ಬ್ಯುಸಿನೆಸ್ ಮಾಡೋಕೆ ನೀವು ಅದೇ ಕ್ಷೇತ್ರದಲ್ಲಿ ಶಿಕ್ಷಣ ಪಡೆದಿರಬೇಕು, ಅನುಭವ ಹೊಂದಿರಬೇಕು ಎಂದೇನಿಲ್ಲ. ನಿಮ್ಮ ಗುರಿ ಸ್ಪಷ್ಟವಾಗಿದ್ದರೆ ಜ್ಞಾನ ಸಂಪಾದನೆ ಕಷ್ಟವಲ್ಲ. ಪರಿಶ್ರಮವಿದ್ರೆ ಅದ್ರ ಹಿಂದೆ ಯಶಸ್ಸು ತಾನಾಗಿಯೇ ಬರುತ್ತೆ.
ಇಂಜಿನಿಯರಿಂಗ್ ಓದಿದ ವ್ಯಕ್ತಿ ಇಂಜಿನಿಯರ್ ಆಗ್ಲೇಬೇಕು ಅಂದೇನಿಲ್ಲ. ಆತನ ಆಸಕ್ತಿ ಅಡುಗೆಯಾಗಿದ್ದರೆ, ಅದ್ರಲ್ಲೇ ಮುಂದುವರೆದು ಸಾಧನೆ ಮಾಡಬಹುದು. ಎಲ್ಲ ಕ್ಷೇತ್ರದ ಜ್ಞಾನ ಎಲ್ಲರಿಗೂ ಇರಲು ಸಾಧ್ಯವಿಲ್ಲ. ಆದ್ರೆ ನೀವು ಆ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಒಂದೊಂದೇ ವಿಷ್ಯಗಳನ್ನು ಕಲಿಯುತ್ತೀರಿ. ನಿಧಾನವಾಗಿ ನಿಮ್ಮ ಜ್ಞಾನ ವೃದ್ಧಿಯಾಗುತ್ತದೆ. ವ್ಯಾಪಾರದಲ್ಲಿ ಅನುಭವವಿಲ್ಲ, ಆಸಕ್ತಿ ಇದೆ ಎನ್ನುವವರು ವ್ಯಾಪಾರದ ಆರಂಭದಲ್ಲಿ ಸಮಸ್ಯೆ ಎದುರಿಸಬಹುದು. ಆದ್ರೆ ಮುಂದೆ ಯಶಸ್ಸು ಸಿಕ್ಕೇ ಸಿಗುತ್ತದೆ. ಕೆಲವೊಮ್ಮೆ ನಮ್ಮ ಯಶಸ್ಸಿಗೆ ಅಥವಾ ನಮ್ಮ ದಾರಿಗೆ ಸಣ್ಣದೊಂದು ಕಾರಣ ಸಾಕಾಗುತ್ತದೆ. ಯಾರೋ ಅನುಭವಿಸಿದ ನೋವು ಅಥವಾ ಇನ್ನಾರದ್ದೋ ಸಮಸ್ಯೆಗೆ ಸ್ಪಂದಿಸಲು ನಮ್ಮ ಮನಸ್ಸು ತುಡಿಯತ್ತದೆ. ಅದೇ ಮುಂದೆ ನಮ್ಮನ್ನು ಎತ್ತರದ ಸ್ಥಾನಕ್ಕೆ ತಂದು ನಿಲ್ಲಿಸುತ್ತದೆ. ಇದಕ್ಕೆ ದರ್ಶನ್ ಪಟೇಲ್ ಉತ್ತಮ ನಿದರ್ಶನ. ಮಹಿಳೆಯರ ಪಾದಗಳನ್ನು ನೋಡಿ, ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದ ದರ್ಶನ್ ಪಟೇಲ್ ಈಗ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಹೊಂದಿದ್ದಾರೆ. ಅಷ್ಟಕ್ಕೂ ದರ್ಶನ್ ಪಟೇಲ್ ಕಂಪನಿ ಯಾವುದು, ಅವರು ನಡೆದು ಬಂದ ಹಾದಿ ಹೇಗಿದೆ ಎಂಬುದು ಇಲ್ಲಿದೆ.
