ಕೊಳಕು ಕ್ಲೀನ್ ಮಾಡೇ ಕೋಟ್ಯಾದಿಪತಿಯಾದ ಹುಡುಗಿ!

By Suvarna News  |  First Published Dec 20, 2023, 3:11 PM IST

ನಮಗೆ ನಮ್ಮನೆ ಕಸ ತೆಗೆಯೋಕೆ ಹೇಸಿಗೆಯಾಗುತ್ತೆ. ಆದ್ರೆ ಹುಡುಗಿಯೊಬ್ಬಳು ಬೇರೆಯವರ ಮನೆ ಕೊಳಕನ್ನೇ ತನ್ನ ಜೀವನದ ಬಂಡವಾಳ ಮಾಡಿಕೊಂಡಿದ್ದಾಳೆ. ಇದ್ರ ಮೂಲಕವೇ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾಳೆ. 
 


ಒಳ್ಳೆಯ ಉದ್ಯೋಗ ಬೇಕು, ಕೈ ತುಂಬ ಸಂಬಳ ಬೇಕು ಎನ್ನುವವರು ಹೆಚ್ಚು ಕಲಿತಿರಬೇಕು, ಒಳ್ಳೆಯ ಹುದ್ದೆಯಲ್ಲಿರಬೇಕು ಎನ್ನುವ ನಂಬಿಕೆ ನಮ್ಮದು. ಶ್ರೀಮಂತರಾಗ್ಬೇಕೆಂದ್ರೆ ವಿದ್ಯೆ, ಹುದ್ದೆ ಮಾತ್ರ ಮುಖ್ಯವಲ್ಲ. ನಿಮ್ಮ ಪ್ರತಿಭೆ ಕೂಡ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯಬಹುದು ಎಂಬುದಕ್ಕೆ ಈ ಹುಡುಗಿ ಒಳ್ಳೆಯ ಉದಾಹರಣೆ. 

ಮನೆ ಸ್ವಚ್ಛಗೊಳಿಸುವ ಕೆಲಸ ಕಷ್ಟವಲ್ಲದೆ ಹೋದ್ರೂ ಸುಲಭವಂತೂ ಅಲ್ಲ. ಪ್ರತಿ ದಿನ ಮನೆ ಕ್ಲೀನ್ (Clean) ಮಾಡುವವರಿಗೆ ಅದ್ರಲ್ಲಿ ಎದಿರಾಗುವ ಸಮಸ್ಯೆ ಗೊತ್ತಿರುತ್ತದೆ. ಮನೆ ಶಿಪ್ಟಿಂಗ್ (Shipping) ವೇಳೆ ಅಥವಾ ಹಳೆ ಮನೆಯನ್ನು ಕ್ಲೀನ್ ಮಾಡುವ ವೇಳೆ ಹೆಚ್ಚಿನ ಕೆಲಸದ ಹೊರೆ ನಮ್ಮ ಮೇಲಿರುತ್ತದೆ. ಪ್ರತಿ ದಿನ ಕೆಲಸಕ್ಕೆ ಹೋಗುವವರು ಮನೆ ಸ್ವಚ್ಛತೆಗೆ ಹೆಚ್ಚು ಗಮನ ನೀಡಲು ಸಾಧ್ಯವಾಗೋದಿಲ್ಲ. ಹಾಗಾಗಿಯೇ ಮನೆ ಕೆಲಸಕ್ಕೆ ಜನರನ್ನು ಇಟ್ಟುಕೊಳ್ಳುವವರಿದ್ದಾರೆ. ಮನೆ ಸ್ವಚ್ಛತೆ ಕೆಲಸ ಮಾಡುವುದು ಕೀಳು ಕೆಲಸವೂ ಅಲ್ಲ ಹಾಗೆ ಕಡಿಮೆ ಸಂಬಳ ಬರುವ ಉದ್ಯೋಗವೂ ಅಲ್ಲ ಎಂಬುದನ್ನು ಈಕೆ ಸಾಬೀತುಪಡಿಸಿದ್ದಾಳೆ. ಕೊಳಕು ಮನೆಯನ್ನು ಕ್ಲೀನ್ ಮಾಡುವ ಮೂಲಕವೇ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಿದ್ದಾಲೆ ಈ ಹುಡುಗಿ.

