ಡಿಸ್ನಿ ಹಾಟ್‌ಸ್ಟಾರ್ ಖರೀದಿಸಿ ಕೇವಲ 15 ರೂ ತಿಂಗಳ ಸಬ್‌ಸ್ಕ್ರಿಪ್ಶನ್ ಆಫರ್ ಘೋಷಿಸಿದ ಜಿಯೋಸ್ಟಾರ್!

By Chethan Kumar  |  First Published Nov 15, 2024, 4:05 PM IST

ಕ್ರೀಡೆ ಸೇರಿದಂತೆ ಮನೋರಂಜನೆ ವೇದಿಕೆಯಾಗಿದ್ದ ಡಿಸ್ನಿ ವಾಲ್ಟ್ ಕಂಪನಿಯ ಸ್ಟಾರ್ ಸಂಸ್ಥೆಯನ್ನು ಜಿಯೋ ಖರೀದಿಸಿದೆ. ಡಿಸ್ನಿ ಹಾಟ್‌ಸ್ಟಾರ್ ಇದೀಗ ಜಿಯೋ ಜೊತೆ ವಿಲೀನಗೊಂಡಿದೆ. ಇದೀಗ ಜಿಯೋಸ್ಟಾರ್ ಸ್ಟ್ರೀಮಿಂಗ್ ಶುರುವಾಗಿದೆ. ಇದರ ಬೆನ್ನಲ್ಲೇ ಜಿಯೋಸ್ಟಾರ್ ಇದೀಗ ಕೇವಲ 15 ರೂೂಪಾಯಿಗೆ ತಿಂಗಳ  ಸಬ್‌ಸ್ಕ್ರಿಪ್ಶನ್ ಆಫರ್ ನೀಡಿದೆ.


ಮುಂಬೈ(ನ.15) ಜಿಯೋಸ್ಟಾರ್ ಲಾಂಚ್ ಆಗಿದೆ. ಡಿಸ್ನಿ ಹಾಟ್‌ಸ್ಟಾರ್ ಸಂಸ್ಥೆಯನ್ನೇ ಖರೀದಿಸಿದ ಜಿಯೋ ಇದೀಗ ಜಿಯೋಸ್ಟಾರ್ ಆಗಿ ಹೊಸ ರೂಪದಲ್ಲಿ ಲಾಂಚ್ ಆಗಿದೆ.  ಈ ಮೂಲಕ ಕ್ರೀಡೆ ಹಾಗೂ ಮನೋಜರಂಜನೆ ಒಂದೆಡೆ ಸಿಗುತ್ತಿದೆ. ವಿಲೀನದ ಬಳಿಕ ಡಿಸ್ನಿ ಹಾಟ್‌ಸ್ಟಾರ್ ಇದೀಗ ಜಿಯೋಸ್ಟಾರ್(JioStar.com) ಆಗಿ ಬದಲಾಗಿದೆ. ಅಧಿಕೃತವಾಗಿ ಜಿಯೋಸ್ಟಾರ್ ಕಾರ್ಯಾರಂಭ ಶುರುವಾಗಿದೆ. ಇದರ ಬೆನ್ನಲ್ಲೇ ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಕೇವಲ 15 ರೂಪಾಯಿಯಲ್ಲಿ ತಿಂಗಳ ಸಬ್‌ಸ್ಕ್ರಿಪ್ಶನ್ ಸೇರಿದಂತೆ ಹಲವು ಆಫರ್ ನೀಡಿದೆ. ಹೌದು, ಇದೀಗ ನಿಮ್ಮ ನೆಚ್ಚಿನ ಚಾನೆಲ್‌ನ್ನು ದುಬಾರಿ ಮೊತ್ತ ನೀಡಿ ಸಬ್‌ಸ್ಕ್ರಿಪ್ಶನ್ ಪಡೆಯಬೇಕಿಲ್ಲ. ಅತೀ ಕಡಿಮೆ ಬೆಲೆ ಚಂದಾದಾರಿಕೆ ಪಡೆಯಲು ಸಾಧ್ಯವಿದೆ. 

