
ಮಹಿಳಾ ಸಬಲೀಕರಣಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಮಹಿಳೆಯರ ಅಗತ್ಯತೆಗಳು, ಶಾಪಿಂಗ್, ಟ್ರಾವೆಲ್, ಆರೋಗ್ಯಕ್ಕೆ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಾರಿ ಶಕ್ತಿ ರೂಪೇ ಪ್ಲಾಟಿನಂ ಡೇಬಿಟ್ ಕಾರ್ಡ್ ರೂಪಿಡಿಸಿದೆ. ಈ ಒಂದು ಕಾರ್ಡ್ ತೆಗೆದುಕೊಂಡರೆ ವಿವಿಧ ರೀತಿಯ ಬೆನಿಫಿಟ್ಸ್ ಸಿಗುತ್ತದೆ. ಸುಮಾರು 10 ಲಕ್ಷ ರೂಪಾಯಿ ವರೆಗೂ ಅಪಘಾತ ವಿಮೆ ಜೊತೆಗೆ ಶಾಪಿಂಗ್, ಒಟಿಟಿ ಎಂಟರ್ ಟೈನ್ಮೆಂಟ್ ನಂತಹ ವಿಶೇಷ ಪ್ರಯೋಜನಗಳು ಸಿಗುತ್ತದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.
ನಾರಿ ಶಕ್ತಿ ಪ್ಲಾಟಿನಂ ಡೇಬಿಟ್ ಕಾರ್ಡ್ ಮೂಲಕ ಎಸ್‌ಬಿಐ ಎಟಿಎಂಗಳೊಂದಿಗೆ ಇತರ ಎಟಿಎಂನಲ್ಲಿಯೂ ವಿಶ್ವದಾದ್ಯಂತ ಎಲ್ಲಿ ಆದರೂ ಹಣ ವಿಥ್ ಡ್ರಾ ಮಾಡಬಹುದು. ಇ-ಕಾಮರ್ಸ್ ಟ್ರಾನ್ಸಕ್ಷನ್ ಮೂಲಕ ಸುರಕ್ಷಿತವಾಗಿ ಆನ್‌ಲೈನ್ ಶಾಪಿಂಗ್ ಮಾಡಬಹುದು. ಇದರಲ್ಲಿ ಕಾಂಪ್ಲಿಮೆಂಟರಿ ಏರ್‌ಪೋರ್ಟ್ ಲಾಂಜ್ ಪ್ರವೇಶದೊಂದಿಗೆ ವಿವಿಧ ಫೀಚರ್ಗಳು ಲಭ್ಯವಿದೆ.
ಬುಕ್ ಮೈ ಶೋದಲ್ಲಿ ಈ ವಿವಾರಡ್ ಪಾಯಿಂಟ್ಸ್ ಬಳಕೆ ಮಾಡಿಕೊಂಡು ಸಿನಿಮಾ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಜೊತೆಗೆ ಮೊಬೈಲ್ ರಿಚಾರ್ಜ್, ಕರೆಂಟ್ ಬಿಲ್, ಡಿಟಿಎಚ್, ಗ್ಯಾಸ್, ಫಾಸ್ಟ್ ಟ್ಯಾಗ್ ನಂತಹ ವಿವಿಧ ರೀತಿಯ ಬಿಲ್‌ಗಳನ್ನು ರಿವಾರ್ಡ್ ಪಾಯಿಂಟ್‌ಗಳೊಂದಿಗೆ ಪಾವತಿ ಮಾಡಬಹುದು.
ಆದರೆ, ಎಚ್‌ಬಿಐ ನಾಯಿ ಶಕ್ತಿ ಪ್ಲಾಟಿನಂ ಕಾರ್ಡ್ ಮೂಲಕ 10 ಲಕ್ಷ ವೈಯುಕ್ತಿಕ ಅಪಘಾತ ವಿಮೆ ಪಡೆದುಕೊಳ್ಳಲು, ಅಪಘಾತ ಸಂಭವಿಸಿದ 30 ದಿನಗಳ ಒಳಗೆ ಈ ಕಾರ್ಡ್ ಮೂಲಕ ಯಾವುದಾದರೂ ಪಿಓಎಸ್ ಮೆಷಿನ್ ವಹಿವಾಟು ಅಥವಾ ಇ ಕಾಮರ್ಸ್ ವಹಿವಾಟು ಮಾಡಿರಬೇಕು. 30 ದಿನಗಳ ಒಳಗೆ ಕಾರ್ಡ್ ಬಳಕೆ ಮಾಡಿಲ್ಲ ಎಂದರೆ, ಅಪಘಾತ ವಿಮೆ ಕವರೇಜ್ ಅನ್ನೊದು ಅನ್ವಯ ಆಗೋದಿಲ್ಲ.
SBI Nari Shakti RuPay Platinum Debit Card 👩🏻✨
Special RuPay Platinum Debit Card exclusively for women, packed with shopping, entertainment, travel & lifestyle benefits.
🎁 YEARLY BENEFITS:
🛍️ ₹1,000 Flipkart GV
→ ₹250 × 4 vouchersn(Once per quarter)
💄 ₹500 Nykaa GV
🎬… pic.twitter.com/9U3H89z6xV— CardMintz (@CardMintz) August 10, 2026
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.