ವೋಡಾಫೋನ್‌ ಐಡಿಯಾಗೆ ಹೆಚ್ಚಿದ ಸಾಲ ಸಂಕಷ್ಟ, ಇಂಡಸ್ ಟವರ್‌ನ ಶೇ.3ರಷ್ಟು ಪಾಲು ಮಾರಾಟ!

By Chethan Kumar  |  First Published Dec 4, 2024, 10:15 PM IST

ವೋಡಾಫೋನ್ ಐಡಿಯಾ ಜೊತೆಯಾಗಿ ಸಾಗಿದರೂ ಸಾಲದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಇದೀಗ ವೋಡಾಫೋನ್  ತನ್ನ ಸಬ್ಸಿಡರಿ ಕಂಪನಿ ಇಂಡಸ್ ಟವರ್‌ನ ಶೇಕಡಾ 3ರಷ್ಟು ಪಾಲನ್ನು ಮಾರಾಟ ಮಾಡುತ್ತಿದೆ. 
 


ನವದೆಹಲಿ(ಡಿ.04) ಬ್ರಿಟಿಷ್ ಟೆಲಿಕಾಂ ವೋಡಾಫೋನ್ ಭಾರತದಲ್ಲಿಐಡಿಯಾ ಜೊತೆಯಾಗಿ ಟೆಲಿಕಾಂ ಸೇವೆ ನೀಡುತ್ತಿದೆ. ಪ್ರತಿಸ್ಪರ್ಧಿಗಳ ಪೈಪೋಟಿ ನಡುವೆ ವೋಡಾಫೋನ್ ಐಡಿಯಾ ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಈಗಾಗಲೇ 101 ಮಿಲಿಯನ್ ಅಮೆರಿಕನ್ ಡಾಲರ್ ಸಾಲದಲ್ಲರುವ ವೋಡಾಫೋನ್ ಇದೀಗ ತನ್ನ ಸಬ್ಸಿಡರಿ ಕಂಪನಿಯಾಗಿರುವ ಭಾರತದ ಇಂಡಸ್ ಟವರ್‌ನ ಶೇಕಡಾ ಶೇಕಡಾ 3ರಷ್ಟು ಪಾಲರನ್ನು ಮಾರಾಟ ಮಾಡುತ್ತಿದೆ. ಸಾಲದ ಹೊರೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವೋಡಾಫೋನ್ ಸಿಇಒ ಮಾರ್ಗರಿಟಾ ಡೆಲ್ಲಾ ಹೇಳಿದ್ದಾರೆ.

ವೋಡಾಫೋನ್ ಸದ್ಯ ಭಾರತದಲ್ಲಿ 101 ಮಿಲಿಯನ್ ಅಮೆರಿಕನ್ ಡಾಲರ್ ಸಾಲದ ಹೊರೆಯಲ್ಲಿದೆ. ಈ ಸಾಲ ಹೊರೆ ತಪ್ಪಿಸಲು ಹಲವು ಪ್ರಯತ್ನ ಮಾಡುತ್ತಿದೆ. ಈಗಾಗಲೇ ಇಂಡಸ್ ಟವರ್‌ನಲ್ಲಿರುವ ಶೇಕಡಾ 18 ರಷ್ಟು ಪಾಲನ್ನು ಮಾರಾಟ ಮಾಡಿತ್ತು. ಈ ಮೂಲಕ 1.82 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹಣ ಸಂಗ್ರಹಿಸಿತ್ತು. ಇದರಿಂದ ಬಂದ ಹಣವನ್ನು ಸಾಲ ಮರುಪಾವತಿಗೆ ಬಳಸಿತಿತ್ತು. ಆದರೂ ಮತ್ತಷ್ಟು ಸಾಲ ಬಾಕಿ ಉಳಿದಿದೆ.  ಶೇಕಡಾ 18 ರಷ್ಟು ಪಾಲು ಮಾರಾಟದ ಬಳಿಕ ಇದೀಗ ಶೇಕಡಾ 3 ರಷ್ಟು ಪಾಲು ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದೆ. ಈ ಪಾಲು ಮಾರಾಟದಿಂದ ಬಂದ ಹಣದಲ್ಲಿ ವೋಡಾಫೋನ್ ಎದುರಿಸುತ್ತಿರುವ 101 ಮಿಲಿಯನ್ ಅಮೆರಿಕನ್ ಡಾಲರ್ ಸಾಲ ಮುಗಿಯುವುದಿಲ್ಲ. 

Tap to resize

Latest Videos

BSNL ಸೇರಿದ 8 ಲಕ್ಷ ಗ್ರಾಹಕರು; ಆಫರ್ ಕೊಟ್ರೂ 1 ಕೋಟಿ ಕಸ್ಟಮರ್ ಕಳ್ಕೊಂಡ ಜಿಯೋ,ಎರ್ಟೆಲ್, ವಿಐ!
  
ಈ ಘೋಷಣೆ ಹೊರಬೀಳುತ್ತಿದ್ದಂತೆ ಷೇರುಮಾರುಕಟೆಯಲ್ಲೂ ತ್ವರಿತ ಚುಟುವಟಿಕೆ ಕಂಡುಬಂದಿತ್ತು. ಬುಧವಾರ ಷೇರು ಮಾರುಕಟ್ಟೆ ವಹಿವಾಟು ಅಂತ್ಯದ ವೇಳೆ ವೋಡಾಫೋನ್ ಐಡಿಯಾ ಷೇರುಗಳು ಷೇರುಗಳ ಮೌಲ್ಯ ಶೇಕಡಾ 4ರಷ್ಟು ಜಿಗಿತ ಕಂಡಿತ್ತು. ಬುಧವಾರದ ಷೇರು ವಹಿವಾಟಿನಲ್ಲಿ ವೋಡಾಫೋನ್ ಐಡಿಯಾ ಷೇರುಗಳು 8.25 ರೂಪಾಯಿಯಿಂದ ಮಾರುಕಟ್ಟೆಯಲ್ಲಿ ಆರಂಭ ಪಡೆದಿತ್ತು. ಅಂತ್ಯದ ವೇಳೆ ಕೊಂಚ ಏರಿಕೆ ಅಂದರೆ 8.29 ರೂಪಾಯಿಗ ಅಂತ್ಯಗೊಂಡಿತು. ಗರಿಷ್ಠ 8.39 ರೂಪಾಯಿ ಹಾಗೂ ಕನಿಷ್ಠ 8.20 ರೂಪಾಯಿ ತಲುಪಿತ್ತು. ಕಂಪನಿ ಮಾರುಕಟ್ಟೆ ಬಂಡವಾಳ ಒಟ್ಟು 57,711.45 ಕೋಟಿ. ಇತ್ತ ಇಂಡಸ್ ಟವರ್ಸ್ ಷೇರುಗಳು ಶೇಕಡಾ 1.5 ರಷ್ಟು ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸುವ ಮೊದಲು ಇಂಟ್ರಾಡೇಯಲ್ಲಿ ಶೇಕಡಾ 2ರಷ್ಟು ಜಿಗಿತ ಕಂಡಿತು.  

ವೋಡಾಫೋನ್ ಪಾಲು ಮಾರಾಟ ಇದೀಗ ಟೆಲಿಕಾಂ ಕಂಪನಿಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಇತ್ತ ಗ್ರಾಹಕರಲ್ಲಿ ಆತಂಕ ಮೂಡಿದೆ. ಆದರೆ ಈ ಮಾರಾಟದಿಂದ ವೋಡಾಫೋನ್ ಐಡಿಯಾ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.
 

click me!