ಇನ್ನು ವಾರಕ್ಕೆ 5 ದಿನ ಮಾತ್ರ ಬ್ಯಾಂಕ್‌ ಸೇವೆ ವರದಿ ಸುಳ್ಳು: ಆರ್‌ಬಿಐ

Published : Apr 21, 2019, 08:01 AM IST
ಇನ್ನು ವಾರಕ್ಕೆ 5 ದಿನ ಮಾತ್ರ ಬ್ಯಾಂಕ್‌ ಸೇವೆ ವರದಿ ಸುಳ್ಳು: ಆರ್‌ಬಿಐ

ಸಾರಾಂಶ

ಇನ್ನು ವಾರಕ್ಕೆ 5 ದಿನ ಮಾತ್ರ ಬ್ಯಾಂಕ್‌ ಸೇವೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬಂದಿತ್ತು. ಆದರೀಗ ಈ ಕುರಿತಾಗಿ ಸ್ಪಷ್ಟನೆ ನಿಡಿರುವ RBI ಇದು ಸುಳ್ಳು ಎಂದಿದೆ. 

ಮುಂಬೈ[ಏ.21]: ದೇಶದಲ್ಲಿರುವ ವಾಣಿಜ್ಯ ವ್ಯವಹಾರದ ಬ್ಯಾಂಕ್‌ಗಳು ವಾರಕ್ಕೆ 5 ದಿನ ಕೆಲಸ ಮಾಡಬೇಕೆಂಬ ನಿರ್ದೇಶನ ನೀಡಿಲ್ಲ ಎಂದು ಭಾರತೀಯ ರಿಜರ್ವ್ ಬ್ಯಾಂಕ್‌ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಆರ್‌ಬಿಐ, ‘ ವಾಣಿಜ್ಯ ಬ್ಯಾಂಕ್‌ಗಳು ವಾರಕ್ಕೆ 5 ದಿನ ಮಾತ್ರವೇ ಕೆಲಸ ನಿರ್ವಹಿಸಬೇಕು ಎಂಬುದಾಗಿ ಆರ್‌ಬಿಐ ಸೂಚನೆ ನೀಡಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇದು ವಾಸ್ತವ ಸಂಗತಿಯಲ್ಲ,’ ಎಂದು ಹೇಳಿದೆ.

ಇಂಥ ಯಾವುದೇ ನಿರ್ದೇಶನಗಳನ್ನು ತಾನು ನೀಡಿಲ್ಲ ಎಂದಿದೆ ಆರ್‌ಬಿಐ. ಭಾನುವಾರ ರಜೆ ಹೊರತುಪಡಿಸಿ ಬ್ಯಾಂಕ್‌ಗಳಿಗೆ ತಿಂಗಳ 2ನೇ ಮತ್ತು 4ನೇ ಶನಿವಾರ ರಜೆ ಇರುತ್ತದೆ. ಇತರೆ ಶನಿವಾರಗಳಂದು ಬ್ಯಾಂಕ್‌ಗಳು ದಿನಪೂರ್ತಿ ಕೆಲಸ ಮಾಡುತ್ತಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!
ರುಪಾಯಿ ಮೌಲ್ಯ ಕುಸಿತದ ಎಫೆಕ್ಟ್‌: ಹೊಸ ವರ್ಷಕ್ಕೆ ದೇಶವಾಸಿಗಳಿಗೆ ಸಿಗಲಿದೆ ಶಾಕ್!