Karnataka Budge 2022 ಡಿಜಿಟಲ್ ಅಸಮತೋಲನಕ್ಕೆ ಬ್ರೇಕ್, ಸರ್ವತೋಮುಖ ಅಭಿವೃದ್ಧಿಗೆ ಬೊಮ್ಮಾಯಿ ಬಜೆಟ್ ಸಹಕಾರಿ, ಬಿವಿ ನಾಯ್ಡು!

By Suvarna News  |  First Published Mar 4, 2022, 6:22 PM IST
  • ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್‌ಗೆ ಹಲವರ ಮೆಚ್ಚುಗೆ
  • ಕರ್ನಾಟಕ ಬಜೆಟ್‌ನಿಂದ ರಾಜ್ಯ ಅಭಿವೃದ್ಧಿ ವೇಗ ಮತ್ತಷ್ಟು ಹೆಚ್ಚಳ
  • ಮೋದಿ ಆತ್ಮನಿರ್ಭರ ಭಾರತಕ್ಕೆ ಮತ್ತಷ್ಟು ಪುಷ್ಠಿ ನೀಡಿದ ಬಜೆಟ್
  • ಕರ್ನಾಟಕ ಡಿಜಿಟಲ್ ಮಿಶನ್ ಎಕಾನಮಿ ಮುಖ್ಯಸ್ಥರ ಪ್ರತಿಕ್ರಿಯೆ

ಬೆಂಗಳೂರು(ಮಾ.04): ಬಹುನಿರೀಕ್ಷಿತ ಕರ್ನಾಟಕ ಬಜೆಟ್ 2022 ಮಂಡನೆಯಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅಳೆದು ತೂಗಿ ರಾಜ್ಯದ ಅಭಿವೃದ್ದಿಗೆ ಮತ್ತಷ್ಟು ವೇಗ ನೀಡುವ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ಕುರಿತು ಹಲವರು ಪರಿಣಿತರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೊಮ್ಮಾಯಿ ಮಂಡಿಸಿದ ಬಜೆಟ್ ರಾಜ್ಯದ ಅಭಿವೃದ್ಧಿ, ಪ್ರಧಾನಿ ನರೇಂದ್ರ ಮೋದಿಯ ಆತ್ಮನಿರ್ಭರ್ ಭಾರತ್ ಮಿಶನ್‌ಗೆ ಪುಷ್ಠಿ ಹಾಗೂ ರಾಜ್ಯದಲ್ಲಿನ ಡಿಜಿಟಲ್ ಅಸಮತೋಲನತೆ ತೊಡೆದು ಹಾಕಲು ನೆರವಾಗಲಿದೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಖ್ಯಸ್ಛ ಬಿವಿ ನಾಯ್ಡು ಹೇಳಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿಗೆ ಇದೀಗ ರಾಜ್ಯದ ಬಜೆಟ್ ಮತ್ತಷ್ಟು ಪುಷ್ಠಿ ನೀಡಲಿದೆ. ಇದರಿಂದ ಕರ್ನಾಟಕದಲ್ಲಿನ ಡಿಜಿಟಲ್ ಅಸಮತೋಲನ, ಡಿಜಿಟಲ್ ಸಮಸ್ಯೆಗಳಿಗೆ ಮುಕ್ತಿ ಹಾಡಲಿದೆ. ಈ ಬಜೆಟ್‌ನಲ್ಲಿ ಬೊಮ್ಮಾಯಿ 15 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 15 ಪ್ರವಾಸಿ ತಾಣಗಳಲ್ಲಿ ಆಗ್ಮೆಂಟೆಡ್ ರಿಯಾಲಿಯಿ, ವರ್ಚುವರ್ ರಿಯಾಲಿಟಿ(AR, VR)ನಿರ್ಮಾಣಕ್ಕೆ ಒತ್ತು ನೀಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ಮಿಶನ್‌ಗೆ ಮತ್ತಷ್ಟು ಒತ್ತು ನೀಡುವ ಸಲುವಾಗಿ 150 ಕೋಟಿ ರೂಪಾಯಿ ವೆಚ್ಚದಲ್ಲಿ ಜಾಗತಿಕ ಉದಯೋನ್ಮುಖ ತಂತ್ರಜ್ಞಾನ ವಿನ್ಯಾಸ ಕೇಂದ್ರ ಸ್ಥಾಪನೆ ನಿರ್ಧರಿಸಲಾಗಿದೆ. ಇದು ಅತ್ಯುತ್ತಮ ನಡೆಯಾಗಿದೆ ಎಂದು ಬಿವಿ ನಾಯ್ದು ಹೇಳಿದ್ದಾರೆ.

