ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕಿದ ಬಜೆಟ್, ನಿರ್ಮಲಾ ಸೀತಾರಾಮನ್‌ಗೆ ಮೋದಿ ಅಭಿನಂದನೆ!

By Suvarna News  |  First Published Feb 1, 2024, 1:21 PM IST

ನಿರ್ಮಾಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾತನಾಡಿದ್ದಾರೆ. ಇದೇ ವೇಳೆ ಸಮಾಜ ಪ್ರತಿಯೊಬ್ಬರಿಗೂ ಅನಕೂಲ ಮಾಡಿಕೊಡುವ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್‌ಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. 


ನವದೆಹಲಿ(ಫೆ.01) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾತನಾಡಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಪೂರಕವಾದ ಸಮಗ್ರ ಬಜೆಟ್ ಎಂದು ಮೋದಿ ಬಣ್ಣಿಸಿದ್ದಾರೆ. ಇದೇ ವೇಳೆ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟು ಅತ್ಯುತ್ತಮ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮ್ ಹಾಗೂ ಇಡೀ ತಂಡಕ್ಕೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. 

ಇಂದು ಮಧ್ಯಂತರ ಬಜೆಟ್. ಆದರೆ ಇದು ಎಲ್ಲರನ್ನೂ ಒಳಗೊಂಡ, ಅಭಿವೃದ್ಧಿ ಹಾಗೂ ವಿಕಸಿತ ಭಾರತ ಬಜೆಟ್ ಆಗಿದೆ ಎಂದು ಮೋದಿ ಹೇಳಿದ್ದಾರೆ. ಈ ಬಜೆಟ್‌ನಲ್ಲಿ ಯೋಜನೆಗಳ ಮುಂದುವರಿಕೆಯ ಆತ್ಮವಿಶ್ವಾಸವಿದೆ. ಇಷ್ಟೇ ಅಲ್ಲ ಯೋಜನೆಗಳನ್ನು ಮುಂದುವರಿಸುವ ಭರವಸೆ ಈ ಬಜೆಟ್‌ನಲ್ಲಿದೆ. ವಿಕಸಿತ ಭಾರತದ ನಾಲ್ಕು ಸ್ಥಂಬಗಳಾಗಿರುವ ರೈತರು, ಮಹಿಳೆ, ಯುವ ಹಾಗೂ ಬಡವರನ್ನು ಸಬಲೀಕರಣ ಮಾಡಲು ಬಜೆಟ್ ಇದಾಗಿದೆ. ನಿರ್ಮಲಾ ಸೀತಾರಾಮನ್ ಮಂಡಿಸಿದ ಈ ಬಜೆಟ್ ದೇಶದ ಭವಿಷ್ಯ ರೂಪಿಸುವ ಬಜೆಟ್ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

Tap to resize

Latest Videos

undefined

ಜನಪ್ರಿಯ ಬಜೆಟ್ ಅಲ್ಲ, ಜುಲೈನಲ್ಲಿ ವಿಕಸಿತ ಭಾರತದ ನೀಲಿನಕ್ಷೆ ಘೋಷಣೆ

ಈ ಬಜೆಟ್ 2047ರ ವಿಕಸಿತ ಭಾರತಕ್ಕೆ ಪೂರಕವಾದ ಬಜೆಟ್ ಆಗಿದೆ. ಸಮಾಜದ ಪ್ರತಿ ಕ್ಷೇತ್ರಗಳಿಗೆ ಈ ಬಜೆಟ್‌ ತಲುಪಿದೆ. ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿ ಇಡಲಾಗಿದೆ. ಬಜೆಟ್‌ನಲ್ಲಿ 40 ಸಾವಿರ ವಂದೇ ಭಾರತ್ ಆಧುನಿಕ ಬೋಗಿಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಯುವಕರಿಗೆ ವಿಫುಲ ಅವಕಾಶ ಒದಗಿಸುವ ನಿಟ್ಟಿನಲ್ಲಿ ಈ ಬಜೆಟ್ ಪ್ರಮುಖವಾಗಿದೆ ಬಡವರಿಗೆ ಈಗಾಗಲೇ 3 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. ಇದೀಗ ಮತ್ತೆರೆಡು ಕೋಟಿ ಮನೆ ನಿರ್ಮಾಣ ಮಾಡುತ್ತಿದ್ದೇವೆ. ಲಕ್ ಪತಿ ದೀದಿಯಲ್ಲಿ ಮತ್ತೆ 3 ಕೋಟಿ ಮಹಿಳೆಯರು ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ. ಅಂಗನವಾಡಿ ಆಶಾ ಕಾರ್ಯಕರ್ತರೆಗಿ ಆಯುಷ್ಮಾನ್ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ. 

 

The benefits every section of the society and lays the foundation for a developed India. https://t.co/RgGTulmTac

— Narendra Modi (@narendramodi)

 

ಇದು ಸ್ವೀಟ್ ಸ್ಪಾಟ್ ಬಜೆಟ್ ಎಂದು ಮೋದಿ ಬಣ್ಣಿಸಿದ್ದಾರೆ. ಯುವ ಸಮೂಹಕ್ಕೆ ಉದ್ಯೋಗ ಒದಗಿಸುವ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಈ ಬಜೆಟ್ ಭಾರತದ ಯುವ  ಸಮೂಹದ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ಎರಡು ಮಹತ್ವಪೂರ್ಣ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ನಾವೀನ್ಯತೆಗೆ 1 ಲಕ್ಷ ಕೋಟಿ ರೂಪಾಯಿ ಬಂಡವಾಳ ತೆಗೆದಿಡಲಾಗಿದೆ. ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಮತ್ತಷ್ಟು ಹೂಡಿಕೆಗೆ ವಿಪುಲ ಅವಕಾಶ ಮಾಡಿಕೊಡಲಾಗಿದೆ ಎಂದು ಮೋದಿ ಹೇಳಿದ್ದಾರೆ. 

ಬಾಡಿಗೆ, ಸ್ಲಂನಲ್ಲಿರುವವರ ಮನೆ ಕನಸು ನನಸಾಗಿಸಲು ಹೊಸ ಯೋಜನೆ,ನಿರ್ಮಲಾ ಸೀತಾರಾಮ್ ಘೋಷಣೆ!

click me!