
ಅಮೂಲ್ ಎಲ್ಲರಿಗೆ ಇಷ್ಟವಾಗುವ ಬ್ರ್ಯಾಂಡ್. ಅಮೂಲ್ ಡೈರಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಸ್ವಂತ ವ್ಯವಹಾರ ಶುರು ಮಾಡ್ಬೇಕು ಎನ್ನುವವರು ಟೆನ್ಷನ್ ಮಾಡಿಕೊಳ್ಳಬೇಕಾಗಿಲ್ಲ. ಅಮೂಲ್ ಜೊತೆ ಕೈ ಜೋಡಿಸಿ ಸ್ವಂತ ವ್ಯವಹಾರ ಶುರು ಮಾಡಬಹುದು. ಇದಕ್ಕೆ ನೀವು ಅಮೂಲ್ ಫ್ರಾಂಚೈಸಿ ಖರೀದಿ ಮಾಡಬೇಕಾಗುತ್ತದೆ. ನಾವಿಂದು ಅಮೂಲ್ ಫ್ರಾಂಚೈಸಿ ಖರೀದಿ ಹಾಗೂ ಅದ್ರ ವ್ಯವಹಾರದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಸಾಮಾನ್ಯವಾಗಿ ವ್ಯಾಪಾರ (Business) ಶುರು ಮಾಡಿದ ನಂತ್ರ ಗಳಿಕೆಗೆ ಕೆಲ ಸಮಯದ ಅವಶ್ಯಕತೆಯಿರುತ್ತದೆ. ಆದ್ರೆ ಅಮೂಲ್ (Amul ) ಫ್ರಾಂಚೈಸಿ ಖರೀದಿಸಿದ್ರೆ ಮೊದಲ ದಿನದಿಂದಲೇ ನೀವು ಗಳಿಕೆ ಶುರು ಮಾಡಬಹುದು. ಸಣ್ಣ ಹೂಡಿಕೆಗಳಲ್ಲಿ ಪ್ರತಿ ತಿಂಗಳು ನಿಯಮಿತ ಗಳಿಕೆಯನ್ನು ಮಾಡಬಹುದು. ಅಮುಲ್‌ನ ಫ್ರಾಂಚೈಸಿ (Franchise ) ಯನ್ನು ತೆಗೆದುಕೊಳ್ಳುವುದು ಲಾಭದಾಯಕ ವ್ಯವಹಾರವಾಗಿದೆ. ನಷ್ಟದ ವಿಷ್ಯಕ್ಕೆ ಬಂದ್ರೆ ಇದು ಅತ್ಯಂತ ಕಡಿಮೆ ಎನ್ನಬಹುದು.
ಆಸ್ತಿ ಮಾಡೋ ಹುಚ್ಚು ಸಹಜ, ಅವಸರದಿಂದ ಮಾಡಿಕೊಳ್ಳಬೇಡಿ ಎಡವಟ್ಟು!
2 ಲಕ್ಷ ಹೂಡಿಕೆ (Investment) ಮಾಡಿ ವ್ಯಾಪಾರ ಆರಂಭಿಸಿ : ಅಮೂಲ್ ಯಾವುದೇ ರಾಯಲ್ಟಿ ಅಥವಾ ಲಾಭ ಹಂಚಿಕೆ ಇಲ್ಲದೆ ಫ್ರಾಂಚೈಸಿಗಳನ್ನು ನೀಡುತ್ತಿದೆ. ಅಮೂಲ್ ಫ್ರಾಂಚೈಸಿಯನ್ನು ತೆಗೆದುಕೊಳ್ಳುವ ವೆಚ್ಚವೂ ತುಂಬಾ ಹೆಚ್ಚಿಲ್ಲ. 2 ಲಕ್ಷದಿಂದ 6 ಲಕ್ಷ ರೂಪಾಯಿ ಖರ್ಚು ಮಾಡಿ ವ್ಯಾಪಾರವನ್ನು ಆರಂಭಿಸಬಹುದು. ಅಮೂಲ್ ಫ್ರಾಂಚೈಸಿ ಮೂಲಕ ಪ್ರತಿ ತಿಂಗಳು ಸುಮಾರು 5 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಉತ್ಪನ್ನವನ್ನು ನೀವು ಮಾರಾಟ ಮಾಡಬಹುದು. ನೀವು ಎಷ್ಟು ಮಾರಾಟ ಮಾಡ್ತೀರಿ ಹಾಗೆ ಎಷ್ಟು ಗಳಿಸ್ತೀರಿ ಎನ್ನುವುದು ನೀವು ಯಾವ ಜಾಗದಲ್ಲಿ ಅಮೂಲ್ ಉತ್ಪನ್ನ ಮಾರಾಟ ಮಾಡ್ತಿದ್ದೀರಿ ಎಂಬುದನ್ನು ಅವಲಂಭಿಸಿದೆ.
