ಕರ್ನಾಟಕ ಬಜೆಟ್ : ಡಿಕೆಶಿ ನಾಡಿಗೆ ಯಡಿಯೂರಪ್ಪ ಗುಡ್ ನ್ಯೂಸ್

By Kannadaprabha News  |  First Published Mar 5, 2020, 12:26 PM IST

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಡಿಕೆ ಶಿವಕುಮಾರ್ ನಾಡಿನ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ರೇಷ್ಮೆ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗುತ್ತಿದೆ. 


ಬೆಂಗಳೂರು [ಮಾ.05]:  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಮನಗರದ ರೇಷ್ಮೆ ಬೆಳೆಗಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ. 

ಕರ್ನಾಟಕ ಬಜೆಟ್ 2020 ರಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಮನಗರದಲ್ಲಿ ರೇಷ್ಮೆ ಹುಳು ಸಂಸ್ಕರಣಾ ಘಟಕ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. 

Latest Videos

undefined

ಇಲ್ಲಿನ ಕಣ್ವ ಫಾರ್ಮಲ್ಲಿ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲಾಗುತ್ತದೆ. ಇದರಿಂದ ರೇಷ್ಮೆ ನೂಲು ಬಿಚ್ಚಣಿಕೆ ದಾರರಿಗೆ ಅನುಕೂಲವಾಗಲಿದೆ. 

ಏತ ನೀರಾವರಿ ಯೋಜನೆಗೆ ಬಂಪರ್ : ಕರ್ನಾಟಕ ಬಜೆಟ್ 2020ರಲ್ಲಿ  ಏತ ನೀರಾವರಿ ಯೋಜನೆಗಾಗಿ 5000 ಕೋಟಿ ನೀಡಲಾಗುತ್ತಿದೆ.  

ಕರ್ನಾಟಕ ಬಜೆಟ್ 2020: ಅಬಕಾರಿ ಮೇಲಿನ ಸುಂಕ ಹೆಚ್ಚಳ, ಎಣ್ಣೆ ಪ್ರಿಯರಿಗೆ ಬಿಗ್ ಶಾಕ್...

ಹೊಸ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿದ್ದು,  ತುಂಗಭದ್ರಾ ಜಲಾಶಯದ ನೀರು ಸಂಗ್ರಹ ಕೊರತೆ ನೀಗಿಸುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ. 

ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣ  ಮಾಡಿ ತುಂಗಭದ್ರಾ ಡ್ಯಾಮ್ ನಲ್ಲಿ ಹೂಳು ಇರುವ ಹಿನ್ನೆಲೆ ಪರ್ಯಾಯ ಹರಿವು ಮೂಲಕ ನೀರು ಸಂಗ್ರಹಣೆಗೆ  ನವಲೆ ಡ್ಯಾಮ್ ವಿಸ್ತೃತ ಯೋಜನೆಗೆ 20 ಕೋಟಿ ಮೀಸಲಿಡಲಾಗುತ್ತಿದೆ. 

 I ಕ್ಷಣದ ಪ್ರಮುಖ ಸುದ್ದಿಗಳು

"

click me!