Latest Videos

Top Billionaires: ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ ಈಗ ಏಷ್ಯಾದ ಶ್ರೀಮಂತ ವ್ಯಕ್ತಿ!

By Suvarna NewsFirst Published Feb 4, 2022, 5:09 PM IST
Highlights

ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಲಿಸ್ಟ್
ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಗೆ ಭಾರೀ ನಷ್ಟ
ಶ್ರೀಮಂತರ ಲಿಸ್ಟ್ ನಲ್ಲಿ ಜುಕರ್ ಬರ್ಗ್ ರನ್ನು ಹಿಂದಿಕ್ಕಿದ್ದ ಅಂಬಾನಿ, ಅದಾನಿ

ಬೆಂಗಳೂರು (ಫೆ.4): ಜಾಗತಿಕ ಷೇರು ಮಾರಕಟ್ಟೆಯ (Fall Of Global Stock Market) ಕುಸಿತದಿಂದಾಗಿ ಜಗತ್ತಿನ ಬಹುತೇಕ ಕೋಟ್ಯಧಿಪತಿಗಳಿಗೆ ಕಳೆದ ಒಂದು ದಿನಗಳಿಂದ ಭಾರೀ ನಷ್ಟ ಉಂಟಾಗಿದೆ. ಅಮೆರಿಕದ ನಾಸ್ಡಾಕ್ ಕಳೆದೊಂದು ವಾರದಿಂದ ಇಳಿಕೆಯ ಹಾದಿಯಲ್ಲಿದ್ದು, ಫೇಸ್ ಬುಕ್ ಕಂಪನಿಗೆ (Facebook ) ಅಪಾರ ಕಷ್ಟವಾಗಿದೆ. ಇದರ ಪರಿಣಾಮ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ (Mark Zuckerberg) ಅವರ ಸಂಪತ್ತಿನ ಮೇಲೂ ಆಗಿದೆ. ಫೋರ್ಬ್ಸ್ ನ ರಿಯಲ್ ಟೈಮ್ ಬಿಲಿಯನೇರ್ ಲಿಸ್ಟ್ ನಲ್ಲಿ(Forbes Real Time Billionaires List) ಜುಕರ್ ಬರ್ಗ್ ದೊಡ್ಡ ಕುಸಿತ ಕಂಡಿದ್ದಾರೆ. ಭಾರತದ ಗೌತಮ್ ಅದಾನಿ ( Gautam Adani )ಹಾಗೂ ಮುಖೇಶ್ ಅಂಬಾನಿ (Mukesh Ambani), ಮಾರ್ಕ್ ಜುಕರ್ ಬರ್ಗ್ ಅವರನ್ನು ಹಿಂದೆ ಹಾಕಿದ್ದಾರೆ. ಅದಲ್ಲದೆ, ಗೌತಮ್ ಅದಾನಿ, ಮುಖೇಶ್ ಅಂಬಾನಿ ಅವರನ್ನೂ ಹಿಂದೆ ಹಾಕುವ ಮೂಲಕ ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.

ಏಷ್ಯಾದ ಶ್ರೀಮಂತರ ಲಿಸ್ಟ್ ನಲ್ಲಿ ಗೌತಮ್ ಅದಾನಿ ಈ ಹಿಂದೆಯೂ ಮುಖೇಶ್ ಅಂಬಾನಿ ಅವರನ್ನು ಹಿಂದೆ ಹಾಕುವ ಸನಿಹ ಬಂದಿದ್ದರಾದರೂ ಅದು ಸಾಧ್ಯವಾಗಿರಲಿಲ್ಲ. ಆದರೆ, ಷೇರು ಮಾರುಕಟ್ಟೆಯ ಕುಸಿತದಿಂದಾಗಿ ಅದಾನಿ ಅವರಿಗೆ ಲಾಭವಾಗಿದ್ದು, ವಿಶ್ವದ 10 ಶ್ರೀಮಂತ ವ್ಯಕ್ತಿಗಳ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದಾರೆ. ರಿಯಲ್ ಟೈಮ್ ಫೋರ್ಬ್ಸ್ ಬಿಲಿಯನೇರ್ ಲಿಸ್ಟ್ ಪ್ರಕಾರ, ಗೌತಮ್ ಅದಾನಿ ಹಾಗೂ ಅವರ ಕುಟುಂಬದ ಒಟ್ಟಾರೆ ಸಂಪತ್ತು 90.1 ಬಿಲಿಯನ್ ಯುಎಸ್ ಡಾಲರ್ ಆಗಿದ್ದರೆ, ಮುಖೇಶ್ ಅಂಬಾನಿ ಅವರ ಬಳಿ 89 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಸಂಪತ್ತಿದೆ.

ಫೆಬ್ರವರಿ 3 ರಂದು ಜುಕರ್‌ಬರ್ಗ್ 29 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಕಳೆದುಕೊಂಡರು. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಮೆಟಾದ ಷೇರುಗಳು ಶೇ. 26ರಷ್ಟು ಕುಸಿದ ಕಾರಣ, ಫೇಸ್ ಬುಕ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯವನ್ನು 85 ಶತಕೋಟಿ ಡಾಲರ್ ಗೆ ಇಳಿದಿದೆ ಎಂದು ಫೋರ್ಬ್ಸ್ ತಿಳಿಸಿದೆ.
 

