Karnataka Budget: ಸರ್ಕಾರದಿಂದ 1 ಲಕ್ಷ ಹುದ್ದೆ ಭರ್ತಿಗೆ ನಿರ್ಧಾರ: ಪೊಲೀಸ್‌ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್

By Sathish Kumar KH  |  First Published Feb 17, 2023, 6:52 PM IST

ರಾಜ್ಯದ ಸರ್ಕಾರದ 2023-24ನೇ ಸಾಲಿನ ಆಯವ್ಯಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ ಮಾಡಲು ಐತಿಹಾಸಿಕ ಕ್ರಮವನ್ನು ಕೈಗೊಳ್ಳಲಾಗಿದೆ.


ಬೆಂಗಳೂರು (ಫೆ.17): ರಾಜ್ಯದ ಸರ್ಕಾರದ 2023-24ನೇ ಸಾಲಿನ ಆಯವ್ಯಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ ಮಾಡಲು ಐತಿಹಾಸಿಕ ಕ್ರಮವನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಬಹುಮುಖ್ಯವಾಗಿ ಪೊಲೀಸ್‌, ಸಾರಿಗೆ ಇಲಾಖೆ, ಬೆಂಗಳೂರು ನಗರ ವಿವಿಧ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಹುದ್ಎಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರದ ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಸೇವೆಗಳ ಅಡಿಯಲ್ಲಿ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 1 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಐತಿಹಾಸಿಕ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದ 500 ಕೋಟಿ ರೂ. ನೆರವಿನೊಂದಿಗೆ ರಾಜ್ಯದ ವಿವಿಧ ರಸ್ತೆ ಸಾರಿಗೆ ನಿಗಮಗಳಿಗೆ 1,200 ಹೊಸ ಬಸ್‌ ಗಳ ಸೇರ್ಪಡೆ ಮಾಡಲಾಗುತ್ತಿದೆ. ಈ ಮೂಲಕ ಬಸವರಾಜ ಬೊಮ್ಮಾಯಿ ಅವರು ಮಕ್ಕಳಿಗೆ ಬಸ್‌ಗಳನ್ನು ಸರಬರಾಜು ಮಾಡಿದ್ದಾರೆ. ಶಾಲೆ- ಕಾಲೇಜುಗಳಿಗೆ ಹೋಗುವಂತಹ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ವಸ್‌ಗಳನ್ನು ಬಿಡಲಾಗುತ್ತದೆ.

Latest Videos

undefined

 

Karnataka Budget 2023-24: SC/ST, OBCಗೆ ಬೊಮ್ಮಾಯಿ ಕೊಟ್ಟಿದ್ದೇನು?: ಹೊಸ ಯೋಜನೆಗಳ ವಿವರ

ಪೊಲೀಸರಿಗೆ 3 ಸಾವಿರ ಮನೆಗಳು: ರಾಜ್ಯದಲ್ಲೊಇ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅನುಕೂಲ ಆಗುವಂತೆ ಈ ಸಾಲಿನ ಆರ್ಥಿಕ ವರ್ಷದಲ್ಲಿ ಪೊಲೀಸ್ ಗೃಹ ಯೋಜನೆಯಡಿ 450 ಕೋಟಿ ರೂ. ನಲ್ಲಿ ಬರೋಬ್ಬರಿ 3000 ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಪೊಲೀಸರಿಗೆ ಸ್ಥಳೀಯವಾಗಿ ಮನೆಗಳನ್ನು ನಿರ್ಮಿಸಿಕೊಟ್ಟು, ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. 

