ಆರ್‌ಬಿಐ ಕೇಂದ್ರೀಯ ಸಮಿತಿ ನಿರ್ದೇಶಕ ಸ್ಥಾನಕ್ಕೆ ಇಬ್ಬರ ನೇಮಕ

Published : Aug 08, 2018, 01:34 PM IST
ಆರ್‌ಬಿಐ ಕೇಂದ್ರೀಯ ಸಮಿತಿ ನಿರ್ದೇಶಕ ಸ್ಥಾನಕ್ಕೆ ಇಬ್ಬರ ನೇಮಕ

ಸಾರಾಂಶ

ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಮಂಡಳಿ! ಅರೆಕಾಲಿಕ ನಿರ್ದೇಶಕರ ಸ್ಥಾನಕ್ಕೆ ನೇಮಕಾತಿ! ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ! ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ 

ನವದೆಹಲಿ(ಆ.8): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಮಂಡಳಿ ಅರೆಕಾಲಿಕ ನಿರ್ದೇಶಕರಾಗಿ ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ ನೇಮಕಗೊಂಡಿದ್ದಾರೆ.

ಆರ್‌ಬಿಐ ಕೇಂದ್ರೀಯ ಮಂಡಳಿ ಅರೆಕಾಲಿಕ ನಿರ್ದೇಶಕರಾಗಿ ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ ನೇಮಕಕ್ಕೆ ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

ಗುರುಮೂರ್ತಿ ತಮಿಳು ನಿಯತಕಾಲಿಕೆ ‘ತುಘಲಕ್’ ನ ಸಂಪಾದಕರು ಮಾತ್ರವಲ್ಲದೆ ಚಾರ್ಟರ್ಡ್ ಅಕೌಂಟೆಂಟ್, ಹಾಗೂ ಆರ್ಥಿಕ ಮತ್ತು ರಾಜಕೀಯ ಅಂಕಣಕಾರರೂ ಆಗಿದ್ದಾರೆ. ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ ಈ ನೇಮಕಾತಿಗಳ ಪ್ರಸ್ತಾವನೆ ಬಂದಿತ್ತು. ಈ ಪ್ರಸ್ತಾವನೆಗೆ ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

15 ಸದಸ್ಯರನ್ನು ಒಳಗೊಂಡಿರುವ  ಕೇಂದ್ರ ಬ್ಯಾಂಕ್ ನ ಉನ್ನತ ನಿರ್ದೇಶಕರ ಸಮಿತಿಗೆ ಇದೀಗ ಇಬ್ಬರು ಹೊಸ ನಿರ್ದೇಶಕರು ನೇಮಕವಾಗಿದ್ದು, ಒಟ್ಟು ನಾಲ್ಕು ವರ್ಷಗಳ ಕಾಲ ಇಬ್ಬರೂ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