ಡಾಲರ್ ಎದುರು 83.08 ರೂಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ!

By Suvarna News  |  First Published Oct 20, 2022, 4:43 PM IST

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಪ್ರತಿ ದಿನ ದಾಖಲೆ ಬರೆಯುತ್ತಿದೆ. ಇದೇ ಮೊದಲ ಬಾರಿಗೆ 83 ರೂಪಾಯಿ ಕುಸಿತ ಕಂಡಿತ್ತು. ಇದೀಗ ಈ ಮೌಲ್ಯ ದಾಟಿದೆ


ನವದೆಹಲಿ(ಅ.20): ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಆತಂಕವೂ ಹೆಚ್ಚಾಗುತ್ತಿದೆ. ಈಗಷ್ಟೇ ಕೊರೋನಾ, ಪ್ರವಾಹ ಸೇರಿದಂತೆ ಹಲವು ಸಂಕಷ್ಟಗಳಿಂದ ಚೇತರಿಸಿಕೊಳ್ಳುತ್ತಿರುವ ಭಾರತ, ರೂಪಾಯಿ ಮೌಲ್ಯ ಕುಸಿತದಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದೆ. ಇದೀಗ ಡಾಲರ್ ಎದುರು ರೂಪಾಯಿ ಮೌಲ್ಯ  ದಾಖಲೆ ಮಟ್ಟಕ್ಕೆ ಕುಸಿತ ಕಂಡಿದೆ. ಗುರುವಾರ ಮತ್ತೆ 60 ಪೈಸೆ ಕುಸಿತ ಕಂಡಿದ್ದು ಇದೀಗ 83.08 ರೂನಲ್ಲಿ ಅಂತ್ಯಗೊಂಡಿದೆ. 83 ರೂಪಾಯಿ ಗಡಿ ದಾಟಿದ್ದು ಇದೇ ಮೊದಲಾಗಿತ್ತು. ಇದೀಗ 83 ರೂಪಾಯಿ ದಾಟಿ 83.08 ರೂಪಾಯಿಗೆ ಬಂದಿಳಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಲೇ ಇದೆ. ಇತ್ತ ರೂಪಾಯಿ ಮೌಲ್ಯ ಕುಸಿತದಿಂದ ದುಬಾರಿ ಮೊತ್ತ ತೆರಬೇಕಾಗಿದೆ.

ಬುಧವಾರ 61 ಪೈಸೆಗಳಷ್ಟು ಕುಸಿತ ಕಂಡಿತ್ತು. ಮುಂಬೈನ ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರುಪಾಯಿ ಮೌಲ್ಯ61 ಪೈಸೆಗಳಷ್ಟುಭಾರೀ ಕುಸಿತ ಕಂಡು 83.01 ರು.ನಲ್ಲಿ ಮುಕ್ತಾಯವಾಗಿತ್ತು.   ಭಾರತೀಯ ಷೇರುಪೇಟೆಯಿಂದ ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆಯುತ್ತಿರುವುದು ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಡಾಲರ್‌ ಮೌಲ್ಯ ಮತ್ತಷ್ಟುಚೇತರಿಕೆಯಾಗಿರುವುದು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಇದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರುತ್ತಿರುವುದು, ಸ್ಥಳೀಯ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರರು ಹಿಂಜರಿಯುತ್ತಿರುವುದು ಕೂಡಾ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. 

Tap to resize

Latest Videos

 

ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ; ಡಾಲರ್ ಬಲವಾಗುತ್ತಿದೆ: Nirmala Sitharaman

ಡಾಲರ್ ಇಂಡೆಕ್ಸ್ ಲೆವೆಲ್ 122.55 ತಲುಪಿದೆ. ಇದು ಕಳೆದ 14 ವರ್ಷಗಳಲ್ಲೇ ಗರಿಷ್ಠವಾಗಿದೆ. ಕರೆನ್ಸಿ ಮೌಲ್ಯ ಕುಸಿತ ಭಾರತ ರೂಪಾಯಿ ಮಾತ್ರವಲ್ಲ, ಹಲವು ದೇಶಗಳು ಈ ಸಂಕಷ್ಟ ಅನುಭವಿಸುತ್ತಿದೆ. ಜಪಾನೀಸ್ ಯೆನ್ ದಾಖಲೆ ಮೊತ್ತ 150ಕ್ಕೆ ಇಳಿದಿದೆ. ಇದು ಕಳೆದ 32 ವರ್ಷಗಳಳಲ್ಲೇ ಅತ್ಯಧಿಕವಾಗಿದೆ.  

ರುಪಾಯಿ ಕುಸಿದಿಲ್ಲ, ಡಾಲರ್‌ ಬಲಗೊಳ್ಳುತ್ತಿದೆ: ನಿರ್ಮಲಾ
ಡಾಲರ್‌ ಎದುರು 82 ರು.ಗಿಂತ ಕೆಳಗೆ ಕುಸಿದಿರುವ ರುಪಾಯಿ ಮೌಲ್ಯದ ಬಗ್ಗೆ ಹೊಸ ವ್ಯಾಖ್ಯಾನ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ‘ರುಪಾಯಿ ಮೌಲ್ಯ ಕುಸಿದಿಲ್ಲ. ಆದರೆ ಡಾಲರ್‌ ಮೌಲ್ಯ ಬಲಗೊಳ್ಳತೊಡಗಿದೆ’ ಎಂದಿದ್ದಾರೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳು ನಿರ್ಮಲಾ ಹೇಳಿಕೆ ‘ಅಸಂಬದ್ಧ’ ಎಂದು ಕಿಡಿಕಾರಿವೆ. ಅಮೆರಿಕ ಪ್ರವಾಸದಲ್ಲಿರುವ ನಿರ್ಮಲಾ ಸುದ್ದಿಗಾರರ ಜತೆ ಮಾತನಾಡಿ, ‘ರುಪಾಯಿ ಮೌಲ್ಯ ಕುಸಿಯುತ್ತಿಲ್ಲ. ಡಾಲರ್‌ ಬಲವರ್ಧನೆ ಆಗುತ್ತಿದೆ. ರುಪಾಯಿ ಮೌಲ್ಯ ಅಷ್ಟೇ ಅಲ್ಲ, ವಿಶ್ವದ ಇತರ ಕರೆನ್ಸಿ ಮೌಲ್ಯಗಳೂ ಡಾಲರ್‌ ಎದುರು ಮಂಕಾಗಿವೆ. ಇದಕ್ಕೆ ಕಾರಣ ಡಾಲರ್‌ ಬಲವರ್ಧನೆ’ ಎಂದರು.

 

ಡಾಲರ್ ಎದುರು ಮುಂದುವರಿದ ರೂಪಾಯಿ ಮೌಲ್ಯ ಕುಸಿತ, ಕಾರಣವೇನು?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯೇರಿಕೆ, ವಿದೇಶಿ ಹೂಡಿಕೆದಾರರಿಂದ ಹೂಡಿಕೆ ಹಿಂತೆಗೆತ ಇದಕ್ಕೆ ಮುಖ್ಯ ಕಾರಣವಾಗಿದೆ.  

click me!