It’s a remarkable rise for Gautam Adani, a college dropout who started a commodity export firm in 1988 and first appeared on Forbes’ list of the World’s Billionaires in 2016. https://t.co/b1znDtOGb5

— Forbes Asia (@ForbesAsia)


ಕಂಪನಿಯ ಷೇರುಗಳಲ್ಲಿ ಗಣನೀಯ ಪ್ರಮಾಣದ ಇಳಿಕೆಯಾದ ಕಾರಣ ಜುಕರ್ ಬರ್ಗ್ ಈಗ ವಿಶ್ವದ ಶ್ರೀಮಂತ ಬಿಲಿಯನೇರ್ ಗಳ ಪಟ್ಟಿಯಲ್ಲಿ 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಒಟ್ಟಾರೆ ಷೇರು ಕುಸಿತದಿಂದ ಒಂದೇ ದಿನದಲ್ಲಿ 200 ಬಿಲಿಯನ್ ಡಾಲರ್ ಮೌಲ್ಯವನ್ನು ಮೆಟಾ ಕಳೆದುಕೊಂಡಿದೆ. ಇದು ಒಂದೇ ದಿನದಲ್ಲಿ ಕಂಪನಿಯೊಂದರ ಗರಿಷ್ಠ ಪ್ರಮಾಣದ ಮೌಲ್ಯ ಕುಸಿತ ಎನ್ನಲಾಗಿದೆ. ಈ ಹಿಂದೆ ಫೇಸ್ ಬುಕ್ ಎಂದು ಕರೆಯಲ್ಪಡುವ ಟೆಕ್ ದಿಗ್ಗಜ ಕಂಪನಿಯ ಶೇ. 12.8ರಷ್ಟು ಷೇರುಗಳನ್ನು ಜುಕರ್ ಬರ್ ಜುಕರ್‌ಬರ್ಗ್ ಅವರು ಹಿಂದೆ ಫೇಸ್‌ಬುಕ್ ಎಂದು ಕರೆಯಲ್ಪಡುವ ಟೆಕ್ ದೈತ್ಯ ಕಂಪನಿಯ ಸುಮಾರು 12.8 ಪ್ರತಿಶತವನ್ನು ಹೊಂದಿದ್ದಾರೆ.

Mukesh Ambaniಗೆ ಬಿಗ್ ಶಾಕ್, ಗೌತಮ್ ಅದಾನಿ ಈಗ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ!
ಕಳೆದ 24 ಗಂಟೆಯಲ್ಲಿ ಅದಾನಿ ಅವರ ಸಂಪತ್ತಿನಲ್ಲಿ 672 ಮಿಲಿಯನ್ ಡಾಲರ್ ಕುಸಿತವಾಗಿದ್ದರೆ ದೀರ್ಘ ಕಾಲ ಏಷ್ಯಾದ ಹಾಗೂ ಭಾರತದ ಶ್ರೀಮಂತ ವ್ಯಕ್ತಿ ಎನಿಸಿಕೊಂಡ ಮುಖೇಶ್ ಅಂಬಾನಿ ಒಂದೇ ದಿನದಲ್ಲಿ 2.2 ಶತಕೋಟಿ ಡಾಲರ್ ಮೊತ್ತದ ಕುಸಿತ ಕಂಡಿದ್ದಾರೆ. ಇದರಿಂದಾಗಿ ಅವರ ಒಟ್ಟಾರೆ ಮೌಲ್ಯ 89 ಬಿಲಿಯನ್ ಡಾಲರ್ ಗೆ ಕುಸಿಯುವ ಮೂಲಕ ವಿಶ್ವದದ 11ನೇ ಶ್ರೀಮಂತ ವ್ಯಕ್ತಿ ಹಾಗೂ ಏಷ್ಯಾ ಮತ್ತು ಭಾರತದ 2ನೇ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.

ಅಜೀಂ ಪ್ರೇಮ್‌ಜಿ ನಂ.1 ದಾನಿ, 2021ರಲ್ಲಿ 9,713 ಕೋಟಿ ದಾನ: ಅದಾನಿಗೆ 8ನೇ ಸ್ಥಾನ!
ನಷ್ಟದ ನಡುವೆಯೂ ಅಗ್ರಸ್ಥಾನದಲ್ಲಿರುವ ಮಸ್ಕ್: ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಒಂದೇ ದಿನದಲ್ಲಿ 3.3 ಬಿಲಿಯನ್ ಡಾಲರ್ ಮೊತ್ತದ ಕುಸಿತ ಕಂಡಿದ್ದರೂ, 232.3 ಬಿಲಿಯನ್ ಆಸ್ತಿಯೊಂದಿಗೆ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಮೆಜಾನ್ ಕಂಪನಿಯ ಜೆಫ್ ಬೆಜೋಸ್ ಕೂಡ ದೊಡ್ಡ ಕುಸಿತ ಎದುರಿಸಿದ್ದು, 11.8 ಬಿಲಿಯನ್ ನಷ್ಟದೊಂದಿಗೆ 164.8 ಬಿಲಿಯನ್ ಆದಾಯದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಬೆಜೋಸ್ ಅವರ ನಷ್ಟ ಬೆರ್ನಾಲ್ಟ್ ಅರ್ನಾಲ್ಟ್ ಕುಟುಂಬಕ್ಕೆ ಲಾಭವಾಗಿ ಪರಿಣಮಿಸಿದೆ. 193.6 ಬಿಲಿಯನ್ ಡಾಲರ್ ನೊಂದಿಗೆ ಅವರು 2ನೇ ಸ್ಥಾನಕ್ಕೇರಿದ್ದಾರೆ.

click me!