
ಕಿಂಡರ್ ಜಾಯ್ (Kinder Joy) ಮಕ್ಕಳ ಅತ್ಯಂತ ಪ್ರೀತಿಯ ಚಾಕೋಲೇಟ್ ಬ್ರ್ಯಾಂಡ್ (Chocolate brand). ಅಂಗಡಿಗೆ ಹೋದಾಗ ಮಕ್ಕಳು ಮೊದಲು ಡಿಮ್ಯಾಂಡ್ ಮಾಡೋದು ಕಿಂಡರ್ ಜಾಯನ್ನು. ಮಕ್ಕಳನ್ನು ಸೆಳೆಯಲು ಕಿಂಡರ್ ಜಾಯ್ ನಾನಾ ಪ್ರಯತ್ನಗಳನ್ನು ಮಾಡ್ತಿರುತ್ತದೆ. ಈಗ ಹ್ಯಾರಿ ಪಾಟರ್ ಸರದಿ. ಭಾರತದಲ್ಲಿ ಕಿಂಡರ್ ಜಾಯ್ ಹ್ಯಾರಿ ಪಾಟರ್ (Harry Potter) ಆವೃತ್ತಿ ಭರ್ಜರಿ ಯಶಸ್ಸು ಕಂಡಿದೆ. ಭಾರತೀಯರು ಹ್ಯಾರಿ ಪಾಟರ್ ಆವೃತ್ತಿಯ ಕಿಂಡರ್ ಜಾಯ್ ಖರೀದಿಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಕಿಂಡರ್ ಜಾಯ್ ಚಾಕೋಲೇಟ್ ಜೊತೆ ಮಕ್ಕಳ ಆಟಿಕೆಗಳು ಸಿಗೋದು ನಿಮಗೆಲ್ಲ ಗೊತ್ತೇ ಇದೆ. ಬಹುತೇಕ ಮಕ್ಕಳು ಕಿಂಡರ್ ಜಾಯ್ ಚಾಕೋಲೇಟ್ ಗಿಂತ ಆಟಿಕೆಗಾಗಿ ಅದನ್ನು ಖರೀದಿ ಮಾಡ್ತಾರೆ. ಈಗ ಹ್ಯಾರಿ ಪಾಟರ್ ಗೆ ಸಂಬಂಧಿಸಿದ ಆಟಿಕೆಗಳಿಗೆ ಮಕ್ಕಳು ಆಕರ್ಷಿತರಾಗಿದ್ದಾರೆ. ಕಿಂಡರ್ ಜಾಯ್ ಹ್ಯಾರಿ ಪಾಟರ್, ಭಾರತದಲ್ಲಿ 150 ಕೋಟಿ ವ್ಯವಹಾರ ನಡೆಸಲು ಯಶಸ್ವಿಯಾಗಿದೆ. ಇದು ಕಿಂಡರ್ ಜಾಯ್ ಬ್ರ್ಯಾಂಡ್ ಗೆ ಅತ್ಯಂತ ಮಹತ್ವದ್ದಾಗಿದೆ. ಅಲ್ಲದೆ ಭಾರತೀಯ ಗ್ರಾಹಕರಲ್ಲಿ ಆಕರ್ಷಕ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸೂಚಿಸುತ್ತದೆ.
ಹೆಚ್ಚು ಅಪಾಯ, ಅಧಿಕ ಲಾಭ; ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ₹5 ಕ್ಕಿಂತ ಕಡಿಮೆ ಬೆಲೆಯ ಷೇರು
ಯಾವ ರಾಜ್ಯದಲ್ಲಿ ಕಿಂಡರ್ ಜಾಯ್ ಹೆಚ್ಚು ಮಾರಾಟ : ಕಿಂಡರ್ ಜಾಯ್ ನ ಹ್ಯಾರಿ ಪಾಟರ್ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಅದ್ಭುತ ಯಶಸ್ಸನ್ನು ಕಂಡಿದ್ದು, 150 ಕೋಟಿ ರೂಪಾಯಿ ಮಾರಾಟದ ಗಡಿಯನ್ನು ದಾಟಿದೆ. ಮಹಾರಾಷ್ಟ್ರದಲ್ಲಿ ಇದ್ರ ಮಾರಾಟ ಅತಿ ಹೆಚ್ಚು. ಮಹಾರಾಷ್ಟ್ರ ಒಂದರಲ್ಲಿಯೇ 35 ಕೋಟಿ ರೂಪಾಯಿಗಳ ಮಾರಾಟವನ್ನು ಕಂಪನಿ ಮಾಡಿದೆ. ಹ್ಯಾರಿ ಪಾಟರ್ ಕಿಂಡರ್ ಜಾಯ್ ಗೆ ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ನಾಗ್ಪುರದಲ್ಲಿ ಅತಿ ಹೆಚ್ಚು ಬೇಡಿಕೆ ಇದೆ.
