ಸ್ಮಾರ್ಟ್ ಫೋನ್ ಬದಲಿಸೋ ಖಯಾಲಿ ನಿಮ್ಮದು: ಲಾಭ ಚೀನಾದ್ದು!

By Web DeskFirst Published Aug 8, 2018, 3:55 PM IST
Highlights

ನಿಮಗೂ ಸ್ಮಾರ್ಟ್ ಫೋನ್ ಬದಲಿಸೋ ಖಯಾಲಿನಾ?! ಶೇ. 70 ರಷ್ಟು ಭಾರತೀಯರು ಮೊಬೈಲ್ ಬದಲಾಯಿಸ್ತಾರೆ! ಬೆಚ್ಚಿ ಬೀಳಿಸಿದ ಸಿಎಂಆರ್ ಸಂಸ್ಥೆ ವರದಿ! ಚೀನಾ ಮೊಬೈಲ್ ಸಂಸ್ಥೆಗಳಿಗೆ ಹೆಚ್ಚಿನ ಲಾಭ 

ನವದೆಹಲಿ(ಆ.8): ನೂತನ ಸರ್ವೆಯೊಂದರ ಪ್ರಕಾರ ಈ ವರ್ಷದ ದ್ವೈಮಾಸಿಕ ಅವಧಿಯಲ್ಲಿ ಶೇ. ೭೦ ರಷ್ಟು ಭಾರತೀಯರು ತಮ್ಮ ಸ್ಮಾರ್ಟ್ ಫೋನ್ ಬದಲಿಸಿದ್ದಾರೆ. ಸೈಬರ್ ಮಿಡಿಯಾ ರಿಸರ್ಚ್ ಸಂಸ್ಥೆ ಸಂಶೋಧನೆ  ಪ್ರಕಾರ, ಶೇ. 70 ರಷ್ಟು ಭಾರತೀಯರು ತಮ್ಮ ಹಳೆಯ ಸ್ಮಾರ್ಟ್ ಫೋನ್ ಬದಲಿಸಿ ಹೊಸ ಸ್ಮಾರ್ಟ್ ಫೋನ್ ಕೊಂಡಿದ್ದಾರೆ.

ಇನ್ನು ಈ ಸ್ಮಾರ್ಟ್ ಫೋನ್ ಬದಲಿಸುವಿಕೆಯಲ್ಲಿ ಚೀನಿ ಮೊಬೈಲ್ ಸಂಸ್ಥೆಗಳು ಸಿಂಹಪಾನ್ನು ಪಡೆದುಕೊಂಡಿವೆ. ಶಿಯೋಮಿ, ವಿವೋ, ಒಪ್ಪೊ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ.

      
ಸೈಬರ್ ಮಿಡಿಯಾ ರಿಸರ್ಚ್ ಪಟ್ಟಿ ಗಮನಿಸುವುದಾದರೆ:

ಶಿಯೋಮಿ- ಶೇ.37
ಒಪ್ಪೊ- ಶೇ.16.3
ಐಟೆಲ್- ಶೇ.6.7
ಹಾನರ್- ಶೇ.4.5
ಮೈಕ್ರೋಮ್ಯಾಕ್ಸ್- ಶೇ.41.2 
ಇಂಟೆಕ್ಸ್- ಶೇ.11.6 
ಹೆಚ್ ಟಿಸಿ- ಶೇ.5.5
ಕಾರ್ಬನ್- ಶೇ.5.3
ಜಿಯೋನಿ- ಶೇ.4.7

ಹೀಗೆ ಬಹುತೇಕ ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪನಿಗಳೇ ಸಿಂಹಪಾನ್ನು ಹೊಂದಿವೆ. ಈ ಕುರಿತು ಮಾಹಿತಿ ನೀಡಿರುವ ಸಿಎಂಆರ್ ಸಂಸ್ಥೆಯ ಮ್ಯಾನೇಜರ್ ಕನಿಕಾ ಜೈನ್, ಭಾರತೀಯ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ಗ್ರಾಹಕರನ್ನು ತಲುಪಲು ಮತ್ತಷ್ಟು ಶ್ರಮವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ವರ್ಷ ಸುಮಾರು 200 ಮಿಲಿಯನ್ ಭಾರತೀಯರು ಸ್ಮಾರ್ಟ್ ಫೋನ್ ಬದಲಾಯಿಸುವಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಶೇ. 60 ಕ್ಕೂ ಹೆಚ್ಚು ಮೊಬೈಲ್ ಉತ್ಪಾದನೆ ಇದರ ಮೇಲೆ ಅವಲಂಬಿತವಾಗಿದೆ ಎಂದು ಸಿಎಂಆರ್ ತನ್ನ ವರದಿಯಲ್ಲಿ ತಿಳಿಸಿದೆ.

click me!