ಎಟಿಎಂ, ಕ್ರೆಡಿಟ್‌ ಕಾರ್ಡ್‌ಗಳ ದತ್ತಾಂಶ ಕಳವು : ಬ್ಯಾಂಕ್‌ಗಳಿಗೆ ಎಚ್ಚರಿಕೆ

By Kannadaprabha NewsFirst Published Nov 1, 2019, 9:41 AM IST
Highlights

ಜಾಗತಿಕ ಮಟ್ಟದಲ್ಲಿ ಸುಮಾರು 13 ಲಕ್ಷ ಜನರ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳ ದತ್ತಾಂಶವನ್ನು ಹ್ಯಾಕರ್‌ಗಳು ಕಳವು ಮಾಡಿದ್ದು, ಅವನ್ನು ಕಾಳದಂಧೆಕೋರರ ಮಾರಾಟ ತಾಣವಾದ ‘ಜೋಕರ್ಸ್‌ ಸ್ಟ್ಯಾಷ್‌’ನಲ್ಲಿ ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನವದೆಹಲಿ [ನ.01]: ಎಟಿಎಂ ಡೆಬಿಟ್‌ ಕಾರ್ಡ್‌ಗಳು ಹಾಗೂ ಕ್ರೆಡಿಟ್‌ ಕಾರ್ಡ್‌ಗಳ ದತ್ತಾಂಶ ಕಳವು ಹೆಚ್ಚುತ್ತಿದ ಎಂಬ ಆರೋಪಗಳ ಬೆನ್ನಲ್ಲೇ, ಜಾಗತಿಕ ಮಟ್ಟದಲ್ಲಿ ಸುಮಾರು 13 ಲಕ್ಷ ಜನರ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳ ದತ್ತಾಂಶವನ್ನು ಹ್ಯಾಕರ್‌ಗಳು ಕಳವು ಮಾಡಿದ್ದು, ಅವನ್ನು ಕಾಳದಂಧೆಕೋರರ ಮಾರಾಟ ತಾಣವಾದ ‘ಜೋಕರ್ಸ್‌ ಸ್ಟ್ಯಾಷ್‌’ನಲ್ಲಿ ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಶೇ.98ರಷ್ಟುಪಾಲು ಭಾರತದ್ದೇ ಎಂದು ತಿಳಿದುಬಂದಿದೆ.

ಸಿಂಗಾಪುರ ಮೂಲದ ‘ಗ್ರೂಪ್‌-ಐಬಿ’ ಎಂಬ ಕಂಪನಿಯು ಇಂಥ ಸೈಬರ್‌ ದಾಳಿಕೋರರ ವಹಿವಾಟು ಹಾಗೂ ಕಾರ್ಯಚಟುವಟಿಕೆಗಳನ್ನು ಪತ್ತೆ ಮಾಡುವ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ತಜ್ಞರು ಈ ಚಟುವಟಿಕೆಗಳನ್ನು ಬಯಲಿಗೆಳೆದಿದ್ದಾರೆ. ಬಳಿಕ ಐಬಿ ಕಂಪನಿಯು ಭಾರತದ ಬ್ಯಾಂಕ್‌ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಗ್ರಾಹಕರು ಎಟಿಎಂ ಕಾರ್ಡ್‌ಗಳನ್ನು ಎಟಿಎಂ ಮಶಿನ್‌ಗಳಲ್ಲಿ ಅಥವಾ ಸ್ವೈಪಿಂಗ್‌ ಮಶಿನ್‌ಗಳಲ್ಲಿ ಉಜ್ಜಿದಾಗ ಅವುಗಳ ದತ್ತಾಂಶಗಳನ್ನು ಸೈಬರ್‌ ಕಳ್ಳರು ದೋಚಿರುವ ಸಾಧ್ಯತೆ ಇದೆ. ಈ ರೀತಿ 13 ಲಕ್ಷ ಡೆಬಿಟ್‌ ಕಾರ್ಡು ಹಾಗೂ ಕ್ರೆಡಿಟ್‌ ಕಾರ್ಡುಗಳ ದತ್ತಾಂಶವನ್ನು ಕಳವು ಮಾಡಲಾಗಿದೆ.

ನ.01ರವೆರೆಗೆ ಕಾಯಿರಿ: ಎಸ್‌ಬಿಐ ಕೊಡುವ ಕಹಿ ಸುದ್ದಿ ಏನೆಂದು ನೋಡಿರಿ!...

ಈ ರೀತಿ ದತ್ತಾಂಶ ಕಳವು ಮಾಡುವ ಹ್ಯಾಕರ್‌ಗಳು, ಅವನ್ನು ‘ಜೋಕರ್ಸ್‌ ಸ್ಟ್ಯಾಷ್‌’ ಎಂಬ ತಮ್ಮದೇ ಆದ ರಹಸ್ಯ ಕಾಳದಂಧೆಕೋರರ ತಾಣದಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಪ್ರತಿ 1 ಕಾರ್ಡಿನ ದತ್ತಾಂಶವನ್ನು ಸುಮಾರು 7 ಸಾವಿರ ರು.ನಂತೆ ಇವರು ಮಾರಾಟ ಮಾಡುತ್ತಾರೆ. ಅಂದರೆ ಒಟ್ಟಾರೆ ಮಾರಾಟಕ್ಕಿರುವ ಕಾರ್ಡುಗಳ ದತ್ತಾಂಶದ ಮೌಲ್ಯ 935 ಕೋಟಿ ರು. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ರೀತಿ ಕಾರ್ಡ್‌ಗಳ ದತ್ತಾಂಶವನ್ನು ಪಡೆದವರು ಅಕ್ರಮವಾಗಿ ಅವುಗಳನ್ನು ಬಳಸಿಕೊಂಡು, ಅದರಲ್ಲಿನ ಹಣವನ್ನು ಲಪಟಾಯಿಸುತ್ತಾರೆ.

ಆದರೆ ಯಾವ ಯಾವ ಬ್ಯಾಂಕಿನ ದತ್ತಾಂಶ ಕಳವಾಗಿವೆ ಎಂಬುದನ್ನು ಐಬಿ ಬಹಿರಂಗಪಡಿಸಿಲ್ಲ. ಒಂದೇ ಬ್ಯಾಂಕಿನ ಶೇ.18ರಷ್ಟುಕಾರ್ಡುಗಳ ದತ್ತಾಂಶ ಕಳವಾಗಿದೆ ಎಂದಷ್ಟೇ ಹೇಳಿದೆ

click me!