ವಿಕ್ಷಿತ್‌ ಭಾರತದ ನಮ್ಮ ಕನಸನ್ನು ನನಸಾಗಿಸುವ ಹಾದಿಯಲ್ಲಿದ್ದೇವೆ: ರಾಜೀವ್‌ ಚಂದ್ರಶೇಖರ್‌

By Santosh NaikFirst Published Feb 1, 2024, 4:14 PM IST
Highlights

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಮಧ್ಯಂತರ ಬಜೆಟ್‌ ಬಗ್ಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮಾತನಾಡಿದ್ದಾರೆ.
 

ನವದೆಹಲಿ (ಫೆ.1): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮಂಡಿಸಿದ ಮಧ್ಯಂತರ ಬಜೆಟ್‌ ಬಗ್ಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಮ್ಮ ಅಭಿಪ್ರಾಯ ತಳಿಸಿದ್ದಾರೆ. ವಿಕ್ಷಿತ್‌ ಭಾರತದ ನಮ್ಮ ಕನಸನ್ನು ನನಸಾಗಿಸುವ ಹಾದಿಯಲ್ಲಿ ಸಾಗಿದ್ದೇವೆ ಎಂದು ಹೇಳಿದ್ದಾರೆ. ದೇಶದ ಹಣಕಾಸು ಸಚಿವರು ಮಂಡಿಸಿದ ಮಧ್ಯಂತರ ಬಜೆಟ್‌ ನರೇಂದ್ರ ಮೋದಿ ಸರ್ಕಾರವು ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌ ಮತ್ತು ಸಬ್ಕಾ ವಿಶ್ವಾಸ್‌ ಎನ್ನುವ ಮನೋಭಾವ ಮತ್ತು ತತ್ವದೊಂದಿಗೆ ಅಮೃತ ಕಾಲ ಯುಗವನ್ನು  ಹೇಗೆ ಪ್ರಾರಂಭಿಸಿದೆ ಎನ್ನುವುದರ ಸಾಕ್ಷೀಕರಣವಾಗಿದೆ. ಇದು ಕೇವಲ ಘೋಷಣೆ ಮಾತ್ರವೇ ಅಲ್ಲ, ಭಾರತ ಮತ್ತು ನಮ್ಮ ಆರ್ಥಿಕತೆಯನ್ನು ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ ಪರಿವರ್ತಿಸಿದ ನಿಜವಾದ ಆಡಳಿತ ಸಿದ್ಧಾಂತವಾಗಿದೆ. ಇದೇ ಕಾರಣಕ್ಕಾಗಿ 2024 ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲು ನಮ್ಮನ್ನು ಒಮ್ಮತದ ಕಡೆಗೆ ಕರೆದೊಯ್ಯಲು ಕಾರಣವಾಗಲಿದೆ ಎಂದಿದ್ದಾರೆ.

ಇಂದು, ತಂತ್ರಜ್ಞಾನದ ಸಹಾಯದಿಂದ ಒಂದು ದಶಕದ ಸುದೀರ್ಘ ರಚನಾತ್ಮಕ ರೂಪಾಂತರದ ಬಳಿಕ ಬಲವಾದ ಅಡಿಪಾಯದ ಮೇಲೆ ನಾವಿಂದು ಕುಳಿತಿದ್ದೇವೆ. ಇಂದು ಭಾರತ ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಒಂದಾಗಿದೆ.  2014ರಲ್ಲಿ ಭಾರತ ದುರ್ಬಲವಾದ ಐದು ಆರ್ಥಿಕತೆಗಳಲ್ಲಿ ಒಂದಾಗಿತ್ತು. ಇಲ್ಲಿಯವರೆಗೆ ದೊಡ್ಡ ಮಟ್ಟದಲ್ಲಿ ಪರಿವರ್ತನೆಯಾಗಿದ್ದೇವೆ. ಇಂದು ನಾವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆನ ನಿಟ್ಟಿನಲ್ಲಿ ತ್ವರಿತ ಗತಿಯಲ್ಲಿ ಸಾಗುತ್ತಿದ್ದೇವೆ. ಭಾರತದ ನಾಲ್ಕು ಸ್ತಂಭಗಳಾದ ಮಹಿಳೆಯರು, ರೈತರು, ಯುವ ಭಾರತೀಯರು ಮತ್ತು ಬಡವರನ್ನು ಸಬಲೀಕರಣಗೊಳಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ  ಅವರು ಹಾಕಿರುವ ಧ್ಯೇಯ ಮತ್ತು ದೃಷ್ಟಿ 'ವಿಕ್ಷಿತ್ ಭಾರತ್ 2047' ನ ನಮ್ಮ ಕನಸನ್ನು ನನಸಾಗಿಸಲು ನಾವು ಉತ್ತಮ ಹಾದಿಯಲ್ಲಿದ್ದೇವೆ ಎಂದು ತೋರಿಸಿದೆ ಎಂದಿದ್ದಾರೆ.

Latest Videos

ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಸರ್ಕಾರದ ಬಂಪರ್‌, 1 ಲಕ್ಷ ಕೋಟಿಯ ಬಡ್ಡಿರಹಿತ ಸಾಲ!

ಕಳೆದ 10 ವರ್ಷಗಳಲ್ಲಿ ನಾವು ಮಾಡಿರುವ ಸಾಧನೆಗಳ ವೇದಿಕೆ ಮೇಲೆ ನಿಂತಿರುವಂತೆ, ನಾವು ನಮ್ಮ ದೇಶವನ್ನು ಮತ್ತಷ್ಟು ಪರಿವರ್ತಿಸಲು ಸಾಧ್ಯವಾಗುತ್ತದೆ ಎನ್ನುವ ಬಗ್ಗೆ ನನಗೆ ವಿಶ್ವಾಸವಿದೆ 'ಸಬ್ಕಾ ಪ್ರಯಾಸ್' ಮತ್ತು ಭವಿಷ್ಯದ ಆಡಳಿತ ಮಾದರಿಯ ಸಹಾಯದಿಂದ ನಮ್ಮ ಜೀವಿತಾವಧಿಯಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡುತ್ತೇವೆ ಎನ್ನುವ ಗುರಿ ಇದೆ ಎಂದಿದ್ದಾರೆ.

 

ಸಂಪೂರ್ಣ ಎಲೆಕ್ಟ್ರಿಕ್ ವಾಹನ ಗುರಿ, ಬಜೆಟ್‌ನಲ್ಲಿ ಇವಿ ಉತ್ಪಾದನೆ, ಚಾರ್ಜಿಂಗ್‌ಗೆ ಉತ್ತೇಜನ!

click me!