Direct Tax: 12.50 ಲಕ್ಷ ಕೋಟಿ ದಾಖಲೆಯ ನೇರ ತೆರಿಗೆ ನಿರೀಕ್ಷೆ..ಬೊಕ್ಕಸ ತುಂಬಲಿದೆ!

Published : Feb 04, 2022, 02:49 AM IST
Direct Tax: 12.50 ಲಕ್ಷ ಕೋಟಿ ದಾಖಲೆಯ ನೇರ ತೆರಿಗೆ ನಿರೀಕ್ಷೆ..ಬೊಕ್ಕಸ ತುಂಬಲಿದೆ!

ಸಾರಾಂಶ

* ಈ  ವರ್ಷ ದಾಖಲೆ 12.50 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹ ನಿರೀಕ್ಷೆ * ಕಳೆದ ಜನವರಿಯಲ್ಲಿ ದಾಖಲೆ ಪ್ರಮಾಣದ ಜಿಎಸ್‌ಟಿ ಸಂಗ್ರಹ * ಹಣಕಾಸು ವರ್ಷ ಮುಕ್ತಾಯವಾಗಲು ಇನ್ನು ಎರಡು ತಿಂಗಳು ಬಾಕಿ * ಕೇಂದ್ರ ದ ಬೂಸ್ಟರ್ ಬಜೆಟ್ ಮಂಡನೆಯಾಗಿತ್ತು

ನವದೆಹಲಿ(ಫೆ. 04)  ನೇರ ತೆರಿಗೆ (Direct Tax) ಸಂಗ್ರಹವು 12.50 ಲಕ್ಷ ಕೋಟಿ ರು ಪರಿಷ್ಕೃತ ಗುರಿಯನ್ನು ದಾಟಲಿದ್ದು, ಹಣಕಾಸು ವರ್ಷದ ಕೊನೆಯಲ್ಲಿ ಸಾರ್ವಕಾಲಿಕ ಗರಿಷ್ಠ ಸಂಗ್ರಹಣೆಯ ಮೂಲಕ ಐತಿಹಾಸಿಕ ದಾಖಲೆಯನ್ನು(Record) ಸ್ಥಾಪಿಸುವ ನಿರೀಕ್ಷೆಯಿದೆ ಎಂದು ಸಿಬಿಡಿಟಿ (CBDT) ಮುಖ್ಯಸ್ಥ ಜೆ.ಬಿ. ಮಹೋಪಾತ್ರ ಹೇಳಿದ್ದಾರೆ. ಕಳೆದ ಜನವರಿಯಲ್ಲಿ ದಾಖಲೆ ಪ್ರಮಾಣದ ಜಿಎಸ್‌ಟಿ (GST) ಸಂಗ್ರಹದ ಸುದ್ದಿ ಬೆನ್ನಲ್ಲೇ ನೇರ ತೆರಿಗೆಯಲ್ಲೂ ಭಾರೀ ಏರಿಕೆಯ ಸುಳಿವು ಹೊರಬಿದ್ದಿದೆ.

ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಕಾರ್ಪೊರೇಟ್‌ ತೆರಿಗೆ ಹಾಗೂ ವೈಯಕ್ತಿಕ ಆದಾಯ ತೆರಿಗೆಗಳ ಮೂಲದಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ. ಫೆ.1 ರಂದು 10.38 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸಲಾಗಿದ್ದು, ಕೇಂದ್ರದ ಬಜೆಟ್‌ ಅಂದಾಜಿಗಿಂತ ಕೇವಲ 70,000 ಕೋಟಿ ಕಡಿಮೆಯಿದೆ. ಈವರೆಗೆ ನೇರ ತೆರಿಗೆ ಸಂಗ್ರಹಣೆ 11.18 ಲಕ್ಷ ಕೋಟಿ ದಾಟಿಲ್ಲ. ಆದರೆ ಹಣಕಾಸು ವರ್ಷ ಮುಕ್ತಾಯವಾಗಲು ಇನ್ನೆರಡು ತಿಂಗಳು ಬಾಕಿ ಇರುವುದರಿಂದ ಈ ಬಾರಿ 12.50 ಲಕ್ಷ ಕೋಟಿ ಸಂಗ್ರಹಣೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ.

Digital Currency ಕ್ರಿಪ್ಟೋಗೆ ತೆರಿಗೆ ಹಾಕಿದ ಮಾತ್ರಕ್ಕೆ ಕಾನೂನಿನ ಮಾನ್ಯತೆ ನೀಡಿದಂತಲ್ಲ, CBDT ಸ್ಪಷ್ಟನೆ!

ಬದಲಾಗದ ಆದಾಯ ತೆರಿಗೆ ಸ್ಲ್ಯಾಬ್:  ಕೇಂದ್ರದ ಬಜೆಟ್ (Union Budget 2022) ಮಂಡನೆಯಾಗಿದ್ದು ಆದಾಯ ತೆರಿಗೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು.  2022ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿಗೆ ಸಂಬಂಧಿಸಿದ ಆದಾಯ ತೆರಿಗೆ ಸ್ಲ್ಯಾಬ್  ಹಾಗೂ ಆದಾಯ ತೆರಿಗೆ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.

