ಕರ್ನಾಟಕ ಬಜೆಟ್ 2020 : ತವರಿಗೆ ಸಿಎಂ ಉಡುಗೊರೆ ಎಷ್ಟು..?

By Suvarna NewsFirst Published Mar 5, 2020, 12:52 PM IST
Highlights

ಕರ್ನಾಟಕ ಬಜೆಟ್ 2020 ರಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ತವರಾದ ಶಿವಮೊಗ್ಗ ಜಿಲ್ಲೆಗೆ ನೀಡಿದ ಕೊಡುಗೆಗಳೇನು..? 

ಬೆಂಗಳೂರು [ಮಾ.05]: ಕರ್ನಾಟಕ ಬಜೆಟ್ 2020 ರಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ತವರು ಜಿಲ್ಲೆಗೆ ಬರಪೂರ ಕೊಡುಗೆ ನೀಡಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪ ಜನರ ನಿರೀಕ್ಷೆಯಂತೆ ಶಿವಮೊಗ್ಗ ಜಿಲ್ಲೆಗೆ  ಟೂರಿಸಂ ಸರ್ಕ್ಯೂಟ್  ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಜೋಗ ಜಲಪಾತದ ಅಭಿವೃದ್ಧಿಗೆ 500 ಕೋಟಿ ರು. ಮೀಸಲಿಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. 

ಕರ್ನಾಟಕ ಬಜೆಟ್ ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ

ಇನ್ನು ಶಿವಮೊಗ್ಗದಲ್ಲಿ ಔಷಧ ತಯಾರಿಕಾ  ಘಟಕ ಸ್ಥಾಪನೆ ಮಾಡುವುದಾಗಿಯೂ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅಲ್ಲದೇ ಇಲ್ಲಿನ ಕೃಷಿ ವಿಶ್ವವಿದ್ಯಾಲಯಕ್ಕೆ 700 ಎಕರೆ ಜಾಗ ಮಂಜೂರು ಮಾಡಲಾಗಿದೆ.

ಕರ್ನಾಟಕ ಬಜೆಟ್ : ಡಿಕೆಶಿ ನಾಡಿಗೆ ಯಡಿಯೂರಪ್ಪ ಗುಡ್ ನ್ಯೂಸ್...  

ಇನ್ನು ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹಧಾಮಕ್ಕೆ 5 ಕೋಟಿ ರು. ಅನುದಾನ ನೀಡಲಾಗಿದೆ. 

ಇನ್ನು ಮಲೆನಾಡಿನ ರೈತರ ಬೆಳೆಗಳಿಗೆ ಮಾರಕವಾಗಿರುವ ಮಂಗಗಳ ಕಾಟವನ್ನು ತಡೆಯಲು ಶಿವಮೊಗ್ಗದಲ್ಲಿ ಮಂಕಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು, ಮಂಗಗಳ ಪುನರ್ವಸತಿಗಾಗಿ 1.25 ಕೋಟಿ ರು. ಮೀಸಲಿಡಲಾಗುತ್ತಿದೆ.

#Newsin100Seconds I ಕ್ಷಣದ ಪ್ರಮುಖ ಸುದ್ದಿಗಳು

"

click me!