ಡಿಪಾರ್ಟ್‌ಮೆಂಟ್ ಆಫ್ ಡಿಇನ್‌ವೆಸ್ಟ್‌ಮೆಂಟ್ (ಡಿಐಪಿಎಎಂ) ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ನಲ್ಲಿ ಎರಡು ರೈಲ್ವೆ ಕಂಪನಿಗಳು ನೀಡಿರುವ ಹಣದ ಬಗ್ಗೆ ಮಾಹಿತಿ ನೀಡಿವೆ.
ಮುಂಬೈ (ಡಿ.5): ಸರ್ಕಾರಿ ಸ್ವಾಮ್ಯದ ರೈಲ್ವೆ ಕಂಪನಿಗಳಾದ ಇಂಡಿಯನ್ ರೈಲ್ವೇಸ್ ಫೈನಾನ್ಸ್ ಕಾರ್ಪೊರೇಷನ್ (ಐಆರ್‌ಎಫ್‌ಸಿ) ಮತ್ತು ಐಆರ್‌ಸಿಟಿಸಿ ಒಟ್ಟು ₹1,100 ಕೋಟಿಯನ್ನು ಡಿವಿಡೆಂಡ್ ಆಗಿ ಕೇಂದ್ರ ಸರ್ಕಾರಕ್ಕೆ ಹಣ ಪಾವತಿ ಮಾಡಿದೆ. ಡಿಪಾರ್ಟ್‌ಮೆಂಟ್ ಆಫ್ ಡಿಇನ್‌ವೆಸ್ಟ್‌ಮೆಂಟ್ (ಡಿಐಪಿಎಎಂ) ಸೋಶಿಯಲ್ ಮೀಡಿಯಾ ಫ್ಲಾಟ್‌ಫರ್ಮ್ ಎಕ್ಸ್‌ನಲ್ಲಿ ಈ ವಿಚಾರ ಹಂಚಿಕೊಂಡಿದೆ. ಐಆರ್‌ಎಫ್‌ಸಿಯಿಂದ ಕೇಂದ್ರ ಸರ್ಕಾರ 903 ಕೋಟಿ ರೂಪಾಯಿಯನ್ನು ಲಾಭಾಂಶವಾಗಿ ಪಡೆದುಕೊಂಡಿದ್ದರೆ, ರೈಲ್ವೆ ಟಿಕೆಟಿಂಗ್ ಕಂಪನಿಯಾಗಿರುವ ಐಆರ್‌ಸಿಟಿಸಿಯಿಂದ 200 ಕೋಟಿ ರೂಪಾಯಿ ಲಾಭವನ್ನು ಕೇಂದ್ರ ಪಡೆದಿದೆ.
ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶಗಳ ಜೊತೆಗೆ, IRFC ಪ್ರತಿ ಷೇರಿಗೆ ₹0.8 ರ ಮಧ್ಯಂತರ ಲಾಭಾಂಶವನ್ನು ಘೋಷಣೆ ಮಾಡಿತ್ತು. ಐಆರ್‌ಎಫ್‌ಸಿಯಲ್ಲಿ ಹೊಂದಿರುವ ಪಾಲನ್ನು ಆಧರಿಸಿ, ಸರ್ಕಾರವು ಅನುಪಾತದ ಲಾಭಾಂಶದ ಭಾಗವನ್ನು ಪಡೆದಿದೆ. ಸೆಪ್ಟೆಂಬರ್ ತ್ರೈಮಾಸಿಕದ ಶೇರ್‌ಹೋಲ್ಡಿಂಗ್ ವಿವರದ ಪ್ರಕಾರ, ಸರ್ಕಾರವು IRFC ನಲ್ಲಿ 86.36% ಪಾಲನ್ನು ಹೊಂದಿದೆ.
IRCTC ಕಂಪನಿ ಕೂಡ ತನ್ನ ಫಲಿತಾಂಶಗಳ ಜೊತೆಗೆ ಪ್ರತಿ ಷೇರಿಗೆ ₹4 ರ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. IRCTC ಯಲ್ಲಿ ಸರ್ಕಾರವು 62.4% ಪಾಲನ್ನು ಹೊಂದಿದೆ.
ಐಆರ್‌ಎಫ್‌ಸಿ ಷೇರುಗಳಲ್ಲಿ ಕೊಂಚ ಬದಲಾವಣೆಗಳು ಕಾಣುತ್ತಿದ್ದು ಭಾರೀ ಇಳಿಕೆಯ ಬಳಿಕ 150.77 ರೂಪಾಯಿಗೆ ಗುರುವಾರದ ವ್ಯವಹಾರ ಮುಗಿಸಿದೆ. ಇತ್ತೀಚೆಗೆ ಕಂಪನಿಯು ಫ್ಯೂಚರ್ಸ್ & ಆಪ್ಶನ್ಸ್ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಈ ವರ್ಷ ಇಲ್ಲಿಯವರೆಗೆ ಷೇರುಗಳು 50% ಹೆಚ್ಚಾಗಿದೆ.
ಅಡಿಕೆಯಿಂದ ಆರೋಗ್ಯಕ್ಕೆ ಹಾನಿ?: ಸತ್ಯಾನ್ವೇಷಣೆ ಅಧ್ಯಯನಕ್ಕೆ ಇಳಿದ ಕೇಂದ್ರ ಸರ್ಕಾರ
ಮತ್ತೊಂದೆಡೆ, IRCTC ಷೇರುಗಳು 0.6% ಏರಿಕೆಯಾಗಿ ₹837.5 ಕ್ಕೆ ಕೊನೆಗೊಂಡಿತು. ಸ್ಟಾಕ್ ತನ್ನ ಇತರ ರೈಲ್ವೇ ಸಹವರ್ತಿಗಳಿಗೆ ಹೋಲಿಸಿದರೆ ಕಳಪೆ ಪ್ರದರ್ಶನವನ್ನು ಹೊಂದಿದೆ ಮತ್ತು ಪ್ರಸ್ತುತ 2024 ರಲ್ಲಿ ಇದುವರೆಗೆ 6% ನಷ್ಟು ಕಡಿಮೆಯಾಗಿದೆ.
Breaking: ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಾಹಸ, ಪ್ರೋಬಾ-3 ನೌಕೆಯನ್ನ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ!