
ಇಂದಿನ ದಿನಗಳಲ್ಲಿ ವ್ಯಾಪಾರವೂ ಹೊಸತನವನ್ನು ಪಡೆದುಕೊಳ್ಳುತ್ತಿವೆ. 10 ವರ್ಷಗಳ ಹಿಂದೆ ಇದ್ದ ವ್ಯಾಪಾರಕ್ಕೆ ಇಂದು ಮಾರುಕಟ್ಟೆಯಲ್ಲಿ ಯಾವುದೇ ಬೇಡಿಕೆ ಇರಲ್ಲ. ಆದ್ದರಿಂದ ವ್ಯಾಪಾರಿಗಳು ಮಾರುಕಟ್ಟೆಯ ಬದಲಾವಣೆಗಳಿಗೆ ತಕ್ಕಂತೆ ಸಮಯಕ್ಕೆ ಸರಿಯಾಗಿ ತಮ್ಮನ್ನು ಮತ್ತು ತಮ್ಮ ಉತ್ಪನ್ನವನ್ನು ಬದಲಿಸಿಕೊಳ್ಳುತ್ತಿರಬೇಕು. ಹೀಗಾದ್ರೆ ಮಾತ್ರ ವ್ಯಾಪಾರದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ. ಇಂದು ನಾವು ಹೇಳುತ್ತಿರುವ ವ್ಯಾಪಾರ ಟ್ರೆಂಡಿಂಗ್‌ನಲ್ಲಿದ್ದು, ನೀವಿರುವ ಪ್ರದೇಶದಲ್ಲಿಯೇ ಸಣ್ಣದಾಗಿ ಆರಂಭಿಸಬಹುದು. ಈ ವಸ್ತುವಿಗೆ ಹೆಚ್ಚು ಬೇಡಿಕೆ ಹೊಂದಿರುವ ಕಾರಣ ಪ್ರತಿದಿನವೂ ವ್ಯಾಪಾರ ನಡೆಯುತ್ತದೆ.
ಇತ್ತೀಚಿನ ದಿನಗಳಲ್ಲಿ ಸೇವಿಸುವ ಆಹಾರದ ಟ್ರೆಂಡ್ ಸಹ ಬದಲಾಗುತ್ತಿದೆ. ಮಕ್ಕಳಿರುವ ಮನೆಯಲ್ಲಿ ಬೆಳಗಿನ ತಿಂಡಿಯಲ್ಲಿ ಬ್ರೆಡ್ ಅಧಿಕವಾಗಿ ಬಳಕೆಯಾಗುತ್ತಿದೆ. ಆದ್ದರಿಂದ ನೀವಿರುವ ಪ್ರದೇಶದಲ್ಲಿ ಬ್ರೆಡ್ ತಯಾರಿಕಾ ಘಟಕ ಆರಂಭಿಸಬಹುದು. ಬ್ರೆಡ್ ತಯಾರಿಸಿ ಪೊಟ್ಟಣಗಳನ್ನು ನಿಮ್ಮ ಸುತ್ತಲಿರುವ ಅಂಗಡಿಗಳಿಗೆ ಮತ್ತು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಹಣ ಸಂಪಾದಿಸಬಹುದು.
