ಭಾರತದ ಆರ್ಥಿಕತೆ: ಮೋದಿ ‘ಕತೆ’ ಬಿಚ್ಚಿಟ್ಟ ಐಎಂಎಫ್!

By Web DeskFirst Published Aug 9, 2018, 10:48 AM IST
Highlights

ಭಾರತದ್ದು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ! ಅಂತರಾಷ್ಟ್ರೀಯ ಹಣಕಾಸು ನಿಧಿ ವರದಿ! ಸರ್ಕಾರದ ಸುಧಾರಣಾ ಕ್ರಮಗಳಿಗೆ ಮೆಚ್ಚುಗೆ! ಜಿಡಿಪಿ ದರ ಏರಿಕೆಯ ನಿರೀಕ್ಷೆಯಲ್ಲಿ ಐಎಂಎಫ್! ತೈಲ ಬೆಲೆ ಏರಿಕೆ ಕುರಿತು ಎಚ್ಚರಿಸಿದ ವರದಿ
 

ನವದೆಹಲಿ(ಆ.9): ಭಾರತ ಈಗಲೂ ಜಗತಿನಲ್ಲೇ ಅತಿ ವೇಗಗತಿಯ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ. 

ಭಾರತದ ಆರ್ಥಿಕತೆ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿರುವ ಐಎಂಎಫ್, ಸರ್ಕಾರದ ಸುಧಾರಣಾ ಕ್ರಮಗಳಿಂದಾಗಿ ಭಾರತ ಈಗಲೂ ಜಗತ್ತಿನಲ್ಲೇ ವೇಗಗತಿಯ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ಹೇಳಿದೆ. 

2018-19 ನೇ ಸಾಲಿನಲ್ಲಿ ಭಾರತದ ಜಿಡಿಪಿಯನ್ನು ಶೇ.7.3 ರಿಂದ ಶೇ. 7.5 ರಷ್ಟಕ್ಕೆ ಏರಲಿದೆ ಎಂದು ಐಎಂಎಫ್ ಅಂದಾಜಿಸಿದೆ. ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಆದರೆ ಏರುತ್ತಿರುವ ತೈಲ ಬೆಲೆ, ರೂಪಾಯಿ ಮೌಲ್ಯದ ಕುಸಿತದ ಬಗ್ಗೆ ಐಎಂಎಫ್ ಎಚ್ಚರಿಕೆ ನೀಡಿದೆ. 

ಇನ್ನು 2019 ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಐಎಂಎಫ್ ನ ಈ ವರದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ವರದಾನವಾಗಲಿದೆ ಎಂದು ಅಂದಾಜಿಸಲಾಗಿದೆ. 

click me!