ನವದೆಹಲಿ(ಏ.15): ಕೊರೋನಾ ವೈರಸ್ ಹರಡುತ್ತಿರುವ ಕಾರಣ ಭಾರತದ ಲಾಕ್‌ಡೌನ್ ವಿಸ್ತರಣೆಯಾಗಿದೆ. ಇದೀಗ ಮೇ.3ರ ವರೆಗೆ ಲಾಕ್‌ಡೌನ್ ಮುಂದುವರಿಯಲಿದೆ. ಇತ್ತ ನೌಕರರು, ದಿನಗೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಸೇರಿದಂತೆ ಲಕ್ಷ ಲಕ್ಷ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬಡವರಿಗೆ ಕೇಂದ್ರ ಸರ್ಕಾರ ನೆರವಾಗಲು ಕೆಲ ಯೋಜನೆ ಘೋಷಿಸಿದೆ. ಇದರ ಜೊತೆಗೆ ಬಡ ಹಾಗೂ ಮದ್ಯಮ ವರ್ಗದ ಜನರಿಗೂ ಮಹತ್ವದ ಯೋಜನೆ ಘೋಷಣೆ ಮಾಡಿದೆ. ಈ ಯೋಜನೆ ಮೂಲಕ ಮುಂದಿನ 3 ತಿಂಗಳ ವೇತನದಿಂದ ಪಿಎಫ್ ಹಣ ಕಡಿತವಾಗಲ್ಲ. ಈ ಹಣವನ್ನು ಸರ್ಕಾರವೇ PF ನಿಧಿಗೆ ತುಂಬಲಿದೆ.
1.3 ಲಕ್ಷ ಜನರಿಂದ ಪಿಎಫ್ ಖಾತೆ ಹಣ ಹಿಂತೆಗೆತ!
ಇಷ್ಟು ದಿನ ಕಡಿತಗೊಳ್ಳುತ್ತಿದ್ದ ಪಿಎಫ್ ಹಣ ಮುಂದಿನ 3 ತಿಂಗಳ ಕಡಿತವಾಗಲ್ಲ. ನೌಕರರ ವೇತನದಿಂದ ಕಡಿತಗೊಳ್ಳಬೇಕಿದ್ದ ಶೇಕಡಾ 12 ರಷ್ಟು ಹಾಗೂ ಶೇಕಡಾ 12ರಷ್ಟು ಪಿಎಫ್ ಕೊಡುಗೆಯನ್ನೂ ಸರ್ಕಾರವೇ ತುಂಲಿದೆ. ಆದರೆ ಕೆಲ ಷರತ್ತುಗಳನ್ನು ವಿಧಿಸಿದೆ.
ಈ ಯೋಜನಗೆ ಯಾರು ಅರ್ಹರು:
ಪ್ರತಿ ತಿಂಗಳು 15,000 ಹಾಗೂ ಅಥವಾ ಅದಕ್ಕಿಂತ ಕಡಿಮೆ ವೇತನವಿರುವ ನೌಕರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಉದಾಹರಣೆಗೆ ಸಂಸ್ಥೆಯಲ್ಲಿ ಕನಿಷ್ಠ 100 ನೌಕರರಿದ್ದು, ಶೇಕಡಾ 90 ರಷ್ಟು ನೌಕರರ ವೇತನ 15,000 ರೂಪಾಯಿಗಿಂತ ಕಡಿಮೆ ಇದ್ದರೆ ಇಂತಹ ಸಂಸ್ಥೆ ಅಥವಾ ಕಂಪನಿಯ ನೌಕರರಿಗೆ ಈ ಯೋಜನೆ ಅನ್ವಯವಾಗಲಿದೆ.
15,000 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ವೇತನ ಪಡೆಯುವ ನೌಕರರು ಕೂಡ ಈ ಯೋಜನೆಗೆ ಅರ್ಹರಾಗಿದ್ದಾರೆ. ಇದಕ್ಕಾಗಿ ಕಂಪನಿಯ HR(ಮಾನವ ಸಂಪನ್ಮೂಲ ವಿಭಾಗ) ಸಂರ್ಕಿಸಿ ಪಿಎಫ್ ಖಾತೆ ವಿವರಗಳನ್ನು ಈ ಯೋಜನೆಗಾಗಿ ಭರ್ತಿ ಮಾಡಬೇಕು.
ಮಾರ್ಚ್ 26ರಂದು ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಾರ್ಮಿಕರ ವಲಯಕ್ಕೆ ಹೆಚ್ಚಿನ ಸಮಸ್ಯೆಗಳಗಾದಂತೆ ನೋಡಿಕೊಳ್ಳಲಿದೆ ಎಂದು ಹೇಳಿದ್ದರು.
80 ಲಕ್ಷ ನೌಕರರಿಗೆ ಅನುಕೂಲ:
ಕೇಂದ್ರ ಸರ್ಕಾರದ ಈ ಯೋಜನೆಯಿಂದ ಸರಿಸುಮಾರು 4 ಲಕ್ಷ ಸಂಸ್ಥಗಳ 80 ಲಕ್ಷ ನೌಕರರ ಸಹಾಯವಾಗಲಿದೆ.