
ನವದೆಹಲಿ(ನ.01): ಭಾರತದ ಉತ್ಪಾದನಾ ಬೆಳವಣಿಗೆ ಕಳೆದ 2 ವರ್ಷಗಳಲ್ಲೇ ಅತ್ಯಂತ ಕಳಪೆಯಾಗಿದ್ದು, ಸರ್ಕಾರ ಈ ಕ್ಷೇತ್ರದತ್ತ ತುರ್ತು ಗಮನಹರಿಸುವ ಅವಶ್ಯಕತೆ ಇದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.
ಅನ್ಕೊಂಡಿದ್ದೆಲ್ಲಾ ಉಲ್ಟಾ ಆಯ್ತು: ಮೋದಿ ಪ್ಲ್ಯಾನ್ ಚೇಂಜ್ ಮಾಡ್ಬೇಕಾಯ್ತು!
ಕಾರ್ಖಾನೆಗಳ ಉತ್ಪಾದನಾ ದರ ಕ್ಷೀಣಿಸಿದ್ದು, 2 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ ಬೆಳವಣಿಗೆ ದಾಖಲಿಸಿದೆ ಎಂದು ಐಹೆಚ್ಎಸ್ ಇಂಡಿಯಾ ಮ್ಯಾನಿಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ ಇಂಡೆಕ್ಸ್ (ಪಿಎಂಐ) ಸಮೀಕ್ಷೆ ಹೇಳಿದೆ.
ನಿರೀಕ್ಷೆಗಿಂತ ಹೆಚ್ಚು ಮಂದಗತಿಯಲ್ಲಿ ಭಾರತದ ಆರ್ಥಿಕಾಭಿವೃದ್ಧಿ, ಆದರೆ ಚೀನಾಕ್ಕಿಂತ ಭಾರತವೇ ಮುಂದೆ!
ಅಕ್ಟೋಬರ್ ತಿಂಗಳಲ್ಲಿ ಪಿಎಂಐ 50.6 ನಷ್ಟು ದಾಖಲಾಗಿದ್ದು, ಸೆಪ್ಟೆಂಬರ್ ನಲ್ಲಿ 51.4 ರಷ್ಟಿತ್ತು. 50 ಕ್ಕಿಂತ ಹೆಚ್ಚಿದ್ದರೆ ಉತ್ತಮ ಹಾಗೂ 50 ಕ್ಕಿಂತ ಕಡಿಮೆ ಇದ್ದರೆ ಪಿಎಂಐ ಸೂಚ್ಯಂಕ ಕುಗ್ಗಿರುವ ಸೂಚನೆಯಾಗಿದೆ.
ಯಾಕೋ ಸರಿ ಹೋಗ್ತಿಲ್ಲ: ಮೋದಿ ಹೊಗಳ್ತಿದ್ದ IMFಗೆ ಏನೋ ಸೇರ್ತಿಲ್ಲ!
ಉತ್ಪಾದನಾ ಕ್ಷೇತ್ರ ಅಕ್ಟೋಬರ್‌ನಲ್ಲಿಯೂ ಕುಗ್ಗಿದ್ದು ಪರಿಣಾಮವಾಗಿ ಉದ್ಯೋಗ ಸೃಷ್ಟಿಯೂ 6 ತಿಂಗಳಲ್ಲೇ ಅತ್ಯಂತ ಕಡಿಮೆ ದಾಖಲಾಗಿದೆ ಎಂದು ಐಹೆಚ್ಎಸ್ ಮಾರ್ಕೆಟ್ ಸಮೀಕ್ಷೆ ತಿಳಿಸಿದೆ.
ಕಾಣದಾಗಿದೆ ಪರಿಹಾರ: ಗುರಿ ಕಡಿತಗೊಳಿಸಿದ ಮೋದಿ ಸರ್ಕಾರ!
ನವೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.