ಹೊಸ ವರ್ಷದಲ್ಲಿ ಜಿಯೋ ಬಳಕೆದಾರರಿಗೆ ಸಿಗಲಿದೆ Rs 2150 ಗಿಫ್ಟ್ 

By Mahmad Rafik  |  First Published Jan 1, 2025, 2:48 PM IST

ರಿಲಯನ್ಸ್ ಜಿಯೋ ಹೊಸ ವರ್ಷದ ಪ್ರಯುಕ್ತ ₹2150 ಮೌಲ್ಯದ ಗಿಫ್ಟ್‌ಗಳನ್ನು ನೀಡುತ್ತಿದೆ. ಈ ವೋಚರ್ ಮತ್ತು ಗಿಫ್ಟ್ ಪಡೆಯೋದು ಹೇಗೆ ಎಂಬುದರ ಮಾಹಿತಿ ಈ ಲೇಖನದಲ್ಲಿದೆ. 


ಮುಂಬೈ: ಭಾರತೀಯ ಟೆಲಿಕಾಂ ಆಪರೇಟರ್ ಆಗಿರುವ ರಿಲಯನ್ಸ್ ಜಿಯೋ ಹೊಸ ವರ್ಷಕ್ಕೆ ಒಂದಾದ ನಂತರ ಒಂದರಂತೆ ಆಫರ್‌ಗಳನ್ನು ನೀಡುತ್ತಿದೆ. ಈ ಮೂಲಕ ಗ್ರಾಹಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಿಲಯನ್ಸ್ ಜಿಯೋ ಕೆಲಸ ಮಾಡುತ್ತಿದೆ. ಇದೀಗ 2025ರ ಶುಭಾರಂಭದಲ್ಲಿ ತನ್ನ ಬಳಕೆದಾರರಿಗೆ ವಿಶೇಷ ವೋಚರ್ ಗಿಫ್ಟ್ ಕೊಡಲು ರಿಲಯನ್ಸ್ ಜಿಯೋ ಮುಂದಾಗಿದೆ. 2,150 ರೂಪಾಯಿ ವೋಚರ್ ಮತ್ತು ಗಿಫ್ಟ್ ಪಡೆಯೋದು ಹೇಗೆ ಎಂಬುದರ ಮಾಹಿತಿ ಈ ಲೇಖನದಲ್ಲಿದೆ. 

2025ಕ್ಕೆ ರಿಲಯನ್ಸ್ ಜಿಯೋ ಬಳಕೆದಾರರು 2025 ರೂಪಾಯಿ ಮೌಲ್ಯದ ಪ್ರಿಪೇಯ್ಡ್ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕು. ಈ ಪ್ಲಾನ್ ಆಕ್ಟಿವ್ ಬಳಿಕ ಗ್ರಾಹಕರಿಗೆ 2 ಸಾವಿರಕ್ಕೂ ಅಧಿಕ ಮೌಲ್ಯದ ವೋಚರ್ ಉಚಿತವಾಗಿ ಸಿಗಲಿದೆ. ರಿಲಯನ್ಸ್ ಜಿಯೋ ಈ ಪ್ಲಾನ್‌ಗೆ 'ನ್ಯೂ ಇಯರ್ ವೆಲ್‌ಕಮ್' ಎಂದು ಕರೆದಿದ್ದು, ಡಿಸೆಂಬರ್ 11ರಂದು ಈ ಯೋಜನೆ ಲಾಂಚ್ ಆಗಿದೆ. ಈ ಆಫರ್ ಸೀಮಿತ ಅವಧಿಗೆ ಸೀಮಿತವಾಗಿದ್ದು, ಜನವರಿ 11ರಂದು ಅಂತ್ಯವಾಗಲಿದೆ. 

Tap to resize

Latest Videos

2025 ರೂಪಾಯಿ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳುವ ಗ್ರಾಹಕರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್, ಉಚಿತ 100 ಎಸ್‌ಎಂಎಸ್, ಅನ್‌ಲಿಮಿಟೆಡ್ 5G ಡೇಟಾ ಸಹ ಸಿಗುತ್ತದೆ. 200 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಕ್ಲೌಡ್  ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. 

