ಜಿಯೋ ಗ್ರಾಹಕರಿಗೆ ಬಿಗ್ ಆಫರ್: ಕೇವಲ 200 ರೂಪಾಯಿಗೆ ಉಚಿತ OTT ಜೊತೆ ಅನ್‌ಲಿಮಿಟೆಡ್ 5G ಡೇಟಾ!

Published : Aug 10, 2026, 10:24 PM IST
Jio Plan

ಸಾರಾಂಶ

ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಮೂರು ಹೊಸ 'ಆಡ್-ಆನ್' ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳು 28, 84, ಮತ್ತು 365 ದಿನಗಳ ವ್ಯಾಲಿಡಿಟಿಯೊಂದಿಗೆ ಅಧಿಕ ಡೇಟಾ, ಉಚಿತ ಒಟಿಟಿ ಚಂದಾದಾರಿಕೆ ಮತ್ತು ಲೈವ್ ಟಿವಿ ಚಾನೆಲ್‌ಗಳ ಸೌಲಭ್ಯವನ್ನು ಒದಗಿಸುತ್ತವೆ.

ಬೆಂಗಳೂರು (ಆ.10): ದೇಶದ ಪ್ರಮುಖ ಟೆಲಿಕಾಂ ಕಂಪನಿ ರಿಲಾಯನ್ಸ್ ಜಿಯೋ (Reliance Jio) ತನ್ನ ಸುಮಾರು 52 ಕೋಟಿಗೂ ಅಧಿಕ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಡೇಟಾ ಹಾಗೂ ಒಟಿಟಿ (OTT) ಮನರಂಜನೆ ಬಯಸುವ ಬಳಕೆದಾರರಿಗಾಗಿ ಕಂಪನಿಯು ಮೂರು ಹೊಸ 'ಆಡ್-ಆನ್' ರೀಚಾರ್ಜ್ ಪ್ಲಾನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮೂರೂ ಪ್ಯಾಕ್‌ಗಳು ಉಚಿತ ಒಟಿಟಿ ಸಬ್‌ಸ್ಕ್ರಿಪ್ಶನ್‌, ಹೈ-ಸ್ಪೀಡ್ ಡೇಟಾ ಹಾಗೂ 1,000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳ ವೀಕ್ಷಣೆಯ ಉಚಿತ ಸೌಲಭ್ಯದೊಂದಿಗೆ ಲಭ್ಯವಿವೆ. 28 ದಿನಗಳು, 84 ದಿನಗಳು ಮತ್ತು 365 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್‌ಗಳ ಸಂಪೂರ್ಣ ವಿವರ..

1. 28 ದಿನಗಳ ವ್ಯಾಲಿಡಿಟಿ ಪ್ಲ್ಯಾನ್‌(ರೂ. 200)

ಜಿಯೋ ಪರಿಚಯಿಸಿರುವ ಈ ಹೊಸ 28 ದಿನಗಳ ರೀಚಾರ್ಜ್ ಪ್ಯಾಕ್‌ನ ಬೆಲೆ ರೂ. 200 ಆಗಿದೆ.

  • ಡೇಟಾ ಸೌಲಭ್ಯ: ದಿನದ ಮಿತಿಯಿಲ್ಲದೆ (Daily limit) ಒಟ್ಟು 30GB ಹೈ-ಸ್ಪೀಡ್ ಡೇಟಾ ದೊರೆಯಲಿದೆ. ಇದರೊಂದಿಗೆ ಅನ್‌ಲಿಮಿಟೆಡ್ 5G ಡೇಟಾ ಸೌಲಭ್ಯವೂ ಸಿಗಲಿದೆ.
  • ಇತರ ಪ್ರಯೋಜನ:1,000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು ಹಾಗೂ ಪ್ರಮುಖ ಒಟಿಟಿ ಆ್ಯಪ್‌ಗಳ ಚಂದಾದಾರಿಕೆ ಸಿಗಲಿದೆ.
  • ಇದರಲ್ಲಿ ವಾಯ್ಸ್ ಕಾಲಿಂಗ್ (ಅನ್ಲಿಮಿಟೆಡ್ ಕರೆ) ಸೌಲಭ್ಯವಿರುವುದಿಲ್ಲ. ಇದನ್ನು ನಿಮ್ಮ ಪ್ರಸ್ತುತ ಚಾಲ್ತಿಯಲ್ಲಿರುವ ಮೂಲ (Active base) ಪ್ಲಾನ್‌ನೊಂದಿಗೆ 'ಆಡ್-ಆನ್' (Add-on) ಪ್ಯಾಕ್ ಆಗಿ ರೀಚಾರ್ಜ್ ಮಾಡಿಕೊಳ್ಳಬಹುದು.

2. 84 ದಿನಗಳ ವ್ಯಾಲಿಡಿಟಿಯ ಪ್ಲಾನ್ (ರೂ. 550)

ಮಧ್ಯಮ ಅವಧಿಯ ವ್ಯಾಲಿಡಿಟಿ ಬಯಸುವವರಿಗಾಗಿ ಜಿಯೋ ರೂ. 550 ಬೆಲೆಯ ಹೊಸ ಪ್ಲಾನ್ ತಂದಿದೆ.