ಫ್ರಾಂಚೈಸ್ (Franchise) ಪಡೆಯೋದು ಹೇಗೆ? : ಅಮೂಲ್ ಎರಡು ರೀತಿಯ ಫ್ರಾಂಚೈಸಿಗಳನ್ನು ನೀಡುತ್ತದೆ. ಒಂದು ಅಮೂಲ್ ಔಟ್ಲೆಟ್ . ಅಮೂಲ್ ರೈಲ್ವೇ ಪಾರ್ಲರ್ ಅಥವಾ ಅಮೂಲ್ ಕಿಯೋಸ್ಕ್ ಫ್ರಾಂಚೈಸಿ. ಎರಡನೆಯದಾಗಿ ಅಮೂಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಫ್ರಾಂಚೈಸಿ. ನೀವು ಅಮೂಲ್ ಔಟ್ಲೆಟ್ ಫ್ರಾಂಚೈಸಿ ಖರೀದಿ ಮಾಡ್ತೀರಿ ಅಂದ್ರೆ ನೀವು 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ನೀವು ಅಮೂಲ್ ಐಸ್ ಕ್ರೀಂ ಸ್ಕೂಪಿಂಗ್ ಪಾರ್ಲರ್ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡುತ್ತೀರಿ ಎಂದಾದ್ರೆ ನೀವು 5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಅಮೂಲ್ ನಿಮ್ಮಿಂದ ಬ್ರ್ಯಾಂಡ್ ಭದ್ರತೆಯನ್ನು ಪಡೆಯುತ್ತದೆ. ಇದಕ್ಕಾಗಿ ನೀವು 25 ರಿಂದ 50 ಸಾವಿರ ರೂಪಾಯಿಗಳನ್ನು ಮರುಪಾವತಿಸಲಾಗದ ಬ್ರ್ಯಾಂಡ್ ಭದ್ರತೆಯಾಗಿ ಪಾವತಿಸಬೇಕಾಗುತ್ತದೆ.
ಹೇಗೆ ಸಿಗುತ್ತೆ ಕಮಿಷನ್ (Commission) ? : ಅಮೂಲ್ ಔಟ್ಲೆಟ್ ಅನ್ನು ತೆಗೆದುಕೊಂಡಾಗ, ಕಂಪನಿಯು ಅಮೂಲ್ ಉತ್ಪನ್ನಗಳ ಕನಿಷ್ಠ ಮಾರಾಟ ಬೆಲೆಯ (MRP) ಮೇಲೆ ಕಮಿಷನ್ ಪಾವತಿಸುತ್ತದೆ. ಇದರಲ್ಲಿ ಒಂದು ಹಾಲಿನ ಪೌಚ್ ಮೇಲೆ ಶೇಕಡಾ 2.5ರಷ್ಟು, ಹಾಲಿನ ಉತ್ಪನ್ನಗಳ ಮೇಲೆ ಶೇಕಡಾ 10 ಮತ್ತು ಐಸ್ ಕ್ರೀಂ ಮೇಲೆ ಶೇಕಡಾ 20ರಷ್ಟು ಕಮಿಷನ್ ನಿಮಗೆ ಲಭ್ಯವಿದೆ. ಅಮೂಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್‌ನ ಫ್ರಾಂಚೈಸಿ ತೆಗೆದುಕೊಂಡಲ್ಲಿ, ಪಾಕವಿಧಾನ ಆಧಾರಿತ ಐಸ್ ಕ್ರೀಮ್, ಶೇಕ್, ಪಿಜ್ಜಾ, ಸ್ಯಾಂಡ್‌ವಿಚ್, ಹಾಟ್ ಚಾಕೊಲೇಟ್ ಪಾನೀಯಗಳ ಮೇಲೆ ಶೇಕಡಾ 50 ರಷ್ಟು ಕಮಿಷನ್ ಲಭ್ಯವಿದೆ. ಕಂಪನಿಯು ಪೂರ್ವ ಪ್ಯಾಕ್ ಮಾಡಿದ ಐಸ್ ಕ್ರೀಮ್ ಮೇಲೆ ಶೇಕಡಾ 20ರಷ್ಟು ಮತ್ತು ಅಮೂಲ್ ಉತ್ಪನ್ನಗಳ ಮೇಲೆ ಶೇಕಡಾ 10ರಷ್ಟು ಕಮಿಷನ್ ನೀಡುತ್ತದೆ.
ಎಷ್ಟು ಜಾಗ ಬೇಕು? : ಅಮೂಲ್ ಔಟ್ಲೆಟ್ ತೆಗೆದುಕೊಂಡರೆ 150 ಚದರ ಅಡಿ ಜಾಗದ ಅವಶ್ಯಕತೆಯಿರುತ್ತದೆ. ನೀವು ಅಮೂಲ್ ಐಸ್ ಕ್ರೀಮ್ ಪಾರ್ಲರ್‌ನ ಫ್ರಾಂಚೈಸಿ ತೆಗೆದುಕೊಂಡದ್ರೆ ಕನಿಷ್ಠ 300 ಚದರ ಅಡಿ ಜಾಗ ಹೊಂದಿರಬೇಕಾಗುತ್ತದೆ.
ಕೇವಲ 399 ರೂ.ಗೆ ಅಂಚೆ ಇಲಾಖೆಯ ಅಪಘಾತ ವಿಮೆ; ಸಿಗಲಿದೆ 10 ಲಕ್ಷ ರೂ. ಕವರೇಜ್!
ಫ್ರಾಂಚೈಸಿ ಪಡೆಯೋದು ಹೀಗೆ : ಅಮೂಲ್ ಜೊತೆ ಕೈಜೋಡಿಸಲು ನೀವು ಬಯಸಿದ್ದರೆ ಅಮೂಲ್ ಫ್ರಾಂಚೈಸಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನೀವು retail@amul.coop ಗೆ ಮೇಲ್ ಮಾಡಬೇಕು. http://amul.com/m/amul ಲಿಂಕ್‌ಗೆ ಭೇಟಿ ನೀಡುವ ಮೂಲಕ ನೀವು ಅಮೂಲ್ ಪಾರ್ಲರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಳ್ಳಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.