ದರ್ಶನ್ ಪಟೇಲ್ (Darshan Patel) ಯಾರು? : ದರ್ಶನ್ ಪಟೇಲ್, ವಿನ್ನಿ ಕಾಸ್ಮೆಟಿಕ್ಸ್‌ನ ಸಂಸ್ಥಾಪಕ ಮತ್ತು ಎಂಡಿ. ಅವರ ಕಂಪನಿಯ ಮಾರುಕಟ್ಟೆ (Market) ಮೌಲ್ಯ 10,000 ಕೋಟಿ ರೂಪಾಯಿ. ಅನೇಕರಿಗೆ ವಿನ್ನಿ ಕಾಸ್ಮೆಟಿಕ್ಸ್ ಬಗ್ಗೆ ತಿಳಿದಿಲ್ಲ. ಆದ್ರೆ ಈ ಕಂಪನಿ ಉತ್ಪಾದಿಸುವ ಉತ್ಪನ್ನ (Product) ವನ್ನು ಹತ್ತರಲ್ಲಿ ಎಂಟು ಮಂದಿಯಾದ್ರೂ ಬಳಕೆ ಮಾಡ್ತಾರೆ. ವಿನ್ನಿ ಕಾಸ್ಮೆಟಿಕ್ಸ್ ಅನೇಕ ಉತ್ಪನ್ನಗಳನ್ನು ತಯಾರಿಸುತ್ತಿದೆ. ಆದ್ರೆ ಈ ಉತ್ಪನ್ನಗಳು ಬೇರೆ ಬೇರೆ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
undefined
ಲಕ್ಷದ್ವೀಪದಲ್ಲಿ ತಾಜ್ ಬ್ರ್ಯಾಂಡ್‌ನ ಎರಡು ಐಷಾರಾಮಿ ಹೋಟೆಲ್ ನಿರ್ಮಿಸಲು ಟಾಟಾ ನಿರ್ಧಾರ
ಮಹಿಳೆಯರ ಕಾಲು ನೋಡಿ ಉದ್ಯೋಗ ಶುರು ಮಾಡಿದ ದರ್ಶನ್ ಪಟೇಲ್: ದರ್ಶನ್ ಪಟೇಲ್ ಯಾವುದೇ ದೊಡ್ಡ ಸಂಸ್ಥೆಯಿಂದ ಶಿಕ್ಷಣ ಪಡೆದಿಲ್ಲ. ಸೌಂದರ್ಯವರ್ಧಕ ಕ್ಷೇತ್ರದಲ್ಲಿ ಯಾವುದೇ ಅನುಭವ ಹೊಂದಿರಲಿಲ್ಲ. ಮುಂಬೈನ ಚರ್ಚ್‌ಗೇಟ್ ನಿಲ್ದಾಣದಲ್ಲಿ ದರ್ಶನ್ ಕಣ್ಣು ಅನೇಕ ಮಹಿಳೆಯರ ಪಾದದ ಮೇಲೆ ಬಿದ್ದಿತ್ತು. ಮಹಿಳೆಯರು ಪಾದದ ಒಡಕಿನಿಂದ ಬಳಲುತ್ತಿರುವುದನ್ನು ದರ್ಶನ್ ಗಮನಿಸಿದ್ದರು. ಅದಕ್ಕೆ ಪರಿಹಾರ ಕಂಡುಹಿಡಿಯುವ ಆಲೋಚನೆ ಮಾಡಿದ್ರು. ಇದ್ರಿಂದಲೇ ಅವರು ಕ್ರ್ಯಾಕ್ ಕ್ರೀಮ್ ಕಲ್ಪನೆ ಪಡೆದರು. ಯಾವುದೇ ಕಾಸ್ಮೆಟಿಕ್ ಕಂಪನಿಯಲ್ಲಿ ಕೆಲಸ ಮಾಡದ ದರ್ಶನ್ ಪಟೇಲ್, ಗ್ರಾಹಕರ ಅಗತ್ಯವನ್ನು ಗಮನಿಸಿ ಉತ್ಪನ್ನ ತಯಾರಿಸುತ್ತಾರೆ. ಅವರ ಉತ್ಪನ್ನಗಳು ವಿದೇಶಿ ಕಂಪನಿಗಳ ಜೊತೆ ಸ್ಪರ್ಧೆ ಒಡ್ಡುತ್ತವೆ.
ಪ್ರಧಾನಿ ಭೇಟಿ ನಂತರ MakeMyTripನಲ್ಲಿ ಲಕ್ಷದ್ವೀಪ ಸರ್ಚ್‌ನಲ್ಲಿ 3,400% ಏರಿಕೆ: ನೂತನ ಅಭಿಯಾನ ಪ್ರಾರಂಭ!
ವಿನ್ನಿ ಕಾಸ್ಮೆಟಿಕ್ಸ್ ತಯಾರಿಸುತ್ತೆ ಈ ಎಲ್ಲ ಉತ್ಪನ್ನ : ವಿನ್ನಿ ಕಾಸ್ಮೆಟಿಕ್ಸ್ ಉತ್ಪನ್ನದ ಪಟ್ಟಿಯಲ್ಲಿ ಇಚ್ ಗಾರ್ಡ್, ಡರ್ಮಿಕೂಲ್, ಮೂವ್, ಕ್ರ್ಯಾಕ್, ಡಿಕೋಲ್ಡ್ ಟೋಟಲ್ ಮತ್ತು ಡಿಯೋಡರೆಂಟ್ ಸೇರಿದಂತೆ ಅನೇಕ ಉತ್ಪನ್ನವಿದೆ. ಇಂಡಿಯಾ ಮೇ ತೋ ಫಾಗ್ ಚಲ್ ರಹಾ ಹೈ ಜಾಹೀರಾತನ್ನು ನೀವು ಕೇಳಿರ್ತೀರಾ. ಈ ಫಾಗ್ ತಯಾರಿಸುತ್ತಿರೋದು ವಿನ್ನಿ ಕಾಸ್ಮೆಟಿಕ್ಸ್. ಫಾಗ್ ಅನೇಕ ದೊಡ್ಡ ಕಂಪನಿಗಳ ಜೊತೆ ಸ್ಪರ್ಧಸಿ ಗೆದ್ದಿದೆ. 2020 ರಲ್ಲಿ ಫಾಗ್ 4000 ಕೋಟಿ ಮೌಲ್ಯದ ಡಿಯೋ ಮಾರುಕಟ್ಟೆಯಲ್ಲಿ ಶೇಕಡಾ 16 ರಷ್ಟು ಪಾಲನ್ನು ಹೊಂದಿತ್ತು. ಕಂಪನಿ ಮಾರುಕಟ್ಟೆ ಮೌಲ್ಯ 10,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 2021 ರಲ್ಲಿ ಕೆಕೆಆರ್ 625 ಮಿಲಿಯನ್ ಡಾಲರ್ ಗೆ ವಿನ್ನಿಯಲ್ಲಿ ನಿಯಂತ್ರಣ ಪಾಲನ್ನು ಖರೀದಿಸಿತ್ತು. ಕಂಪನಿಯಲ್ಲಿ ಈಗ ಕೆಕೆಆರ್ ಪಾಲು ಶೇಕಡಾ 55 ರಷ್ಟಿದೆ.