Market at Close: 9 ಲಕ್ಷ ಕೋಟಿ ಕಳೆದುಕೊಂಡ ಹೂಡಿಕೆದಾರರು!

By Santosh Naik  |  First Published Dec 20, 2023, 5:19 PM IST

ಎಲ್ಲಾ ವಲಯದ ಸೂಚ್ಯಂಕಗಳು ದೊಡ್ಡ ಮಟ್ಟದಲ್ಲಿ ನೆಗೆಟಿವ್‌ ಆಗಿ ತನ್ನ ವಹಿವಾಟು ಮುಗಿಸಿದೆ. ಆಟೋ, ಕ್ಯಾಪಿಟಲ್‌ ಗೂಡ್ಸ್‌, ಲೋಹ, ತೈಲ ಮತ್ತು ಅನಿಲ, ವಿದ್ಯುತ್ ಮತ್ತು ರಿಯಾಲ್ಟಿ ಸೇರಿದಂತೆ ಬಹುತೇಕ ಸೂಚ್ಯಂಕಗಳು ಶೇ. 2-4 ವ್ಯಾಪ್ತಿಯಲ್ಲಿ ಕುಸಿತ ಕಂಡಿವೆ.
 


ಬೆಂಗಳೂರು (ಡಿ,20):ಭಾರತೀಯ ಷೇರು ಮಾರುಕಟ್ಟೆ ರೆಡ್‌ ಸಿಗ್ನಲ್‌ನಲ್ಲಿ ಬುಧವಾರ ಕೊನೆಗೊಂಡಿದೆ. ಎನ್‌ಎಸ್‌ಇ ಪ್ರಧಾನ ಸೂಚ್ಯಂಕ ನಿಫ್ಟಿ 21,200 ಅಂಕಕ್ಕಿಂತ ಕೆಳಗೆ ಕುಸಿದ್ದರೆ, ಬಿಎಸ್‌ಇ ಪ್ರಧಾನ ಸೂಚ್ಯಂಕದಲ್ಲಿ ಸೋಮವಾರ ಒಂದೇ ದಿನ 930 ಅಂಕ ಕುಸಿತವಾಗಿದೆ. ಇದರಿಂದಾಗಿ ಹೂಡಿಕೆದಾರರು ಅಂದಾಜು 9 ಲಕ್ಷ ಕೋಟಿ ಹಣ ಕಳೆದುಕೊಂಡಿದ್ದಾರೆ. ನಿಫ್ಟಿ 50 ಗರಿಷ್ಠ ಕುಸಿತ ಕಂಡ ಕಂಪನಿಗಳ ಪೈಕಿ,  ಅದಾನಿ ಪೋರ್ಟ್ಸ್, ಅದಾನಿ ಎಂಟರ್‌ಪ್ರೈಸಸ್, ಯುಪಿಎಲ್, ಟಾಟಾ ಸ್ಟೀಲ್ ಮತ್ತು ಕೋಲ್ ಇಂಡಿಯಾ ಸೇರಿವೆ. ಉಳಿದಂತೆ ಲಾಭ ಗಳಿಸಿದವರ ಲಿಸ್ಟ್‌ನಲ್ಲಿ ಸರ್ಕಾರದ ಮಾಲೀಕತ್ವದ ಓಎನ್‌ಜಿಸಿ, ಟಾಟಾ ಕನ್ಶುಮರ್‌ ಪ್ರಾಡಕ್ಸ್‌, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್. ಎಲ್ಲಾ ವಲಯದ ಸೂಚ್ಯಂಕಗಳು ನೆಗೆಟಿವ್‌ ಆಗಿ ವಹಿವಾಟು ಮುಕ್ತಾಯಗೊಳಿಸಿದೆ., ಆಟೋ, ಕ್ಯಾಪಿಟಲ್‌ ಗೂಡ್ಸ್‌, ಲೋಹ, ತೈಲ ಮತ್ತು ಅನಿಲ, ವಿದ್ಯುತ್ ಮತ್ತು ರಿಯಾಲ್ಟಿ ಸೇರಿದಂತೆ ಬಹುತೇಕ ಎಲ್ಲಾ ಸೂಚ್ಯಂಕಗಳು ಶೇ. 2-4ರ ವ್ಯಾಪ್ತಿಯಲ್ಲಿ ಕುಸಿತ ಕಂಡಿವೆ.

ಅಕ್ಟೋಬರ್‌ 26ರ ಬಳಿಕ ನಿಫ್ಟಿ ಒಂದೇ ದಿನದಲ್ಲಿ 303 ಅಂಕಗಳನ್ನು ಕುಸಿದ್ದು ಇದೇ ಮೊದಲಾಗಿದೆ. ಬೆಂಚ್‌ಮಾರ್ಕ್ ಸೂಚ್ಯಂಕಗಳು ಡಿಸೆಂಬರ್ 20 ರಂದು ನಿಫ್ಟಿ 21,150 ರ ಆಸುಪಾಸಿನಲ್ಲಿ ರೆಡ್‌ ಫ್ಲ್ಯಾಗ್‌ನಲ್ಲಿ ಮುಕ್ತಾಯ ಕಂಡಿದ್ದರೆ. ಸೆನ್ಸೆಕ್ಸ್ 930.88 ಪಾಯಿಂಟ್ ಅಥವಾ 1.30 ಪರ್ಸೆಂಟ್ ಕುಸಿದು 70,506.31 ಕ್ಕೆ ತಲುಪಿದೆ ಮತ್ತು ನಿಫ್ಟಿ 302.90 ಪಾಯಿಂಟ್ ಅಥವಾ 1.41 ರಷ್ಟು ಕುಸಿದು 21,150.20 ಕ್ಕೆ ತಲುಪಿದೆ. 

Tap to resize

Latest Videos

ರತನ್‌ ಟಾಟಾ ಮಾಲೀಕತ್ವದ ಕಂಪನಿಯ 6.70 ಕೋಟಿ ಷೇರು ಮಾರಾಟ ಮಾಡಿದ ಎಲ್‌ಐಸಿ!

ಒಟ್ಟಾರೆ ಮಾರುಕಟ್ಟೆಯಲ್ಲಿ 577 ಷೇರುಗಳು ಮುನ್ನಡೆ ಕಂಡಿದ್ದರೆ, 2721 ಷೇರುಗಳು ಕುಸಿತ ಕಂಡಿವೆ. 57 ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 3 ಶೇಕಡಾಕ್ಕಿಂತ ಹೆಚ್ಚು ಕುಸಿದವು. ಇನ್ನು ನಿಫ್ಟಿಯಲ್ಲಿ ರಿಲಯನ್ಸ್, ಎಸ್‌ಬಿಐ ಹಾಗೂ ಎ&ಟಿ ಕಂಪನಿಯ ಷೇರುಗಳು 50 ಪಾಯಿಂಟ್‌ ಕುಸಿಯಲು ಕಾರಣವಾದವು.

ಮತ್ತೆ ಸೆನ್ಸೆಕ್ಸ್‌ ಧಮಾಕಾ; 3 ದಿನದಲ್ಲಿ ಹೂಡಿಕೆದಾರರಿಗೆ 8.11 ಲಕ್ಷ ಕೋಟಿ ರೂ. ಲಾಭ!

click me!