ಮುಂಬೈ(ಏ.15): ಕೊರೋನಾ ತಾಂಡವದಿಂದ ಪಾರಾಗಲು ರಾಷ್ಟ್ರವ್ಯಾಪಿ ಘೋಷಣೆಯಾಗಿದ್ದ ಲಾಕ್‌ಡೌನ್ ಅನ್ನು ಮೇ.3ರ ವರೆಗೆ ವಿಸ್ತರಿಸಿದ್ದರಿಂದ ದೇಶದ ಆರ್ಥಿಕತೆ, ಈ ಹಿಂದೆ ಅಂದಾಜಿಸಿದ್ದಕ್ಕಿಂತಲೂ ಭೀಕರವಾಗಿ ನೆಲ ಕಚ್ಚಲಿದೆ. ಬರೋಬ್ಬರಿ 17.81 ಲಕ್ಷ ಕೋಟಿಯಷ್ಟುನಷ್ಟವಾಗಲಿದೆ ಎಂದು ಬ್ರೋಕರೇಜ್ ಸಂಸ್ಥೆ ಬಾಕ್ಲೇರ್ಸ್ ಅಂದಾಜಿಸಿದೆ.
ಕೊರೋನಾ ಹೊಡೆತ: ಬೆಂಗ್ಳೂರಲ್ಲಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವುದು ಖಚಿತ..!
ಹಣಕಾಸು ವರ್ಷವನ್ನು ಗಮನದಲ್ಲಿಟ್ಟುಕೊಳ್ಳುವುದಾದರೆ 2020ರಲ್ಲಿ ಶೂನ್ಯ ಬೆಳವಣಿಗೆ ಉಂಟಾಗಲಿದೆ. ಹಿಂದೆ ಶೇ.2.5ರ ದರದಲ್ಲಿ ಬೆಳವಣಿಗೆ ನಿರೀಕ್ಷಿಸಲಾಗಿತ್ತು. 2021ರ ಹಣಕಾಸು ವರ್ಷದಲ್ಲಿ ಶೇ.3.5ರ ದರದಲ್ಲಿ ಪ್ರಗತಿ ನಿರೀಕ್ಷಿಸಲಾಗಿತ್ತಾದರೂ, ಅದು ಶೇ.0.8ಕ್ಕೆ ಇಳಿಯಲಿದೆ ಎಂದು ಅದು ಭವಿಷ್ಯ ನುಡಿದಿದೆ.
ಈ ಹಿಂದೆ ಲಾಕ್‌ಡೌನ್‌ನಿಂದಾಗಿ 9.12 ಲಕ್ಷ ಕೋಟಿ ನಷ್ಟಉಂಟಾಗಬಹುದೆಂದು ಹೇಳಲಾಗಿತ್ತು.