Latest Videos

undefined

Karnataka Budget 2022 ಬೊಮ್ಮಾಯಿ ಚೊಚ್ಚಲ ಬಜೆಟ್‌ಗೆ ಯಾರು ಏನ್ ಹೇಳಿದ್ರು? ಬಿಎಸ್‌ವೈ ಬಣ್ಣಿಸಿದ್ದು ಹೀಗೆ

ಸ್ಟಾರ್ಟ್ಅಪ್‌ಗಾಗಿ ಬೆಂಗಳೂರು ಹೊರತುಪುಡಿಸಿ ಇನ್ನುಳಿದ ನಗರಗಳಿಗೆ ಕ್ಲಸ್ಟರ್ ಫೀಡ್ ಫಂಡ್‌ಗೆ ಸರ್ಕಾರ ಗಮನ ಹರಿಸಿದೆ. ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ತಲಾ 20 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಟಾರ್ಟ್ಅಪ್ ಆರಂಭಿಸಲು ನಿರ್ಧರಿಸಲಾಗಿದೆ.ಈ ಯೋಜನೆಗಾಗಿ ಪ್ರಸಕ್ತ ವರ್ಷ 12 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದರಿಂದ ಡಿಜಿಟಲ್ ಆರ್ಥಿಕತೆಯ ಮೇಲೆ ರಾಜ್ಯದ ಕ್ಲಸ್ಟರ್ ಬಲಪಡಿಸಲು ಇದು ನೆರವಾಗಲಿದೆ ಎಂದು ನಾಯ್ಡು ಹೇಳಿದ್ದಾರೆ.

ನಗರಗಳು ವೇಗವಾಗಿ ಬೆಳೆಯುತ್ತಿದೆ. ಸಣ್ಣ ಸಣ್ಣ ಪಟ್ಟಣಗಳು ನಗರಗಳಾಗಿ ಬದಲಾಗುತ್ತಿದೆ. ಕ್ಷಿಪ್ರ ನಗರೀಕರಣದ ದೃಷ್ಟಿಯಿಂದ ನಗರಗಳ ಮೂಲ ಸೌಕರ್ಯ ಅಭಿವೃದ್ಧಿಗೆ 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ನಗರೋತ್ತಾನ ಯೋಜನೆ ಘೋಷಣೆ ಮಾಡಲಾಗಿದೆ. ಇದರಿಂದ ಸಣ್ಣ ಸಣ್ಣ ನಗರದಲ್ಲಿ ಸ್ಟಾರ್ಟ್ಅಪ್, ಎಂಎಸ್ಇಂಇ, ಫಿನ್‌ಟೆಕ್ ಹಾಗೂ ಡಿಜಿಟಲ್ ಮೂಲಕಸೌಕರ್ಯಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ನಗರೋತ್ಥಾನ ಯೋಜನೆಯಿಂದ  ಇಂಟಿಗ್ರೇಟೆಡ್ ಟೌನ್‌ಶಿಪ್, ಮೆಗಾ ಟೆಕ್ಸ್‌ಟೈಲ್ ಪಾರ್ಕ್, ಫುಡ್ ಪಾರ್ಕ್, ಕೈಗಾರಿಕೂ ಮೂಲಸೌಕರ್ಯ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದಿದ್ದಾರೆ.

Karnataka Budget 2022: ಪುಣ್ಯ ಕ್ಷೇತ್ರಗಳಿಗೆ ಬಂಪರ್, ಅರ್ಚಕರಿಗೆ, ಯಾತ್ರಾರ್ಥಿಗಳಿಗೆ ಗುಡ್‌ನ್ಯೂಸ್

ಡಿಜಿಟಲ್ ಬ್ಯಾಂಕಿಂಗ್ ಮತ್ತಷ್ಟು ಪರಿಣಾಮಕಾರಿಯಾಗಿ ಬಳಕೆ ಮಾಡಲು ರಾಜ್ಯದ ಸರ್ಕಾರದ ಬಜೆಟ್‌ನಲ್ಲಿನ ಘೋಷಣೆ ನೆರವಾಗಲಿದೆ. ತಂತ್ರಜ್ಞಾನ, ಐಟಿ ಇಲಾಖೆ ವಿಸ್ತರಣೆಯತ್ತ ಬಜೆಟ್ ಗಮನಹರಿಸಿದೆ. ಇನ್ನು ಕೇಂದ್ರ ಸರ್ಕಾರ ಹಾಗೂ ಉದ್ಯಮಿಗಳ ಸಹಯೋಗದಲ್ಲಿ 50 ಕೋಟಿ ವೆಚ್ಚದಲ್ಲಿ ಕರ್ನಾಟಕ ಆ್ಯಕ್ಸಲರೇಶನ್ ನೆಟವರ್ಕ್ ಪರಿಚಯಿಸಲಾಗುತ್ತಿದೆ.  ಇದಕ್ಕೆ ರಾಜ್ಯ ಸರ್ಕಾರ 20 ಕೋಟಿ ರೂಪಾಯಿ ಅನುದಾನ ನೀಡುತ್ತಿದೆ. ತಂತ್ರಜ್ಞಾನ ಅಳವಡಿಕೆಯಲ್ಲಿ,ಡಿಜಿಟಲ್ ಆರ್ಥಿಕತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಕರ್ನಾಟಕ ಬಜೆಟ್ ನೆರವಾಗಲಿದೆ. ಇದಕ್ಕಾಗಿ ಕರ್ನಾಟಕ ರಾಜ್ಯ ಬಜೆಟ್ ಸ್ವಾಗತಿಸುತ್ತೇನೆ. ಇಷ್ಟೇ ಅಲ್ಲ ಪ್ರಗತಿಪರ, ಅಭಿವೃದ್ಧಿ ಪೂರಕ ಹಾಗೂ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆಯಲಿರುವ ಬಜೆಟ್ ಮಂಡಿಸಿದ ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇನೆ ಎಂದು ಬಿವಿ ನಾಯ್ಡು ಹೇಳಿದ್ದಾರೆ.
 

click me!