Tap to resize

Latest Videos

ಅಂಬಾನಿ,ಅದಾನಿಗಿಂತಲೂ ಹೆಚ್ಚು ಸಂಪತ್ತು ಗಳಿಸಿದ ಸಾವಿತ್ರಿ ಜಿಂದಾಲ್; ಸಂಪತ್ತಿನಲ್ಲಿ9.6 ಶತಕೋಟಿ ಡಾಲರ್ ಏರಿಕೆ

ಮನೆ ಕೊಳಕಾಗಿದ್ಯಾ? ಸಹಾಯಕ್ಕೆ ಬರ್ತಾಳೆ ಈಕೆ : ಮನೆ ಸ್ವಚ್ಛವಾಗಿಲ್ಲ, ಇರಬೇಕಾದ ವಸ್ತುಗಳೆಲ್ಲ ಅದ್ರ ಜಾಗದಲ್ಲಿಲ್ಲ. ಇದನ್ನು ಮಾಡೋಕೆ ಸಮಯ ಸಿಗ್ತಿಲ್ಲ ಎನ್ನುವವರು ನೀವಾಗಿದ್ದರೆ ಔರಿ ಕಾನನೆನ್ ಸಂಪರ್ಕಿಸಬಹುದು. ಅವಳು ಮನೆಯನ್ನು ಸ್ವಚ್ಛಗೊಳಿಸಲು ನಿಮಗೆ ನೆರವಾಗ್ತಾಳೆ. ಮನೆ ಕ್ಲೀನಿಂಗ್ ಹಾಗೂ ವಸ್ತುಗಳನ್ನು ಸುಂದರವಾಗಿ ಜೋಡಿಸಿ ಮನೆಯ ಅಂದ ಹೆಚ್ಚಿಸೋದು ಔರಿ ಕಾನನೆನ್ (Ourie Conanen) ಕೆಲಸವಾಗಿದೆ. ಮಹಿಳೆಯರು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಕಚೇರಿಗೆ ಹೋದ್ರೆ, ಔರಿ ಕಾನನೆನ್, ಮನೆ ಕ್ಲೀನ್ ಮಾಡುವ ಕೆಲಸಕ್ಕಾಗಿ ಮನೆಗಳಿಗೆ ಹೋಗ್ತಾಳೆ. 

ಇನ್‌ಸ್ಟಾಗ್ರಾಮ್‌ನಲ್ಲೂ ಸಖತ್‌ ಡಿಮ್ಯಾಂಡ್‌; ಪ್ರತಿ ಪೋಸ್ಟ್‌ಗೆ ರಶ್ಮಿಕಾರ ಸಂಭಾವನೆ ಎಷ್ಷು ನೋಡಿ

ಕೊರೊನಾ ಸಮಯದಲ್ಲಿ ಈ ಕೆಲಸ ಶುರು ಮಾಡಿದ ಔರಿ ಕಾನನೆನ್‌ಗೆ ಸಾಕಷ್ಟು ಕ್ಲೈಂಟ್ ಇದ್ದಾರೆ. ಕ್ಲೀನಿಂಗ್ ಮೇಲ್ವಿಚಾರಕಿಯಾಗಿ ಕೆಲಸ ಮಾಡ್ತಿದ್ದ ಔರಿ ಕಾನನೆನ್, ಈಗ ಕ್ಲೀನರ್ ಆಗಿಯೇ ಕೆಲಸ ಮಾಡ್ತಿದ್ದಾಳೆ. ಮನೆ ಸ್ವಚ್ಛಗೊಳಿಸಿದ ವಿಡಿಯೋಗಳನ್ನು ಔರಿ ಕಾನನೆನ್ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ (Social Media) ಹಂಚಿಕೊಳ್ತಾಳೆ. ಆಕೆ ಕೆಲಸ ಇಷ್ಟವಾದ್ರೆ ಜನರು ಆಕೆಯನ್ನು ಮನೆ ಕ್ಲೀನಿಂಗ್ ಗೆ ಕರೆಯುತ್ತಾರೆ. 

