ಕಹಿ ಸುದ್ದಿ: ಮಂಕಾಯ್ತು ಡಾಲರ್ ಎದುರು ರೂಪಾಯಿ ಮೌಲ್ಯದ ಜಿದ್ದಾಜಿದ್ದಿ!

By Web DeskFirst Published Sep 19, 2019, 1:26 PM IST
Highlights

ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ ಮೌಲ್ಯ| ಆರ್ಥಿಕ ಕುಸಿತದ ಪರಿಣಾಮ ರೂಪಾಯಿ ಮೌಲ್ಯದಲ್ಲಿ ಕುಸಿತ| ಆರ್ಥಿಕ ವಲಯದ ನಿರಾಶಾದಾಯಕ ಚಟುವಟಿಕೆ ಹಿನ್ನೆಲೆ| ಯುಎಸ್ ಡಾಲರ್ ಎದುರು 24 ಪೈಸೆಯಷ್ಟು ಕುಸಿತ ಕಂಡ ರೂಪಾಯಿ ಮೌಲ್ಯ| ಪ್ರಸ್ತುತ ರೂಪಾಯಿ ಮೌಲ್ಯ ಪ್ರತೀ ಡಾಲರ್‌ಗೆ 71.36 ರೂ.| ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸುವ ನಿರ್ಣಯವೇ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ|

ಮುಂಬೈ(ಸೆ.19): ಆರ್ಥಿಕ ಹಿಂಜರಿತ ಹಾಗೂ ಆರ್ಥಿಕ ವಲಯದ ನಿರಾಶಾದಾಯಕ ಚಟುವಟಿಕೆ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

ಆರ್ಥಿಕ ಕುಸಿತದ ಆತಂಕದ ನಡುವೆಯೇ ಗಾಯದ ಮೇಲೆ ಬರೆ ಎಂಬಂತೆ ಡಾಲರ್ ಎದುರು ರೂಪಾಯಿ ಮೂಲ್ಯ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಷೇರು ಮಾರುಕಟ್ಟೆಯ ಇಂದಿನ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಬರೊಬ್ಬರಿ 24 ಪೈಸೆಯಷ್ಟು ಕುಸಿತಗೊಂಡಿದೆ. ಪ್ರಸ್ತುತ ರೂಪಾಯಿ ಮೌಲ್ಯ ಪ್ರತೀ ಡಾಲರ್‌ಗೆ 71.36 ರೂ. ಆಗಿದೆ.

ರೂಪಾಯಿ ಮೌಲ್ಯ ಕುಸಿತಕ್ಕೆ ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸುವ ನಿರ್ಣಯವೇ ಕಾರಣ ಎನ್ನಲಾಗಿದ್ದು, ಪರಿಣಾಮವಾಗಿ ಸಹಜವಾಗಿ ಡಾಲರ್ ಬೆಲೆ ಏರಿಕೆ ಕಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೇ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್, ತನ್ನ ಸಾಲದ ಮೇಲಿನ ಬಡ್ಡಿದರದಲ್ಲಿ 1.75ರಿಂದ 2.0(25 ಬೇಸಿಸ್ ಪಾಯಿಂಟ್)ರಷ್ಟು ಕಡಿತಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

click me!