Reliance Jio Rs 2025 Prepaid Plan
200 ದಿನ ವ್ಯಾಲಿಡಿಟಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ ಸಿಗುತ್ತದೆ. 200 ದಿನಗಳಲ್ಲಿ ಬಳಕೆದಾರರಿಗೆ ಒಟ್ಟು 500 GB ಲಭ್ಯವಾಗುತ್ತದೆ. ಈ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ ಬಳಿಕ ಗ್ರಾಹಕರಿಗೆ ಹೆಚ್ಚುವರಿಯಾಗಿ ಸಿಗುವ ಲಾಭಗಳು ಏನು ಅಂತ ನೋಡೋಣ ಬನ್ನಿ. 

ಇದನ್ನೂ ಓದಿ: 365ಕ್ಕೆ 395ರ ಚೆಕ್‌ಮೆಟ್ ಕೊಟ್ಟ BSNL; ಏನಾಗ್ತಿದೆ ಅಂತ ಗೊಂದಲದಲ್ಲಿ ಸಿಲುಕಿದ ಏರ್‌ಟೆಲ್, ಜಿಯೋ

ನ್ಯೂ ಇಯರ್ ವೆಲ್‌ಮ್ ಪ್ಲಾನ್ ರೀಚಾರ್ಜ್ ಮಾಡಿಸಿಕೊಂಡ ಬಳಕೆದಾರರಿಗೆ  2,150 ರೂಪಾಯಿ ಲಾಭವಾಗಲಿದೆ. ಫ್ಲೈಟ್ ಟಿಕೆಟ್ ಬುಕಿಂಗ್ ಮೇಲೆ ಬಳಕೆದಾರರಿಗೆ ಅಧಿಕ ಲಾಭ ಸಿಗಲಿದೆ. EaseMyTrip ಮೂಲಕ ಟ್ರಿಪ್ ಪ್ಲಾನ್ ಮಾಡಿದ್ರೆ 1,500 ರೂಪಾಯಿವರೆಗೆ ಡಿಸ್ಕೌಂಟ್ ಸಿಗುತ್ತದೆ. ಈ ಲಾಭವನ್ನು ವೆಬ್‌ಸೈಟ್ ಅಥವಾ ಆಪ್ ಮೂಲಕ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆ ಫುಡ್ ಡೆಲಿವರಿ ಪ್ಲಾಟ್‌ಫಾರಂ Swiggಯಲ್ಲಿ 499 ರೂ.ಗಿಂತ ಹೆಚ್ಚಿನ ಆರ್ಡರ್ ಮೇಲೆ 150 ರೂ.ವರೆಗೆ ರಿಯಾಯ್ತಿ ಸಿಗಲಿದೆ.

ಇಷ್ಟು ಮಾತ್ರವಲ್ಲಿ Aji ಪ್ಲಾಟ್‌ಫಾರಂನಲ್ಲಿ 2,500 ರೂ.ಗಿಂತ ಅಧಿಕ ಶಾಪಿಂಗ್ ಮೇಲೆ  500 ರೂಪಾಯಿ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಈ ರೀತಿಯಾಗಿ ನ್ಯೂ ಇಯರ್ ವೆಲ್‌ಮ್ ಪ್ಲಾನ್ ರೀಚಾರ್ಜ್ ಮಾಡಿಸಿಕೊಂಡ ಬಳಕೆದಾರರಿಗೆ ಒಟ್ಟು 2,150 ರೂಪಾಯಿವರೆಗೆ ಹೆಚ್ಚುವರಿ ಲಾಭ ಸಿಗುತ್ತದೆ.

ಇದನ್ನೂ ಓದಿ: ವಿಭಿನ್ನ ವ್ಯಾಲಿಡಿಟಿ, ಹೆಚ್ಚು ಡೇಟಾ; ಜಿಯೋ ನೀಡ್ತಿರೋ 5 ಹೊಸ ಅನ್‌ಲಿಮಿಟೆಡ್ 5G ಪ್ಲಾನ್‌

click me!