Union Budget 2024: ಬಜೆಟ್ ನಲ್ಲಿ ಕೃಷಿಗೆ ಧಕ್ಕಿದ್ದು ಅತ್ಯಲ್ಪ;ಆದ್ರೂ ರೈತರ ಆದಾಯ ಹೆಚ್ಚಳಕ್ಕೆ ಸಂಕಲ್ಪ!

By Suvarna News  |  First Published Feb 1, 2024, 4:41 PM IST

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಅತ್ಯಲ್ಪ ಅನುದಾನ ಮೀಸಲಿಡಲಾಗಿದೆ. ಆದರೆ,ರೈತರ ಆದಾಯ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ.


ನವದೆಹಲಿ (ಫೆ.1): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2024ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್  ಮಂಡಿಸಿದ್ದು, ಇತರ ವಲಯಗಳಿಗೆ ಹೋಲಿಸಿದ್ರೆ ಕೃಷಿ ಕ್ಷೇತ್ರಕ್ಕೆ ಕಡಿಮೆ ಅನುದಾನ ಮೀಸಲಿಟ್ಟಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಕೇವಲ 1.27 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಹೀಗಾಗಿ ರೈತರಿಗೆ ಬಜೆಟ್ ಕುರಿತು ನಿರಾಸೆ ಮೂಡೊದು ಸಹಜ. ಆದರೆ, ರೈತರ ಆದಾಯ ಹೆಚ್ಚಳಕ್ಕೆ ಬಜೆಟ್ ನಲ್ಲಿ ಒತ್ತು ನೀಡಿರೋದು ತುಸು ನೆಮ್ಮದಿ ನೀಡಿದೆ. ಇನ್ನು ಈ ವಲಯದ ಕ್ಷಿಪ್ರ ಪ್ರಗತಿಗೆ ಖಾಸಗಿ ಹಾಗೂ ಸಾರ್ವಜನಿಕ ಹೂಡಿಕೆಗೆ ಕೂಡ ಸರ್ಕಾರ ಅವಕಾಶ ನೀಡಲು ತೀರ್ಮಾನಿಸಿದೆ. ಹಾಗಾದ್ರೆ ಈ ಬಾರಿಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಏನಿದೆ?

ರೈತರ ಆದಾಯ ಹೆಚ್ಚಳಕ್ಕೆ ಒತ್ತು
ಕೃಷಿ ವಲಯದಲ್ಲಿ ಮೌಲ್ಯವರ್ಧನೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯಿಂದ 38ಲಕ್ಷ ರೈತರಿಗೆ ಪ್ರಯೋಜನವಾಗಿದೆ. 10ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಪ್ರಧಾನ ಮಂತ್ರಿ ಫಾರ್ಮಲೈಸೇಷನ್ ಆಫ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ ಪ್ರೈಸರ್ಸ್ ಯೋಜನೆ 2.4ಲಕ್ಷ ಸ್ವಸಹಾಯ ಗುಂಪುಗಳಿಗೆ ನೆರವು ನೀಡಿದೆ. ಹಾಗೆಯೇ 60 ಸಾವಿರ ಜನರಿಗೆ ಹಣಕಾಸು ಒದಗಿಸಿದೆ. ಹಾಗೆಯೇ ಕಟಾವಿನ ಬಳಿಕದ ನಷ್ಟ ತಗ್ಗಿಸಲು, ಉತ್ಪಾದನೆ ಹಾಗೂ ಆದಾಯ ಹೆಚ್ಚಿಸಲು ಕೂಡ ಇತರ ಯೋಜನೆಗಳು ಪ್ರಯತ್ನಿಸುತ್ತಿವೆ. 

Tap to resize

Latest Videos

undefined

Union Budget 2024:ಆರೋಗ್ಯ ಕ್ಷೇತ್ರಕ್ಕ ಬೂಸ್ಟರ್ ಡೋಸ್;ಗರ್ಭಕಂಠ ಕ್ಯಾನ್ಸರ್ ತಡೆ ಲಸಿಕೆಗೆ ಉತ್ತೇಜನ

ಸಾರ್ವಜನಿಕ ಹಾಗೂ ಖಾಸಗಿ ಹೂಡಿಕೆಗೆ ಅವಕಾಶ
ಕೃಷಿ ವಲಯದ ವೇಗದ ಅಭಿವೃದ್ಧಿಗೆ ಕಟಾವಿನ ಬಳಿಕದ ಚಟುವಟಿಕೆಗಳಾದ ಆಧುನಿಕ ಸಂಗ್ರಹಣೆ, ಪೂರೈಕೆ ಸರಳಪಳಿ, ಪ್ರಾಥಮಿಕ ಹಾಗೂ ದ್ವಿತೀಯ ಪ್ರಕ್ರಿಯೆ, ಮಾರುಕಟ್ಟೆ ಹಾಗೂ ಬ್ರ್ಯಾಂಡಿಂಗ್ ಪ್ರಕ್ರಿಯೆಗಳಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರ ಇನ್ನಷ್ಟು ಕ್ರಮ ಕೈಗೊಳ್ಳಲಿದೆ. 

