್ತ್‌ಕೇರ್‌ನ ನಿರ್ದೇಶಕಿಯಾಗಿದ್ದಾರೆ. ಲಂಡನ್‌ನಿಂದ ಎಂಬಿಎ ಪದವಿ ಪಡೆದಿದ್ದಾರೆ.
ರಿಲಾಯನ್ಸ್ ಮುಖ್ಯಸ್ಥ ವಿಶ್ವದ ಶ್ರೀಮಂತ ಉದ್ಯಮಿಯರಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಭಾವೀ ಸೊಸೆ ರಾಧಿಕಾ ಮರ್ಚೆಂಟ್ ಅವರು ವ್ಯಾಪಾರ ಉದ್ಯಮಿ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ. ಈ ವರ್ಷದ ಜನವರಿಯಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಅವರ ಸಹೋದರಿ ಅಂಜಲಿ ಮರ್ಚೆಂಟ್ ಕೂಡ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದರು.
ವಿರೇನ್ ಮರ್ಚೆಂಟ್ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಅವರು ಖಾಸಗಿ ಒಡೆತನದ ಔಷಧ ತಯಾರಿಕಾ ಕಂಪನಿಯಾದ ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ಆಗಿದ್ದಾರೆ.
ಪುತ್ರನ ಕಂಪೆನಿ ಬೆಳೆಸಲು ಮತ್ತೊಮ್ಮೆ 16,645 ಕೋಟಿ ರೂ ವಿದೇಶಿ ಸಾಲ ಪಡೆದ ಉದ್ಯಮಿ ಮುಖೇಶ್ ಅಂಬಾನಿ!
ಅಂಜಲಿ ಮರ್ಚೆಂಟ್ ಅವರ ಪೂರ್ಣ ಹೆಸರು ಅಂಜಲಿ ಮರ್ಚೆಂಟ್ ಮಜಿಥಿಯಾ. ಎನ್ಕೋರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ನಿರ್ದೇಶಕರಾಗಿ ಹೆಸರುವಾಸಿಯಾಗಿದ್ದಾರೆ. ಅಂಜಲಿ ಮರ್ಚೆಂಟ್ ತನ್ನ ಶಾಲಾ ಶಿಕ್ಷಣವನ್ನು ಮುಂಬೈನಲ್ಲಿ ಕ್ಯಾಥೆಡ್ರಲ್ ಮತ್ತು ಮುಂಬೈನ ಜಾನ್ ಕಾನನ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಅಂಜಲಿ ಅವರು ಮ್ಯಾಸಚೂಸೆಟ್ಸ್‌ನ ವೆಲ್ಲೆಸ್ಲಿಯಲ್ಲಿರುವ ಬಾಬ್ಸನ್ ಕಾಲೇಜಿನಲ್ಲಿ ಉದ್ಯಮಶೀಲತೆ ಮತ್ತು ಕಾರ್ಯತಂತ್ರ ನಿರ್ವಹಣೆಯಲ್ಲಿ (2008-2012) ಬ್ಯಾಚುಲರ್ ಆಫ್ ಸೈನ್ಸ್ ಮಾಡಿದ್ದಾರೆ. ಬಳಿಕ ಇಂಗ್ಲೆಂಡ್‌ನ ಲಂಡನ್ ಬಿಸಿನೆಸ್ ಸ್ಕೂಲ್‌ನಿಂದ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (2016-2018) ಮಾಸ್ಟರ್ಸ್ ಮಾಡಿದ್ದಾರೆ.
ಭಾರತದ ದುಬಾರಿ 220 ಕೋಟಿ ವೆಚ್ಚದ ಬರ್ತಡೇ ಪಾರ್ಟಿ, ಪಿಗ್ಗಿ, ಸಚಿನ್, ಬಿಗ್‌ಬಿ ಸೇರಿ 300 ವಿವಿಐಪಿಗಳು ಭಾಗಿ!
ಅಂಜಲಿ ಮರ್ಚೆಂಟ್ ಅವರು ಎನ್‌ಕೋರ್ ಫಾರ್ಮಾಸ್ಯುಟಿಕಲ್‌ನಲ್ಲಿ ನಿರ್ದೇಶಕರಾಗಿದ್ದಾರೆ ಮತ್ತು ಹೇರ್ ಸ್ಟೈಲಿಂಗ್ ಮತ್ತು ಹೇರ್ ಟ್ರೀಟ್‌ಮೆಂಟ್ ಕ್ಲಬ್‌ಗಳ ಸರಣಿಯಾಗಿರುವ ಡ್ರೈಫಿಕ್ಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ. 2017 ರಲ್ಲಿ, ಅಂಜಲಿ ಜರ್ಮನಿಯ ಬಹುರಾಷ್ಟ್ರೀಯ ಔಷಧೀಯ ಕಂಪನಿಯಾದ ಬೇಯರ್‌ಗೆ ಸೇರಿದರು. 2018 ರಲ್ಲಿ ಅವರು ಡ್ರೈಫಿಕ್ಸ್ ಅನ್ನು ಸ್ಥಾಪಿಸಿದರು ಮತ್ತು ಅವರ ಹೇರ್ ಸ್ಟೈಲಿಂಗ್‌ನ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ Instagram ನಲ್ಲಿ ತಮ್ಮ ಬ್ರ್ಯಾಂಡ್ ಅನ್ನು ಜಾಹೀರಾತು ಮಾಡಿದರು.
ಮುಖೇಶ್ ಅಂಬಾನಿಯನ್ನು ಮೀರಿ ಬೆಳೆದು ಜಗತ್ತಿನ 6ನೇ ಅತಿದೊಡ್ಡ ಸಿರಿವಂತ ಎನಿಸಿಕೊಂಡಾತನ ಆಸ್ತಿ ಇಂದು ಶೂನ್ಯ!
2020 ರಲ್ಲಿ ಅಂಜಲಿ ಅವರು ಗೋವಾದಲ್ಲಿ ಚಿಲ್ಲರೆ ಬಟ್ಟೆಗಳ ಆನ್‌ಲೈನ್ ವ್ಯಾಪಾರ ಮಾಡುವ ಪ್ಲಾಟ್‌ಫಾರ್ಮ್ 'ವಟಲಿ' ಸ್ಥಾಪಕ ಅಮನ್ ಮಜಿಥಿಯಾ ಅವರನ್ನು ವಿವಾಹವಾದರು. ಈಗ ಅವರಿಗೆ ಒಂದು ಮಗುವಿದೆ.
ಅಂಜಲಿ ಮರ್ಚೆಂಟ್ ಅವರ ತಂದೆ ವೀರೇನ್ ಮರ್ಚೆಂಟ್ ಸುಮಾರು 755 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ. ಅಂಜಲಿ ಮರ್ಚೆಂಟ್ ನೆಟ್‌ವರ್ತ್ ಬಗ್ಗೆ ಮಾಹಿತಿ ಇಲ್ಲ. ಆದರೆ ಅಂಬಾನಿ ಕುಟುಂಬದ ಭಾವೀ ಸೊಸೆ ರಾಧಿಕಾ ಮರ್ಚೆಂಟ್ ಅವರ ನೆಟ್‌ವರ್ತ್ 10 ಕೋಟಿ ಎಂದು ಅಂದಾಜಿಸಲಾಗಿದೆ. ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ 2024 ರಲ್ಲಿ ಜುಲೈ 10, 11, 12 ರಂದು ಅದ್ಧೂರಿ ವಿವಾಹ ಸಮಾರಂಭದಲ್ಲಿ ಸಪ್ತಪದಿ ತುಳಿಲಿದ್ದಾರೆ.