ಈ ಕಾರಣಕ್ಕಾಗಿ 10 ನಿಮಿಷಗಳಲ್ಲಿ ಕಂಪನಿಯ ಪ್ರಮುಖ ಉದ್ಯೋಗಿ ವಜಾ: Wipro ಬಾಸ್‌

Published : Oct 20, 2022, 03:43 PM IST
ಈ ಕಾರಣಕ್ಕಾಗಿ 10 ನಿಮಿಷಗಳಲ್ಲಿ ಕಂಪನಿಯ ಪ್ರಮುಖ ಉದ್ಯೋಗಿ ವಜಾ: Wipro ಬಾಸ್‌

ಸಾರಾಂಶ

ಹಿರಿಯ ಉದ್ಯೋಗಿಗಳೂ ಸಹ "ನೈತಿಕತೆಯ ಉಲ್ಲಂಘನೆ" ಯಿಂದ ಹೊರತಾಗಿಲ್ಲ ಎಂದು ವಿಪ್ರೋ ಅಧ್ಯಕ್ಷ ರಿಶದ್ ಪ್ರೇಮ್‌ಜೀ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ. 

ಮೂನ್‌ಲೈಟಿಂಗ್‌ಗಾಗಿ (Moonlighting) ತನ್ನ ಕಂಪನಿಯು 300 ಉದ್ಯೋಗಿಗಳನ್ನು ವಜಾಗೊಳಿಸಿ ವಿಪ್ರೋ ಅಧ್ಯಕ್ಷ ಹೆಚ್ಚು ಸುದ್ದಿಯಾಗಿದ್ದರು. ಈಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ ವಿಪ್ರೋ (Wipro) ಅಧ್ಯಕ್ಷ ರಿಶದ್‌ ಪ್ರೇಮ್‌ಜೀ (Rishad Premji). ಹಿರಿಯ ಉದ್ಯೋಗಿಗಳೂ ಸಹ ನೈತಿಕತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಕಂಪನಿಯ ಪ್ರಮುಖ 20 ನಾಯಕರಲ್ಲಿ ಒಬ್ಬರನ್ನು ಈ ಕಾರಣಕ್ಕಾಗಿ ಹತ್ತೇ ನಿಮಿಷಗಳಲ್ಲಿ ವಜಾಗೊಳಿಸಲಾಗಿದೆ ಎಂದು ಹೇಳಿದರು. 

ಹಿರಿಯ ಉದ್ಯೋಗಿಗಳೂ ಸಹ "ನೈತಿಕತೆಯ ಉಲ್ಲಂಘನೆ" ಯಿಂದ (Integrity Violation) ಹೊರತಾಗಿಲ್ಲ ಎಂದು ವಿಪ್ರೋ ಅಧ್ಯಕ್ಷ ರಿಶದ್ ಪ್ರೇಮ್‌ಜೀ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದರು. ಅವರು "ದೊಡ್ಡ ವಿಶ್ವಾಸಾರ್ಹತೆಯ ಉಲ್ಲಂಘನೆ" ಮಾಡಿದ್ದಾರೆ ಎಂದು ಕಂಡುಬಂದ 10 ನಿಮಿಷಗಳಲ್ಲಿ ಟೆಕ್‌ ದೈತ್ಯ ಕಂಪನಿಗಳಲ್ಲಿ ಒಂದಾದ ವಿಪ್ರೋ, ತನ್ನ ಪ್ರಮುಖ 20 ನಾಯಕರಲ್ಲಿ ಒಬ್ಬರನ್ನು ವಜಾಗೊಳಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನು ಓದಿ: ಒಂದೇ ಸಮಯದಲ್ಲಿ 2 ಕಡೆ ಕೆಲಸ: Wipro 300 ಸಿಬ್ಬಂದಿ ವಜಾ

"ನಾವು 10 ನಿಮಿಷಗಳಲ್ಲಿ ಆ ನಿರ್ಧಾರವನ್ನು ಮಾಡಿದ್ದೇವೆ. ಈ ವ್ಯಕ್ತಿಯು ಸಂಸ್ಥೆಯಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತಿದ್ದರು. ಆದರೆ ಸಮಯವು ಕಠಿಣವಾದಾಗ, ಮತ್ತು ನೀವು ಆ ಕಠಿಣ ನಿರ್ಧಾರಗಳನ್ನು ಮಾಡಬೇಕಾಗಿದೆ" ಎಂದು ರಿಶದ್‌ ಪ್ರೇಮ್‌ಜೀ ಹೇಳಿದ್ದಾರೆಂದು ವರದಿಯಾಗಿದೆ.