ಸಾಮಾಜಿಕ ಜಾಲತಾಣದಲ್ಲಿ ಔರಿ ಕಾನನೆನ್ 10 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾಳೆ. ಎಲ್ಲರೂ ಆಕೆ ಕೆಲಸವನ್ನು ಲೈಕ್ ಮಾಡ್ತಾರೆ. ವಿಶೇಷವೆಂದ್ರೆ ಔರಿ ಕಾನನೆನ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿ ಇದೆ. ಖಾತೆಯಲ್ಲಿ ಹಣ ಹೆಚ್ಚಾದಂತೆ ನಾವು ಕೆಲಸ ಬದಲಿಸ್ತೇವೆ. ಮನೆ ಕೊಳಕು ಕ್ಲೀನ್ ಮಾಡುವ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಶಿಫ್ಟ್ ಆಗ್ತೇವೆ. ಆದ್ರೆ ಔರಿ ಕಾನನೆನ್ ಹಾಗಲ್ಲ. ಆಕೆ ಕೆಲಸವನ್ನು ಪ್ರೀತಿಸ್ತಾಳೆ. ಹಣ ಎಷ್ಟೇ ಬಂದ್ರೂ ನಾನು ಈ ಕೆಲಸ ಬಿಡೋದಿಲ್ಲ ಎನ್ನುತ್ತಾಳೆ.

ಔರಿ ಕಾನನೆನ್ ಸಾಮಾನ್ಯದವಳಲ್ಲ. ಅಮೆರಿಕ, ಸ್ವಿಟ್ಜರ್ಲೆಂಡ್,  ಯುನೈಟೆಡ್ ಕಿಂಗ್‌ಡಮ್‌ ಸೇರಿದಂತೆ ಅನೇಕ ಕಡೆ ಓಡಾಡಿದ್ದಾಳೆ. ಅಲ್ಲಿಯೂ ಆಕೆಗೆ ಕ್ಲೈಂಟ್ ಇದ್ದು, ಅವರ ಕೋರಿಕೆ ಮೇರೆಗೆ ಅವರ ಮನೆಗೆ ಉಚಿತ ಪ್ರಯಾಣ ಬೆಳೆಸಿ, ಮನೆ ಕ್ಲೀನ್ ಮಾಡಿ ಬರ್ತಾಳೆ. ಹದಿಹರೆಯದಲ್ಲಿ ಖಿನ್ನತೆಗೆ (Depression) ಒಳಗಾಗಿದ್ದ ಈಕೆ ಮನೆ ಕೆಲಸ ಮಾಡುತ್ತಲೆ ತನ್ನ ಖಿನ್ನತೆ ಕಡಿಮೆ ಮಾಡಿಕೊಂಡಿದ್ದಾಳೆ. ತನ್ನ ಕನಸಿನ ಜೊತೆ ಹಣವನ್ನೂ ಸಂಪಾದನೆ ಮಾಡ್ತಾ ಆರಾಮವಾಗಿದ್ದಾಳೆ ಔರಿ ಕಾನನೆನ್. ಕೆಲಸದಲ್ಲಿ ಮೇಲು ಕೀಳು ನೋಡುವ ಜನರು ಈಕೆ ಗಳಿಕೆ ನೋಡಿ ಬೆರಗಾಗಿದ್ದಾರೆ. 

click me!