  • ಡೇಟಾ ಸೌಲಭ್ಯ: 84 ದಿನಗಳ ಅವಧಿಗೆ ಒಟ್ಟು 90GB ಹೈ-ಸ್ಪೀಡ್ ಡೇಟಾ ಹಾಗೂ ಅನ್‌ಲಿಮಿಟೆಡ್ 5G ಡೇಟಾ ಲಭ್ಯವಾಗಲಿದೆ.
  • ಇತರ ಪ್ರಯೋಜನ: 1,000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು ಹಾಗೂ ಒಟಿಟಿ ಆ್ಯಪ್‌ಗಳನ್ನು ವೀಕ್ಷಿಸಬಹುದು.
  • ಇದನ್ನು ಸಹ ಯೂಸರ್‌ಗಳು ತಮ್ಮ ಆಕ್ಟಿವ್ ಬೇಸ್ ಪ್ಲಾನ್ ಜೊತೆಗೆ ಹೆಚ್ಚುವರಿ ಡೇಟಾ ಮತ್ತು ಒಟಿಟಿ ಕೊಡುಗೆಗಾಗಿ ಬಳಸಬಹುದು.

3.365 ದಿನಗಳ ವಾರ್ಷಿಕ ಪ್ಲಾನ್ (ರೂ. 2,000)

ವರ್ಷಪೂರ್ತಿ ನಿರಂತರ ಮನರಂಜನೆ ಬಯಸುವ ಗ್ರಾಹಕರಿಗೆ ರೂ. 2,000 ಬೆಲೆಯ ಈ ವಾರ್ಷಿಕ ಪ್ಲಾನ್ ಅತ್ಯಂತ ಉಪಯುಕ್ತವಾಗಿದೆ.

  • ಡೇಟಾ ಸೌಲಭ್ಯ: 365 ದಿನಗಳ ಅವಧಿಗೆ ಒಟ್ಟು 365GB ಹೈ-ಸ್ಪೀಡ್ ಡೇಟಾ ಹಾಗೂ ಅನ್‌ಲಿಮಿಟೆಡ್ 5G ಡೇಟಾ ಸಿಗಲಿದೆ.
  • ಇತರ ಪ್ರಯೋಜನ:15ಕ್ಕೂ ಹೆಚ್ಚು ಪ್ರಮುಖ ಒಟಿಟಿ ಆ್ಯಪ್‌ಗಳು ಹಾಗೂ 1,000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳ ಉಚಿತ ಆಕ್ಸೆಸ್ ದೊರೆಯಲಿದೆ.
  • ಈ ಪ್ರಿಪೇಡ್ ಪ್ಲಾನ್ ಅನ್ನು ಸಹ ಬೇಸ್ ಪ್ಲಾನ್ ಜೊತೆಗೆ 'ಆಡ್-ಆನ್' ಆಗಿ ಬಳಕೆ ಮಾಡಿಕೊಳ್ಳಬಹುದು.

ಸಿಗಲಿರುವ ಪ್ರಮುಖ ಒಟಿಟಿ (OTT) ಆ್ಯಪ್‌ಗಳು

ಜಿಯೋ ಉಲ್ಲೇಖಿಸಿರುವ ಪ್ರಕಾರ, ಈ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳುವ ಗ್ರಾಹಕರಿಗೆ ಈ ಕೆಳಗಿನ ಪ್ರಸಿದ್ಧ ಒಟಿಟಿ ಆ್ಯಪ್‌ಗಳ ಚಂದಾದಾರಿಕೆ ಲಭ್ಯವಾಗಲಿದೆ. ಅದರಲ್ಲಿ ಪ್ರಮುಖವಾಗಿ ಜಿಯೋಟಿವಿ (JioTV), ಜಿಯೋಎಐ ಕ್ಲೌಡ್ (JioAI Cloud), ಜಿಯೋ ಹಾಟ್‌ಸ್ಟಾರ್ (JioHotstar), ಯೂಟ್ಯೂಬ್ ಪ್ರೀಮಿಯಂ (YouTube Premium), ಅಮೆಜಾನ್ ಪ್ರೈಮ್ (Amazon Prime), ಸೋನಿಲೈವ್ (SonyLIV), ಜೀ5 (ZEE5), ಲಯನ್ಸ್‌ಗೇಟ್ ಪ್ಲೇ (Lionsgate Play), ಡಿಸ್ಕವರಿ+ (Discovery+), ಸನ್ ಎನ್‌ಎಕ್ಸ್‌ಟಿ (SunNXT), ಫ್ಯಾನ್‌ಕೋಡ್ (FanCode), ಹೊಯ್ಚೊಯ್ (Hoichoi), ಚೌಪಾಲ್ (Chaupal).ಕಾಂಚಾ ಲಂಕಾ (Kanccha Lannka), ಟೈಮ್ಸ್ ಪ್ಲೇ (TimesPlay) ಹಾಗೂ ತರಂಗ್ ಪ್ಲಸ್ (Tarang Plus). ಸಿನಿಮಾ, ವೆಬ್ ಸಿರೀಸ್‌ ಹಾಗೂ ಲೈವ್ ಸ್ಪೋರ್ಟ್ಸ್ ಪ್ರಿಯರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುತ್ತಿರುವ ಈ ಕೊಡುಗೆ ನಿಜಕ್ಕೂ ಆಕರ್ಷಕವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

UPI ಶುಲ್ಕದ ಕುರಿತ ಗೊಂದಲಕ್ಕೆ ಕ್ಲಿಯರ್‌ ಕಟ್‌ ಉತ್ತರ ನೀಡಿದ ಪೇಮೆಂಟ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾ
ಮಗಳ PPF ಅಕೌಂಟ್‌ನಿಂದ 8 ಲಕ್ಷ ಹಣ ತೆಗೆದ ಅಪ್ಪ, ಕೋರ್ಟ್‌ ಮೆಟ್ಟಿಲೇರಿ ಬಡ್ಡಿ ಸಮೇತ ವಾಪಾಸ್‌ ಪಡೆದ ಪುತ್ರಿ!