ನ್ಯಾನೋ ಡಿಎಪಿ
ನ್ಯಾನೋ ಯೂರಿಯಾದ ಯಶಸ್ವಿ ಬಳಕೆ ಬಳಿಕ ನ್ಯಾನೋ ಡಿಎಪಿ ಅನ್ನು ವಿವಿಧ ಬೆಳೆಗಳಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. 

ಆತ್ಮ ನಿರ್ಭರ ಎಣ್ಣೆಬೀಜಗಳ ಅಭಿಯಾನ
ಎಣ್ಣೆಬೀಜಗಳಾದ ಸಾಸಿವೆ, ಕಡಲೆಬೀಜ, ಎಳ್ಳು, ಸೋಯಾಬಿನ್ ಹಾಗೂ ಸೂರ್ಯಕಾಂತಿ ಎಣ್ಣೆಬೀಜಗಳಲ್ಲಿ ಆತ್ಮ ನಿರ್ಭರತೆ ಸಾಧಿಸಲು ಸರ್ಕಾರ ಯೋಜನೆ ರೂಪಿಸಲಿದೆ. ಹೆಚ್ಚಿನ ಇಳುವರಿ ನೀಡುವ ಎಣ್ಣೆಬೀಜಗಳು, ಆಧುನಿಕ ಕೃಷಿ ತಂತ್ರಜ್ಞಾನಗಳ ಬಳಕೆ, ಮಾರುಕಟ್ಟೆ ಲಿಂಕೇಜ್, ಬೆಳೆ ವಿಮೆ ಮುಂತಾದವುಗಳಲ್ಲಿ ಆಧುನಿಕತೆ ಅಳವಡಿಸಲಾಗುವುದು.

ಹೈನುಗಾರರ ಅಭಿವೃದ್ಧಿ
ಹೈನುಗಾರರಿಗೆ ನೆರವು ನೀಡಲು ಸಮಗ್ರ ಯೋಜನೆ ರೂಪಿಸಲಾಗುತ್ತದೆ. ಕಾಲುಬಾಯಿ ರೊಗ ತಡೆಗೆ ಇನ್ನಷ್ಟು ಪ್ರಯತ್ನ ನಡೆಯಲಿದೆ. ಭಾರತ ವಿಶ್ವದ ಅತೀದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಆದರೆ, ಹಾಲು ನೀಡುವ ಪ್ರಾಣಿಗಳ ಉತ್ಪಾದಕತೆ ಕಡಿಮೆಯದೆ. ರಾಷ್ಟ್ರೀಯ ಗೋಕುಲ್ ಅಭಿಯಾನ, ರಾಷ್ಟ್ರೀಯ ಸಾಕುಪ್ರಾಣಿಗಳ ಅಭಿಯಾನ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸೇರಿದಂತೆ ಈಗಿರುವ ಕಾರ್ಯಕ್ರಮಗಳ ಮೂಲಕ ಹೈನುಗಾರರ ಅಭಿವೃದ್ಧಿಗೆ ಸರ್ಕಾರ ಪ್ರಯತ್ನಿಸಲಿದೆ.

Live Blog ಕೇಂದ್ರ ಬಜೆಟ್‌ 2024: ಜನಪ್ರಿಯ ಬಜೆಟ್ ಅಲ್ಲ, ಜುಲೈನಲ್ಲಿ ವಿಕಸಿತ ಭಾರತದ ನೀಲಿನಕ್ಷೆ ಘೋಷಣೆ...

ಆರ್ಥಿಕ ನೆರವು
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ಮಧ್ಯಮ ಹಾಗೂ ಸಣ್ಣ ರೈತರು ಸೇರಿದಂತೆ ಒಟ್ಟು 11.8 ಕೋಟಿ ರೈತರಿಗೆ ನೆರವಾಗಿದೆ. ಪಿಎಂ ಫಸಲ್ ಬಿಮಾ ಯೋಜನೆ ಅಡಿಯಲ್ಲಿ 4 ಕೋಟಿ ರೈತರಿಗೆ ಬೆಳೆ ವಿಮೆ ಸಿಕ್ಕಿದೆ. 

ಮಂಡಿಗಳ ಏಕೀಕರಣ
ಎಲೆಕ್ಟ್ರಾನಿಕ್ ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ 1361 ಮಂಡಿಗಳನ್ನು ಜೋಡಿಸಿದೆ. ಇದು 1.8 ಕೋಟಿ ರೈತರಿಗೆ ಸೇವೆಗಳನ್ನು ನೀಡುತ್ತಿದೆ. 3ಲಕ್ಷ ಕೋಟಿ ರೂ. ಮೊತ್ತದ ವಹಿವಾಟು ಕೂಡ ನಡೆಸುತ್ತಿದೆ. 
 

click me!