ಜಿಯೋಸ್ಟಾರ್ ಈಗಾಗಲೇ ಚಾನೆಲ್ ಸಬ್‌ಸ್ಕ್ರಪಿಶನ್ ಪ್ಲಾನ್ ಘೋಷಿಸಿದೆ. ಜಿಯೋಸ್ಟಾರ್ ಶೀಘ್ರದಲ್ಲೆ ಸ್ಟ್ರೀಮಿಂಗ್ ಆರಂಭಿಸಲಿದೆ. ಅದಕ್ಕೂ ಮೊದಲೇ ಅತೀ ಕಡಿಮೆ ದರದ ಸಬ್‌ಸ್ಕ್ರಿಪ್ಶನ್ ಪ್ಲಾನ್ ಘೋಷಿಸಿದೆ. ಸ್ಟಾಂಡರ್ಡ್ ಡೆಫಿನೀಶನ್(SD) ಹಾಗೂ ಹೈ ಡಿಫಿನೀಶನ್(HD) ಎರಡು ವಿಭಾಗದಲ್ಲಿ ಪ್ಲಾನ್ ಘೋಷಿಸಿದೆ. ಚಾನೆಲ್ ಸಬ್‌ಸ್ಕ್ರಿಪ್ಶನ್ ಇದೀಗ ಅತೀ ಕಡಿಮೆ ಅಂದರೆ ಕೇವಲ 15 ರೂಪಾಯಿಂದ ಆರಂಭಗೊಳ್ಳುತ್ತಿದೆ. ಪ್ರಮುಖವಾಗಿ ರೀಜನಲ್ ಚಾನೆಲ್, ಸ್ಪೋರ್ಟ್ಸ್ ಚಾನೆಲ್ ಸೇರಿದಂತೆ ಹಲವು ಮನೋರಂಜನಾ ಚಾನೆಲ್ ಲಭ್ಯವಾಗಲಿದೆ.

Tap to resize

Latest Videos

undefined

ಶೀಘ್ರದಲ್ಲೇ ಜಿಯೋ ಸಿನಿಮಾ ಸ್ಥಗಿತ? ಮುಕೇಶ್ ಅಂಬಾನಿ ಕಂಪನಿಯಲ್ಲಿ ಮಹತ್ವದ ಬೆಳವಣಿಗೆ!

ಸ್ಟಾಂಡರ್ಡ್ ಡಿಫಿನೀಶನ್
ಸ್ಟಾರ್ ವ್ಯಾಲ್ಯೂ ಪ್ಯಾಕ್ ಹಿಂದಿ: 69 ರೂಪಾಯಿ ತಿಂಗಳಿಗೆ
ಸ್ಟಾರ್ ಪ್ರಿಮಿಯಂ ಪ್ಯಾಕ್ ಹಿಂದಿ: 105 ರೂಪಾಯಿ ತಿಂಗಳಿಗೆ
ಸ್ಟಾರ್ ವ್ಯಾಲ್ಯೂ ಪ್ಯಾಕ್ ಮರಾಠಿ ಹಿಂದಿ: 67 ರೂಪಾಯಿ ತಿಂಗಳಿಗೆ
ಸ್ಟಾರ್ ಪ್ರಿಮಿಯಂ ಪ್ಯಾಕ್ ಮರಾಠಿ ಹಿಂದಿ: 110 ರೂಪಾಯಿ ತಿಂಗಳಿಗೆ
ಸ್ಟಾರ್ ವ್ಯಾಲ್ಯೂ ಬೆಂಗಾಲಿ ಹಿಂದಿ: 65 ರೂಪಾಯಿ ತಿಂಗಳಿಗೆ
ಸ್ಟಾರ್ ಪ್ರೀಮಿಯಂ ಪ್ಯಾಕ್ ಬೆಂಗಾಲಿ ಹಿಂದಿ: 110 ರೂಪಾಯಿ ತಿಂಗಳಿಗೆ
ಸ್ಟಾರ್ ವ್ಯಾಲ್ಯೂ ಪ್ಯಾಕ್ ಕನ್ನಡ ಹಿಂದಿ ಮಿನಿ: 45 ರೂಪಾಯಿ ತಿಂಗಳಿಗೆ
ಸ್ಟಾರ್ ವ್ಯಾಲ್ಯೂ ಪ್ಯಾಕ್ ಒಡಿಯಾ ಹಿಂದಿ ಮಿನಿ: 15 ರೂಪಾಯಿ ತಿಂಗಳಿಗೆ
ಡಿಸ್ನಿ ಕಿಡ್ಸ್ ಪ್ಯಾಕ್ : 15 ರೂಪಾಯಿ ತಿಂಗಳಿಗೆ  
ಡಿಸ್ನಿ ಹಂಗಾಮ ಕಿಡ್ಸ್ ಪ್ಯಾಕ್  : 15 ರೂಪಾಯಿ ತಿಂಗಳಿಗೆ
 