ಕಿಂಡರ್ ಜಾಯ್ ಪ್ಲಾನ್ ಸಕ್ಸಸ್ : ಕಿಂಡರ್ ಜಾಯ್ ಮಕ್ಕಳನ್ನು ಆಕರ್ಷಿಸಲು ಎರಡು ಮುಖ್ಯ ಅಂಶಗಳನ್ನು ಒಟ್ಟುಗೂಡಿಸಿದೆ. ಚಾಕೋಲೇಟ್ ಜೊತೆ ಮಕ್ಕಳ ಆಟಿಕೆ ಒಂದು ಕಡೆಯಾದ್ರೆ ಇನ್ನೊಂದು ಹ್ಯಾರಿ ಪಾಟರ್. ಭಾರತದಲ್ಲಿ ಹ್ಯಾರಿ ಪಾಟರ್ ಅಭಿಮಾನಿಗಳ ಸಂಖ್ಯೆ ಸಾಕಷ್ಟಿದೆ. ಅದ್ರಲ್ಲೂ ಮಕ್ಕಳನ್ನು ಹ್ಯಾರಿ ಪಾಟರ್ ಆಕರ್ಷಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡ ಕಂಪನಿ ಎರಡನ್ನೂ ಒಂದೇ ಕಡೆ ನೀಡಿದೆ. ಕಿಂಡರ್ ಜಾಯ್ ಖರೀದಿ ಮಾಡಿದ ಮಕ್ಕಳಿಗೆ ಹ್ಯಾರಿ ಪಾಟರ್ ಗೆ ಸಂಬಂಧಿಸಿದ ವಸ್ತು, ಆಟಿಕೆ ಸಿಗ್ತಿದೆ. ಇದನ್ನು ಹೆಚ್ಚಿನ ಮಟ್ಟದಲ್ಲಿ ಸಂಗ್ರಹಿಸಲು ಮಕ್ಕಳು ಹ್ಯಾರಿ ಪಾಟರ್ ಆವೃತ್ತಿ ಕಿಂಡರ್ ಜಾಯನ್ನು ಖರೀದಿ ಮಾಡ್ತಿದ್ದಾರೆ. ಬಹುತೇಕ ಕಡೆ ಹ್ಯಾರಿ ಪಾಟರ್ ಕಿಂಡರ್ ಜಾಯ್ ಔಟ್ ಆಫ್ ಸ್ಟಾಕ್. ಬರೀ ಮಕ್ಕಳು ಮಾತ್ರವಲ್ಲ ಯುವಕರು ಕೂಡ ಹ್ಯಾರಿ ಪಾಟರ್ ಕಿಂಡರ್ ಜಾಯ್ ಖರೀದಿಗೆ ಮುಂದಾಗಿದ್ದಾರೆ.
ಅಬ್ಬಬ್ಬಾ, ಈ ಉಪ್ಪಿನ ಬೆಲೆ 1 ಕೆಜಿಗೆ 30 ಸಾವಿರ ರೂಪಾಯಿ; ಏನಿದರ ವಿಶೇಷತೆ? ಯಾಕಿಷ್ಟು
ಮಕ್ಕಳು ಚಾಕೋಲೇಟ್ ಪ್ರೇಮಿಗಳು. ಚಾಕೋಲೇಟ್ ಜೊತೆ ಆಟಿಕೆ ಬರುತ್ತೆ ಅಂದ್ರೆ ಮಕ್ಕಳು ಮತ್ತಷ್ಟು ಖುಷಿಯಾಗ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಚಾಕೋಲೇಟ್ ಜೊತೆ ಆಟಿಕೆ ಕಾನ್ಸೆಪ್ಟ್ ಮೊದಲಿನಿಂದಲೂ ಇದೆ. ಈ ಹ್ಯಾರಿ ಪಾಟರ್ ಕಿಂಡರ್ ಜಾಯ್ ಮಾರುಕಟ್ಟೆ ಆವರಿಸಿರುವ ಕಾರಣ ಉಳಿದ ಕಂಪನಿಗಳಿಗೆ ಹೊಡೆತ ಬೀಳ್ತಿದೆ. ಕಿಂಡರ್ ಜಾಯ್ ಚಾಕೊಲೇಟ್‌ಗಳು ಮತ್ತು ಆಟಿಕೆಗಳ ಜೊತೆಗೆ, ಭಾರತೀಯ ಮಕ್ಕಳಿಗೆ ಮೋಜಿನ ಮತ್ತು ಆಕರ್ಷಕ ಅನುಭವ ನೀಡ್ತಿದೆ. ಉಳಿದ ಕಂಪನಿಗಳು ಕೂಡ ಇದೇ ಪಾಲಿಸಿ ಅನುಸರಿಸಿದ್ರೆ ಮಾರುಕಟ್ಟೆಯಲ್ಲಿ ಜಾಗ ಪಡೆಯಬಹುದು. ಮುಂದಿನ ದಿನಗಳಲ್ಲಿ ಉಳಿದ ಕಂಪನಿಗಳು ಹೊಸ ಹಾಗೂ ನವೀನ ಉತ್ಪನ್ನಗಳನ್ನು ಪರಿಚಯಿಸುವ ನಿರೀಕ್ಷೆ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.