24 ಹೊಸ ಪೊಲೀಸ್‌ ಠಾಣೆಗಳ ನಿರ್ಮಾಣ: ಇನ್ನು ರಾಜ್ಯದಲ್ಲಿ ಬೆಂಗಳೂರು ಮಹಾನಗರ ಸೇರಿ ವಿವಿಧ ಪ್ರದೇಶಗಳಲ್ಲಿ ಬರೋಬ್ಬರಿ 24 ಪೊಲೀಸ್‌ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ 4 ಹೊಸ ಸಂಚಾರ ಪೊಲೀಸ್‌ ಠಾಣೆ ಪ್ರಾರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ 9 ಸಿವಿಲ್‌ ಪೊಲೀಸ್‌ ಠಾಣೆ, 5 ಸಂಚಾರ ಪೊಲೀಸ್‌ ಠಾಣೆ ಹಾಗೂ 6 ಮಹಿಳಾ ಪೊಲೀಸ್‌ ಠಾಣೆಗಳ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಅಪರಾಧ ತಡೆಗೆ ಹೆಚ್ಚಿನ ನಿಗಾವಹಿಸಲಾಗುತ್ತದೆ. ಬೆಂಗಳೂರು ನಗರದ ಪೊಲೀಸ್ ವ್ಯವಸ್ಥೆ ಬಲಪಡಿಸಲು ವಿವಿಧ ಹಂತದಲ್ಲಿ 2000 ಹುದ್ದೆಗಳ ಸೃಜನೆ ಮಾಡಲಾಗುತ್ತದೆ.

ಪೊಲೀಸರ ಅಧೀನದಲ್ಲಿ ವಿವಿಧ ಕೆಲಸಗಳನ್ನು ಮಾಡುವ ಹಾಗೂ ಪೊಲೀಸರಿಗೆ ನೆರವು ಆಗುವಂತಹ ಕಾರ್ಯಗಳನ್ನು ಮಾಡುತ್ತಿರುವ ಹೋಂ ಗಾರ್ಡ್‌ ಗಳಿಗೆ (ಗೃಹ ರಕ್ಷಕ ಸಿಬ್ಬಂದಿ) ಪ್ರತಿ ದಿನಕ್ಕೆ 100 ರೂ. ಗೌರವ ಧನ ಹೆಚ್ಚಳ ಮಾಡಲಾಗಿದೆ. ಮಾಸಿಕ ಕೆಲಸ ಮಾಡಿದ ದಿನಗಳಿಗೆ ಅನುಗುಣವಾಗಿ 2,500ರೂ.ಗಳಿಂದ 3 ಸಾವಿರ ರೂ.ಗಳನ್ನು ಹೋಂ ಗಾರ್ಡ್ಸ್ ಹೆಚ್ಚುವರಿಯಾಗಿ ಪಡೆಯಬಹುದು.

Karnataka Budget 2023-24: ಈ ವರ್ಷವೇ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಅನುಷ್ಠಾನ: ಸಿಎಂ ಬೊಮ್ಮಾಯಿ ಭರವಸೆ

ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಆದ್ಯತೆ: 

  • ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ 3,458 ಕೋಟಿ ರೂ ಆಯವ್ಯಯ ಹಂಚಿಕೆ.
  • ಗಡಿ ಪ್ರದೇಶಗಳ ಅಭಿವೃದ್ಧಿಗೆ 150 ಕೋಟಿ ರೂ. 
  • ಜಿಲ್ಲಾ ಮತ್ತು ತಾಲ್ಲೂಕು ಕ್ರೀಡಾಂಗಣಗಳ ಅಭಿವೃದ್ಧಿಗೆ 100 ಕೋಟಿ ರೂ. 
  • ಕರ್ನಾಟಕ ಒಲಿಂಪಿಕ್‌ ಕನಸಿನ ಯೋಜನೆ ನಿಧಿಗೆ 50 ಕೋಟಿ ರೂ. ಅನುದಾನ.
  • ದೇವಾಲಯಗಳು ಮತ್ತು ಮಠಗಳ ಜೀರ್ಣೋದ್ಧಾರಕ್ಕೆ 1,000 ಕೋಟಿ ರೂ.
  • ಶಿರಸಿಯಲ್ಲಿ ನೂತನ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ.
click me!