ಹೈಡೆಫಿನೀಶನ್ ಪ್ಯಾಕ್
ಸ್ಟಾರ್ ವ್ಯಾಲ್ಯೂ ಪ್ಯಾಕ್ ಲೈಟ್ ಹೆಚ್‌ಡಿ ಹಿಂದಿ  : 88 ರೂಪಾಯಿ ತಿಂಗಳಿಗೆ
ಸ್ಟಾರ್ ಪ್ರಿಮಿಯಂ ಪ್ಯಾಕ್ ಲೈಟ್ ಹೆಚ್‌ಡಿ :  125 ರೂಪಾಯ ತಿಂಗಳಿಗೆ
ಸ್ಟಾರ್ ವ್ಯಾಲ್ಯೂ ಪ್ಯಾಕ್ ಮರಾಠಿ ಲೈಟ್ ಹಿಂದಿ ಹೆಚ್‌ಡಿ : 99 ರೂಪಾಯಿ ತಿಂಗಳಿಗೆ
ಡಿಸ್ನಿ ಕಿಡ್ಸ್ ಪ್ಯಾಕ್ ಹೆಚ್‌ಡಿ : 18 ರೂಪಾಯಿ ತಿಂಗಳಿಗೆ
ಡಿಸ್ನಿ ಹಂಗಾಮ ಕಿಡ್ಸ್ ಪ್ಯಾಕ್ ಹೆಚ್‌ಡಿ :  18 ರೂಪಾಯಿ ತಿಂಗಳಿಗೆ

ಸಾವಿರಾರು ಕೋಟಿ ಒಡೆಯ ಮುಕೇಶ್ ಅಂಬಾನಿಗೆ ಫ್ರೀ ಆಫರ್ ಕೊಟ್ಟ ಮಕ್ಕಳು; ಏನ್ಮಾಡ್ತಾರೆ ರಿಲಯನ್ಸ್ ಮಾಲೀಕ?
 
ಭಾರತದಲ್ಲಿ ಕ್ರೀಡೆ ಲೈವ್ ಸ್ಟ್ರೀಮ್ ಮೂಲಕ ಡಿಸ್ನಿ ಹಾಟ್‌ಸ್ಟಾರ್ ಅತ್ಯಂತ ಜನಪ್ರಿಯವಾಗಿದೆ. ಇತ್ತ ಜಿಯೋ 18 ಸ್ಪೋರ್ಟ್ಸ್ ಮೂಲಕ ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿತ್ತು. ಕಳೆದ ಐಪಿಎಲ್ ಟೂರ್ನಿಗಳುನ್ನು ಸ್ಟಾರ್ ಸ್ಪೋರ್ಟ್ಸ್ ಟಿವಿ ಮೂಲಕ ಪ್ರಸಾರ ಮಾಡಿದರೆ, ಜಿಯೋ ಸಿನಿಮಾ ಮೂಲಕ ಲೈವ್ ಸ್ಟ್ರೀಮ್ ಮಾಡುತ್ತಿದೆ. ಇದೀಗ ಜಿಯೋ ಎಲ್ಲಾ ಡಿಸ್ನಿ ವಾಲ್ಟ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಟಾರ್ ಸ್ಪೋರ್ಟ್ಸ್ ಹಾಗೂ ಡಿಸ್ನಿ ಹಾಟ್‌ಸ್ಟಾರ್ ಖರೀದಿಸಿದೆ. ಇದೀಗಿ ಜಿಯೋ ಸ್ಟಾರ್ ಮೂಲಕ ಗ್ರಾಹಕರಿಗೆ ಮನೋರಂಜನೆ ಹಾಗೂ ಕ್ರೀಡೆ ಎರಡನ್ನೂ ನೀಡಲಿದೆ. ಜಿಯೋ ಸ್ಟಾರ್ ಇದೀಗ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ.
 

click me!