2024ನೇ ಸಾಲಿನಲ್ಲಿ ಹೂಡಿಕೆ ಮಾಡೋರು ಚಿನ್ನ ಅಥವಾ ಷೇರು ಮಾರುಕಟ್ಟೆ,ಈ ಎರಡರಲ್ಲಿ ಯಾವುದರಲ್ಲಿ ಹೂಡಿಕೆ ಮಾಡೋದು ಬೆಸ್ಟ್? ತಜ್ಞರು ಏನ್ ಹೇಳ್ತಾರೆ? ಇಲ್ಲಿದೆ ಮಾಹಿತಿ.
Business Desk: 2024ನೇ ಸಾಲಿಗೆ ಕಾಲಿಟ್ಟಿದ್ದೇವೆ. ಹೀಗಿರುವಾಗ ಈ ವರ್ಷ ಕೈಗೊಳ್ಳಬೇಕಾದ ಹಣಕಾಸಿನ ಯೋಜನೆಗಳ ಬಗ್ಗೆ ಸೂಕ್ತ ಯೋಜನೆ ರೂಪಿಸೋದು ಅಗತ್ಯ. ಅದರಲ್ಲೂ ಹೂಡಿಕೆಗೆ ಸಂಬಂಧಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಅತ್ಯಗತ್ಯ. 2023ನೇ ಸಾಲಿನಲ್ಲಿ ಹೂಡಿಕೆದಾರರಿಗೆ ಷೇರು ಮಾರುಕಟ್ಟೆ ಹಾಗೂ ಚಿನ್ನದ ಮೇಲಿನ ಹೂಡಿಕೆ ಉತ್ತಮ ರಿಟರ್ನ್ಸ್ ನೀಡಿದೆ ಅನ್ನೋದರಲ್ಲಿ ಅನುಮಾನವಿಲ್ಲ. ಹೀಗಿರುವಾಗ ಈ ವರ್ಷ ಚಿನ್ನದ ಮೇಲೆ ಹೂಡಿಕೆ ಮಾಡೋದು ಉತ್ತಮನಾ ಅಥವಾ ಷೇರುಗಳ ಮೇಲಿನ ಹೂಡಿಕೆ ಉತ್ತಮನಾ ಎಂಬ ಗೊಂದಲದಲ್ಲಿ ಹೂಡಿಕೆದಾರರಿದ್ದಾರೆ. ಹೀಗಿರುವಾಗ ಕೆಲವು ವರದಿಗಳ ಪ್ರಕಾರ 2023ನೇ ಸಾಲಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಗಣನೀಯ ಪ್ರಮಾಣದಲ್ಲಿ ಅಂದರೆ ಸುಮಾರು 10,000 ಪಾಯಿಂಟ್ಸ್ ಏರಿಕೆಯಾಗಿದೆ. ಈ ಮೂಲಕ ಹೂಡಿಕೆದಾರರಿಗೆ ಅಂದಾಜು ಶೇ.16ರಷ್ಟು ರಿಟರ್ನ್ ಸಿಕ್ಕಿದೆ. ಹಾಗೆಯೇ ಇದೇ ಅವಧಿಯಲ್ಲಿ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 60,000ರೂ. ಗಡಿ ದಾಟಿಸ್ಸು ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಶೇ.15ರಷ್ಟು ರಿಟರ್ನ್ ಸಿಕ್ಕಿದೆ. ಹೀಗಿರುವಾಗ ಈಗ ಹೂಡಿಕೆದಾರರಿಗೆ ಈ ವರ್ಷ ಯಾವುದರಲ್ಲಿ ಹೂಡಿಕೆ ಮಾಡೋದು ಉತ್ತಮ ಎಂಬ ಪ್ರಶ್ನೆ ಕಾಡೋದು ಸಹಜ. ಹಾಗಾದ್ರೆ ಈ ಬಗ್ಗೆ ತಜ್ಞರು ಏನ್ ಹೇಳ್ತಾರೆ?
ಷೇರು ಮಾರುಕಟ್ಟೆ
ಈಕ್ವಿಟಿ ಹಾಗೂ ಷೇರು ಮಾರುಕಟ್ಟೆ ತಜ್ಞ ಕುಂಜ್ ಬನ್ಸಾಲ್ ಅವರ ಪ್ರಕಾರ ಸೆನ್ಸೆಕ್ಸ್ ಪ್ರತಿನಿಧಿಸುವ ಷೇರು ಮಾರುಕಟ್ಟೆ 2024ರಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಇನ್ನು ಅವರ ಅಂದಾಜಿನ ಪ್ರಕಾರ ಈ ವರ್ಷದಾಂತ್ಯದೊಳಗೆ ಸೆನ್ಸೆಕ್ಸ್ 83,250 ಗಡಿ ದಾಟುವ ನಿರೀಕ್ಷೆಯಿದೆ. ಹಾಗೆಯೇ ನಿಫ್ಟಿ ಕೂಡ 25,000 ಮಾರ್ಕ್ ದಾಟುವ ಸಾಧ್ಯತೆಯಿದೆ. ಜನವರಿ 8ಕ್ಕೆ ಅನ್ವಯಿಸುವಂತೆ ಸೆನ್ಸೆಕ್ಸ್ 71,355.22ಕ್ಕೆ ಕ್ಲೋಸ್ ಆಗಿದೆ. ಹೀಗಿರುವಾಗ ಬನ್ಸಾಲ್ ಅವರ ಊಹಿಯನ್ನು ಪರಿಗಣಿಸೋದಾದ್ರೆ ಹೂಡಿಕೆದಾರರು 2024ನೇ ಸಾಲಿನಲ್ಲಿ ಅಂದಾಜು 12,000 ಪಾಯಿಂಟ್ಸ್ ಏರಿಕೆ ಕಾಣಬಹುದು. ಇದರಿಂದ ಸುಮಾರು ಶೇ.14.41ರಷ್ಟು ರಿಟರ್ನ್ಸ್ ನಿರೀಕ್ಷಿಸಬಹುದು.