ಅಕ್ಟೋಬರ್ 19 ರಂದು ಬೆಂಗಳೂರಿನಲ್ಲಿ ನಡೆದ ನಾಸ್ಕಾಮ್ ಉತ್ಪನ್ನ ಸಮಾವೇಶದಲ್ಲಿ ಮಾತನಾಡುತ್ತಿದ್ದ ರಿಷದ್‌ ಪ್ರೇಮ್‌ಜಿ ಈ ಹೇಳಿಕೆ ನೀಡಿದ್ದಾರೆ. ಆದರೆ, ಈ ನಿಯಮ 
ಉಲ್ಲಂಘನೆಯೂ ಮೂನ್‌ಲೈಟಿಂಗ್‌ಗೆ ಸಂಬಂಧಿಸಿದ್ದೇ ಎಂಬುದನ್ನು ಅವರು ವಿವರಿಸಲಿಲ್ಲ. ಆದರೂ, "ನೈತಿಕತೆ ಅಥವಾ ವಿಶ್ವಾಸಾರ್ಹತೆಯ ಉಲ್ಲಂಘನೆಯ ಕೃತ್ಯಗಳು" ಎಂದು ವಿಪ್ರೋ ಬಾಸ್‌ ಹೇಳಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಮೂನ್‌ಲೈಟಿಂಗ್ "ಅದರ ಆಳವಾದ ರೂಪದಲ್ಲಿ ವಿಶ್ವಾಸಾರ್ಹತೆಯ ಸಂಪೂರ್ಣ ಉಲ್ಲಂಘನೆಯಾಗಿದೆ" ಎಂದೂ ರಿಷದ್‌ ಪ್ರೇಮ್‌ಜೀ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಏಕಕಾಲದಲ್ಲಿ ಎರಡೆರಡು ಕೆಲಸ, ಉದ್ಯೋಗಿಗಳಿಗೆ ಇನ್ಫೋಸಿಸ್ ಖಡಕ್ ವಾರ್ನಿಂಗ್!

300 ಉದ್ಯೋಗಿಗಳನ್ನು ವಜಾಗೊಳಿಸಿದ ಆರೋಪವನ್ನು ಎದುರಿಸುತ್ತಿರುವ ವಿಪ್ರೋ ತನ್ನ ನೀತಿಗಳ ಬಗ್ಗೆ ಸ್ಪಷ್ಟನೆ ನೀಡಿದೆ. ಪ್ರತಿಸ್ಪರ್ಧಿ ಕಂಪನಿಗಳ ಪರವಾಗಿ ಕೆಲಸ ಮಾಡುವುದನ್ನು ವಿಪ್ರೋ ಸಹಿಸುವುದಿಲ್ಲ ಎಂದೂ ಪರೋಕ್ಷ ಎಚ್ಚರಿಕೆ ನೀಡಿದೆ. ಕೆಲವು "ಸೈಡ್ ಜಾಬ್‌ಗಳನ್ನು ಮಾಡುವುದು ಸರಿ. ಆದರೆ ಪ್ರತಿಸ್ಪರ್ಧಿಗಾಗಿ ಕೆಲಸ ಮಾಡುವುದು "ನೈತಿಕತೆಯ ಪ್ರಶ್ನೆ" ಎಂದು  ವಿಪ್ರೋ ಮುಖ್ಯ ಕಾರ್ಯನಿರ್ವಾಹಕ ಥಿಯೆರಿ ಡೆಲಾಪೋರ್ಟೆ ಬುಧವಾರ ಹೇಳಿದ್ದಾರೆ. 

ಕೋವಿಡ್‌ ಸಾಂಕ್ರಾಮಿಕ (Covid Pandemic) ಸಮಯದಲ್ಲಿ ಮೂನ್‌ಲೈಟಿಂಗ್‌ (ಒಂದೇ ಸಮಯದಲ್ಲಿ 2 ಕಂಪನಿಗಳಲ್ಲಿ ಕಾರ್ಯನಿರ್ವಹಿಸುವುದು) ಮಾಡಿದ್ದ ತನ್ನ 300 ಸಿಬ್ಬಂದಿಗಳನ್ನು ವಿಪ್ರೋ ಕಂಪನಿ ಕೆಲಸದಿಂದ ವಜಾ ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷ ರಿಶದ್‌ ಪ್ರೇಮ್‌ಜೀ ಕಳೆದ ತಿಂಗಳು ಮಾಹಿತಿ ನೀಡಿದ್ದರು. ಕೋವಿಡ್‌ ವೇಳೆ ನಮ್ಮ ಕಂಪನಿಯ 300 ಸಿಬ್ಬಂದಿಗಳು, ನಮ್ಮ ಪ್ರತಿಸ್ಪರ್ಧಿ ಕಂಪನಿಗಳಲ್ಲೂ ಕೆಲಸ ಮಾಡುತ್ತಿದ್ದರು. ಇಂಥ ನಡತೆ ಕಾನೂನಿಗೆ ವಿರುದ್ಧವಾಗಿದ್ದು, ಅದರಂತೆ ನಾವು ಅಂಥ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದೇವೆ. ಮೂನ್‌ಲೈಟಿಂಗ್‌ ಕುರಿತು ಇತ್ತೀಚೆಗೆ ತಾವು ನೀಡಿದ್ದ ಹೇಳಿಕೆಗೆ ಬದ್ಧ ಎಂದು ಸಹ ಕಾರ್ಯಕ್ರಮವೊಂದರಲ್ಲಿ ರಿಶದ್‌ ಪ್ರೇಮ್‌ಜೀ ಹೇಳಿದ್ದರು. 

ಇದನ್ನೂ ಓದಿ: ವಿಪ್ರೋ ಸಿಇಒಗೆ .79.8 ಕೋಟಿ ಭರ್ಜರಿ ವೇತನ: ಐಟಿ ವಲಯದಲ್ಲೇ ಹೆಚ್ಚು ಸಂಬಳ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