Karnataka Budget 2022 : ಚಿತ್ರರಂಗಕ್ಕೆ ಬೊಮ್ಮಾಯಿ ಕೊಟ್ಟಿದ್ದೇನು?

By Contributor Asianet  |  First Published Mar 4, 2022, 6:48 PM IST

*ಬಜೆಟ್ ನಲ್ಲಿ ಸ್ಯಾಂಡಲ್‌ವುಡ್ ಗೆ ಸಿಕ್ಕಿದ್ದೇನು?
* ಪುನೀತ್ ಮತ್ತು ಸಂಚಾರಿ ವಿಜಯ್ ಸ್ಮರಿಸಿದ ಸಿಎಂ
* ಅಂಗಾಗ ದಾನದಂತಹ ಮಹತ್ ಕಾರ್ಯ ಮಾದರಿ
* ಸಿನಿಮಾಗಳ ಸಬ್ಸಿಡಿ ಹೆಚ್ಚಳಕ್ಕೆ ತೀರ್ಮಾನ


ಬೆಂಗಳೂರು(ಮೇ. 04)  ಸಿನಿಮಾ (Sadalwoood)  ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಸಿಎಂ ಬಸವರಾಜ ಬೊಮ್ಮಾಯಿ  (Basavaraj Bommai) ಸ್ಯಾಂಡಲ್  ವುಡ್ ಗೆ ಭರಪೂರ ಕೊಡುಗೆ ನೀಡುತ್ತಾರೆ ಎಂದು ಭಾವಿಸಲಾಗಿತ್ತು ಆದರೆ ಸ್ಯಾಂಡಲ್‌ವುಡ್ ಗೆ  ಸಿಕ್ಕಿದ್ದು ಅಲ್ಪ ಮಾತ್ರ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಅವರ ಚೊಚ್ಚಲ ಬಜೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಅವರನ್ನು ನೆನಪಿಸಿಕೊಂಡರು. ಅಂಗಾಗ ದಾನದ ವಿಚಾರವನ್ನು ಸಿಎಂ ಪ್ರಸ್ತಾಪಿಸಿದರು.

Tap to resize

Latest Videos

ಕನ್ನಡದ ಕಣ್ಮಿಣಿ  ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನರಾದಾಗ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಸಂಚಾರಿ ವಿಜಯ್ (Sanchari Vijay)  ನಿಧನರಾದಾಗ ಅವರ ಅಂಗಾಂಗ ದಾನ ಮಾಡಿದ್ದರು. ಹೀಗಾಗಿ ಮರಣಾನಂತರ ಅಂಗಾಂಗಗಳನ್ನು ದಾನ ಮಾಡುವಂತೆ ಸಾರ್ವಜನಿಕರನ್ನು ಪ್ರೇರೇಪಿಸಲು, ಇದಕ್ಕೆ ಪೂರಕವಾಗಿ ಈಗಾಗಲೇ ಬೆಂಗಳೂರಿನಲ್ಲಿರುವ  Institute of Gastroenterology and Organ Transplant ಸಂಸ್ಥೆಯನ್ನು ಲೋಕಾರ್ಪಣೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ನಿಮ್ಹಾನ್ಸ್ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಸಿಎಂ  ಘೋಷಣೆ ಮಾಡಿದರು.

ಪ್ರತಿ ವರ್ಷ ಸರ್ಕಾರದಿಂದ 125 ಸಿನಿಮಾಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆ ಸಂಖ್ಯೆಯನ್ನು 200 ಕ್ಕೆ ಹೆಚ್ಚಿಸಲಾಗಿದೆ. ಸ್ಯಾಂಡಲ್‌ವುಡ್ ಗೆ ಸಿಎಂ ರಿಂದ ಸಿಕ್ಕ ಕೊಡುಗೆ ಇದು.

Karnataka Budget 2022 ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಹೇಳಿದ ಡಿಕೆ ಶಿವಕುಮಾರ್

2016ಕ್ಕೂ ಮುನ್ನ ಸರಕಾರ ವಾರ್ಷಿಕ ನೂರು ಚಿತ್ರಗಳಿಗೆ ಮಾತ್ರ ಸಬ್ಸಿಡಿ ನೀಡುತ್ತಿತ್ತು. ಕಾಂಗ್ರೆಸ್ ಅವಧಿಯಲ್ಲಿನ ಸಿಎಂ ಆಗಿದ್ದ ಸಿದ್ಧರಾಮಯ್ಯ 100 ಸಿನಿಮಾದಿಂದ 125 ಸಿನಿಮಾಗಳಿಗೆ ಏರಿಕೆ ಮಾಡಿ, ಒಂದೊಂದು ಚಿತ್ರಕ್ಕೆ ತಲಾ 10 ಲಕ್ಷ ರೂಪಾಯಿಯನ್ನು ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದರು.

ಸ್ಯಾಂಡಲ್ ವುಡ್ ಬಜೆಟ್ ಮೇಲೆ ಬೆಟ್ಟದಷ್ಟು  ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಪೂರಕವಾಗಿರುವ ಯಾವುದೇ ಕೊಡುಗೆ ಸಿಕ್ಕಂತೆ ಕಾಣುತ್ತಿಲ್ಲ. ಕೊರೋನಾ ಸಂದರ್ಭದಲ್ಲಿ   ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಚಲನಚಿತ್ರ ಕಾರ್ಮಿಕರು ಸಹ ಮನವಿ ಸಲ್ಲಿಕೆ  ಮಾಡಿದ್ದರು. 

ಕೃಷಿ, ನೀರಾವರಿ ಮತ್ತು ಭದ್ರತೆ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಹೆಚ್ಚಿನ ಆದ್ಯತೆ ನೀಡಿರುವುದು ಕಂಡಿದೆ.  ಹಳೆಯ ಯೋಜನೆಗಳ  ಜತೆಗೆ  ಪೂರಕವಾಗುವಂತಹ ಯೋಜನೆ ನೀಡಿದ್ದಾರೆ. 

ಕಾಶಿ ಯಾತ್ರೆಗೆ ತೆರಳುವವವವರಿಗೆ ಸಹಾಯ ಧನ, ಪಕ್ಕದ ರಾಜ್ಯಗಳಲ್ಲಿಯೂ ಕನ್ನಡ ಭವನ, ಯಶಸ್ವಿನಿ ಯೋಜನೆ ಮರುಸ್ಥಾಪನೆ ಬೊಮ್ಮಾಯಿ ಬಜೆಟ್ ನ ಕೆಲವು ಪ್ರಮುಖ ಅಂಶ. 

 

 

click me!