ಕ್ರೆಡಿಟ್ ಕಾರ್ಡ್ ಬಳಕೆ ಮೇಲೂ ತೆರಿಗೆ ಬೀಳುತ್ತಾ? ಯಾವಾಗ ಆದಾಯ ತೆರಿಗೆ ಇಲಾಖೆ ಇಂಥ ವೆಚ್ಚಗಳ ಪರಿಶೀಲನೆ ನಡೆಸುತ್ತೆ?
ಚಿನ್ನ
ಹಣದುಬ್ಬರದ ಒತ್ತಡ ಹಾಗೂ ಈಗಿನ ಜಾಗತಿಕ ಮಾರುಕಟ್ಟೆ ಪರಿಸ್ಥಿತಿ ಗಮನಿಸಿದರೆ 2024ನೇ ಸಾಲಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಕಾಮಡಿಟಿ ಸಂಸ್ಥೆ ಕೆಡಿಯ ಅಡ್ವೈಸರಿ ನಿರ್ದೇಶಕ ಅಜಯ್ ಕೆಡಿಯಾ ಅಂದಾಜಿಸಿದ್ದಾರೆ. 2023ರಲ್ಲಿ ಚಿನ್ನದ ಬೆಲೆ 63,203ರೂ. ತಲುಪಿದ್ದು, ಹೂಡಿಕೆದಾರರಿಗೆ ಗಮನಾರ್ಹ ಪ್ರಮಾಣದ ಅಂದರೆ ಶೇ.14.88ರಷ್ಟು ರಿಟರ್ನ್ಸ್ ನೀಡಿದೆ. 2024ರ ಫೆಬ್ರವರಿ 5ಕ್ಕೆ ಮೆಚ್ಯೂರ್ ಆಗುವ ಗೋಲ್ಡ್ ಫ್ಯೂಚರ್ಸ್ ಎಂಸಿಎಕ್ಸ್ ನಲ್ಲಿ 10ಗ್ರಾಂಗೆ 62,511ರೂ. ಇದೆ.
ಸದ್ದಿಲ್ಲದೇ ಕಾರು, ವೈಯಕ್ತಿಕ ಸಾಲ ಬಡ್ಡಿ ದರ ಏರಿಸಿದ ಬ್ಯಾಂಕ್‌ಗಳು : ಗೃಹ ಸಾಲದಲ್ಲಿ ಯಾವುದೇ ವ್ಯತ್ಯಾಸವಿಲ್ಲ
ಯಾವುದು ಉತ್ತಮ?
ಷೇರು ಮಾರುಕಟ್ಟೆ ಹಾಗೂ ಚಿನ್ನ ಎರಡೂ 2024ರಲ್ಲಿ ಎರಡಂಕಿ ರಿಟರ್ನ್ಸ್ ನೀಡುವ ಸಾಮರ್ಥ್ಯ ಹೊಂದಿವೆ. ಇನ್ನು ಅತ್ಯಧಿಕ ರಿಸ್ಕ್ ತೆಗೆದುಕೊಳ್ಳಲು ಬಯಸೋರು ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಸಾಧ್ಯತೆಯಿರುತ್ತದೆ. ಇನ್ನು ಹೂಡಿಕೆಯಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಬಯಸದೇ ಇರೋರು ಚಿನ್ನದ ಮೇಲೆ ಹೂಡಿಕೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರಸಕ್ತ ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯನ್ನು ಗಮನಿಸಿದರೆ ಚಿನ್ನದ ಮೇಲಿನ ಹೂಡಿಕೆ ಹೆಚ್ಚಿನ ರಿಟರ್ನ್ಸ್ ನೀಡುವ ವಿಶ್ವಾಸ ಮೂಡಿಸಿದೆ ಎಂಬುದು ಹಣಕಾಸು ತಜ್ಞರ ಅಭಿಪ್ರಾಯ. ಹೀಗಾಗಿ ನೀವು ಎಷ್ಟರ ಮಟ್ಟಿಗೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದೀರಿ ಎಂಬುದನ್ನು ಆಧರಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಕಾ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಬೇಕಾ ಎಂಬುದನ್ನು ನಿರ್ಧರಿಸಿ. ಹಾಗೆಯೇ ಈ ಎರಡರಲ್ಲೂ ಹೂಡಿಕೆ ಮಾಡೋದಾದ್ರೆ ಯಾವುದರಲ್ಲಿ ಎಷ್ಟು ಪ್ರಮಾಣದಲ್ಲಿ ಮಾಡುತ್ತೀರಿ ಎಂಬುದನ್ನು ತೀರ್ಮಾನಿಸಿ.