ಬ್ರೆಡ್ ತಯಾರಿಕಾ ಘಟಕ ಆರಂಭಿಸಲು ನಿಗದಿತವಾದ ಕಟ್ಟಡ, ಸುಧಾರಿತ ಯಂತ್ರೋಪಕರಣ, ನೀರು ಮತ್ತು ವಿದ್ಯುತ್ ಸರಬರಾಜು ಹೊಂದಿಬೇಕಾಗುತ್ತದೆ. ಇದೆಲ್ಲರ ಜೊತೆಗೆ ನಿಮಗೆ ಮಾರುಕಟ್ಟೆಯಲ್ಲಿ ನಿಮ್ಮ ಉತ್ಪನ್ನ ಮಾರಾಟ ಮಾಡುವ ಕಲೆಯೂ ನಿಮ್ಮಲ್ಲಿರಬೇಕು. ಬ್ರೆಡ್ ತಯಾರಿಕಾ ಘಟಕ ಆರಂಭಿಸಲು ಕನಿಷ್ಠ ನಿಮಗೆ 4 ರಿಂದ 5 ಲಕ್ಷ ರೂಪಾಯಿ ಬೇಕಾಗುತ್ತದೆ. ಮುದ್ರಾ ಯೋಜನೆಯಡಿಯಲ್ಲಿ ಈ ಉದ್ಯಮ ಆರಂಭಿಸಲು ನಿಮಗೆ ಸಾಲದ ನೆರವು ಸಹ ಸಿಗುತ್ತದೆ. ಕನಿಷ್ಠ 10 ಸಾವಿರ ಚದರಿ ಅಡಿ ಜಾಗ ನಿಮಗೆ ಬೇಕಾಗುತ್ತದೆ.
ಇದನ್ನೂ ಓದಿ: ಸ್ನೇಹಿತರೆಲ್ಲಾ ವಿದೇಶಕ್ಕೆ ಹೋದ್ರೆ, ಊರಲ್ಲಿದ್ದುಕೊಂಡೇ ವರ್ಷಕ್ಕೆ ₹2.5 ಕೋಟಿ ಗಳಿಸುತ್ತಿರೋ 34ರ ಯುವಕ
ಬ್ರೆಡ್ ಆಹಾರ ಉತ್ಪನ್ನವಾಗಿದ್ದು, ಈ ವ್ಯವಹಾರ ಪ್ರಾರಂಭಿಸಲು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಎಫ್‌ಎಸ್‌ಎಸ್‌ಎಐನಿಂದ ಆಹಾರ ವ್ಯಾಪಾರ ಕಾರ್ಯಾಚರಣೆ ಪರವಾನಿಗೆಗೆ ಅರ್ಜಿಯನ್ನು ಸಲ್ಲಿಸಬೇಕಾಕುತ್ತದೆ. ಪರವಾನಿಗೆ ಹೊಂದಿರುವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುತ್ತದೆ.
ಮಾರುಕಟ್ಟೆಯಲ್ಲಿ ಒಂದು ಬ್ರೆಡ್ ಪ್ಯಾಕೇಟ್ 40 ರಿಂದ 60 ರೂಪಾಯಿವರೆಗೆ ಮಾರಾಟವಾಗುತ್ತದೆ. ಒಂದು ಪ್ಯಾಕೇಟ್ ಮೇಲೆ ಕನಿಷ್ಠ ಶೇ.20 ರಿಂದ 30 ರಷ್ಟು ಲಾಭ ಸಿಗುತ್ತದೆ. ಹೆಚ್ಚು ಉತ್ಪಾದನೆ ಮಾಡದಷ್ಟು ನಿಮ್ಮ ಲಾಭದ ಪ್ರಮಾಣವೂ ಸಹ ಏರಿಕೆಯಾಗುತ್ತದೆ. ನಿಮ್ಮ ಬ್ರೆಡ್ ಪ್ಯಾಕೇಟ್‌ಗೆ ಬೇಡಿಕೆ ಹೆಚ್ಚಾದ್ರೆ ತಿಂಗಳಿಗೆ 1 ಲಕ್ಷ ರೂಪಾಯಿವರೆಗೂ ಹಣ ಸಂಪಾದಿಸಬಹುದು. ಭವಿಷ್ಯದಲ್ಲಿ ವ್ಯಾಪಾರವನ್ನ ವಿಸ್ತರಿಸುವ ಅವಕಾಶಗಳು ಇದರಲ್ಲಿವೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ವ್ಯಾಪಾರ ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
ಇದನ್ನೂ ಓದಿ: 9 To 5 ಜಾಬ್ ಜೊತೆಯಲ್ಲಿಯೇ ಮಾಡಬಹುದಾದ ಬ್ಯುಸಿನೆಸ್ ಐಡಿಯಾ; ಕಡಿಮೆ ಕೆಲಸ, ಕೈ ತುಂಬಾ ಹಣ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.