2022-23ನೇ ಸಾಲಿನಲ್ಲಿ ವೈಯಕ್ತಿಕ ಮೂಲ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸಬಹುದೆಂಬ ನಿರೀಕ್ಷೆಯಿತ್ತು. ಮೂಲ ತೆರಿಗೆ ವಿನಾಯ್ತಿ ಮಿತಿಯನ್ನು 2014 ರಲ್ಲಿ ಕೊನೆಯದಾಗಿ ಬದಲಾಯಿಸಲಾಗಿತ್ತು. ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೂಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷಕ್ಕೆ ಏರಿಸಿದ್ದರು. ಹಿರಿಯ ನಾಗರಿಕರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ 60ರಿಂದ 80 ವರ್ಷದವರಿಗೆ 3 ಲಕ್ಷ ರೂಪಾಯಿ, 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂಪಾಯಿಯನ್ನು ತೆರಿಗೆ ವಿನಾಯಿತಿ ಮಿತಿಯಾಗಿ ನಿಗದಿಪಡಿಸಲಾಗಿತ್ತು. ಆದ್ರೆ 2014ರ ಬಳಿಕ  ಮೂಲ ತೆರಿಗೆ ವಿನಾಯಿತಿ ಮಿತಿಯಲ್ಲಿ ಬದಲಾವಣೆ ಆಗಿಲ್ಲ.

ಬಜೆಟ್‌ ವಿಶೇ​ಷತೆ ಸಾರಲು ಬಿಜೆ​ಪಿ​ಯಿಂದ ಅಭಿ​ಯಾ​ನ: ಕೇಂದ್ರದ ಬಜೆಟ್‌ನ ವಿಶೇ​ಷ​ತೆ​ಗಳ ಬಗ್ಗೆ ದೇಶಾ​ದ್ಯಂತ ಜನ​ರಲ್ಲಿ ಅರಿವು ಮೂಡಿ​ಸುವ ನಿಟ್ಟಿನಲ್ಲಿ ನಾಳೆ​ಯಿಂದ 4 ದಿನ​ಗಳ ಕಾಲ ವಿಶೇಷ ಅಭಿ​ಯಾನ ಹಮ್ಮಿ​ಕೊ​ಳ್ಳಲು ಬಿಜೆಪಿ ನಿರ್ಧ​ರಿ​ಸಿದೆ. ಈ ಮಹ​ತ್ವದ ಕಾರ್ಯ​ಕ್ಕಾಗಿ ಪಕ್ಷದ ಸಂಸ​ದರು, ಸಿಬ್ಬಂದಿ ಹಾಗೂ ಪಕ್ಷದ ಇತರೆ ನಾಯ​ಕ​ರನ್ನು ಸದು​ಪ​ಯೋ​ಗ​ಪ​ಡಿ​ಸಿ​ಕೊ​ಳ್ಳಲು ಬಿಜೆಪಿ ತೀರ್ಮಾ​ನಿ​ಸಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾ​ರಾ​ಮನ್‌ ಅವರು ಮಂಡನೆ ಮಾಡಿದ ಬಜೆಟ್‌ ಬಗ್ಗೆ ಪ್ರಧಾ​ನಿ ನರೇಂದ್ರ ಮೋದಿ ಅವರು ಬುಧ​ವಾರ ವಿಡಿಯೋ ಕಾನ್ಫ​ರೆನ್ಸ್‌ ಮೂಳಕ ಪಕ್ಷದ ಮುಖಂಡ​ರಿಗೆ ತಿಳಿ​ಸಿ​ದ್ದರು. ಇದರ ಬೆನ್ನಲ್ಲೇ, ಪಕ್ಷದ ಸಂಸ​ದರು ತಾವು ಪ್ರತಿ​ನಿ​ಧಿ​ಸುವ ಕ್ಷೇತ್ರ​ಗಳ ವ್ಯಾಪ್ತಿ​ಯಲ್ಲಿ ಫೆ.5, 6, 12 ಮತ್ತು 13ರಂದು ಸುದ್ದಿ​ಗೋಷ್ಠಿ ಏರ್ಪ​ಡಿಸಿ ಬಜೆಟ್‌ನಲ್ಲಿ​ರುವ ಉತ್ತಮ ಅಂಶ​ಗ​ಳನ್ನು ತಿಳಿ​ಸ​ಬೇಕು. ಅಲ್ಲದೆ ರಾಜ್ಯ ಬಿಜೆಪಿ ಘಟ​ಕ​ಗಳು ಕಾರ್ಯ​ಕ್ರ​ಮ​ಗ​ಳನ್ನು ಏರ್ಪ​ಡಿಸಿ, ಜನ​ರಿಗೆ ಬಜೆಟ್‌ನ ಅಂಶ​ಗ​ಳನ್ನು ತಿಳಿ​ಸ​ಬೇಕು ಎಂದು ನಿರ್ದೇ​ಶಿ​ಸ​ಲಾ​ಗಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!