ಲಾಕ್‌ಡೌನ್‌ನಿಂದ ದೇಶಕ್ಕೆ 8 ಲಕ್ಷ ಕೋಟಿ ರು. ನಷ್ಟ| ಕೈಗಾರಿಕಾ ಸಂಸ್ಥೆಗಳಿಂದ ಅಂದಾಜು
ನವದೆಹಲಿ(ಏ.14): ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಘೋಷಿಸಿದ 21 ದಿನಗಳ ವಿಶ್ವದ ಅತಿದೊಡ್ಡ ಲಾಕ್‌ಡೌನ್‌ನಿಂದಾಗಿ ಭಾರತದ ಆರ್ಥಿಕತೆಗೆ 7ರಿಂದ 8 ಲಕ್ಷ ಕೋಟಿ ರು. ನಷ್ಟಸಂಭವಿಸಲಿದೆ ಎಂದು ಕೈಗಾರಿಕಾ ಸಂಸ್ಥೆಗಳು ಅಂದಾಜಿಸಿವೆ.
ಮಾ.25ರಂದು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದರು. ಇದರಿಂದಾಗಿ ಶೇ.70ರಷ್ಟುಆರ್ಥಿಕ ಚಟುವಟಿಕೆ, ಹೂಡಿಕೆ, ರಫ್ತು, ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಕೇವಲ ಅಗತ್ಯ ವಸ್ತುಗಳ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈಗಾಗಲೇ ಕುಂಠಿತಗೊಂಡಿದ್ದ ಆರ್ಥಿಕತೆ ಇನ್ನೇನು ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಕೊರೋನಾ ವೈರಸ್ ಮಹಾಮಾರಿ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ.
undefined
ಗಂಗಾ ನದಿ ನೀರು ಈಗ ಕುಡಿಯಲು ಯೋಗ್ಯ: ಬರಿಗಣ್ಣಿಗೆ ಕಾಣುತ್ತಿವೆ ಜಲಚರಗಳು!
2020-21ನೇ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಅತಿ ಕಡಿಮೆ ದರದಲ್ಲಿ ಆರ್ಥಿಕ ಬೆಳವಣಿಗೆ ಕಾಣಲಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಆರ್ಥಿಕತೆಗೆ 7ರಿಂದ 8 ಲಕ್ಷ ಕೋಟಿ ರು. ನಷ್ಟಸಂಭವಿಸಬಹುದು ಎಂದು ಕೇಂದ್ರೀಯ ಸಾಂಸ್ಥಿಕ ಸಂಶೋಧನೆ ತಿಳಿಸಿದೆ. ಈ ಮುನ್ನ ಅಕ್ಯೂಟ್ ರೇಟಿಂಗ್ಸ್ ಆ್ಯಂಡ್ ರಿಸಚ್‌ರ್ ಕೂಡ ಲಾಕ್‌ಡೌನ್‌ನಿಂದ ಭಾರತಕ್ಕೆ ಪ್ರತಿ ದಿನ 35,000 ಕೋಟಿ ರು. ನಷ್ಟವಾಗಲಿದೆ ಎಂದು ಹೇಳಿತ್ತು.
ಇದೇ ವೇಳೆ ಭಾರತದ ಆರ್ಥಿಕತೆ ಏ.1ರಿಂದ ಆರಂಭವಾದ 2020-21ನೇ ಹಣಕಾಸು ವರ್ಷದಲ್ಲಿ ಶೇ.1.5ರಿಂದ ಶೇ. 2.8ರ ದರದಲ್ಲಿ ಆರ್ಥಿಕತೆ ಅಭಿವೃದ್ಧಿ ಕಾಣಬಹುದು ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಒಂದು ವೇಳೆ ಭಾರತದ ಆರ್ಥಿಕ ಪ್ರಗತಿ ಇಷ್ಟುಪ್ರಮಾಣದಲ್ಲಿ ಕುಂಠಿತವಾದರೆ ಅದು 1991ರ ಬಳಿಕ ದಾಖಲಾದ ಅತಿ ನಿಧಾನಗತಿಯ ಆರ್ಥಿಕ ಪ್ರಗತಿ ಎನಿಸಿಕೊಳ್ಳಲಿದೆ. ಅದೇ ರೀತಿ ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ 2020ರ ಕ್ಯಾಲೆಂಡರ್ ವರ್ಷದಲ್ಲಿ ಜಿಡಿಪಿ ಶೇ.2.5ರ ದರದಲ್ಲಿ ಪ್ರಗತಿ ಕಾಣಬಹುದು ಎಂದು ಹೇಳಿದೆ.
ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ!
ಶೇ.90ರಷ್ಟು ಲಾರಿಗಳ ಸಂಚಾರ ಬಂದ್:
ಲಾಕ್‌ಡೌನ್‌ನಿಂದಾಗಿ ಸುಮಾರು 1 ಕೋಟಿ ಟ್ರಕ್‌ಗಳ ಪೈಕಿ ಶೇ.90ರಷ್ಟುಟ್ರಕ್‌ಗಳು ರಸ್ತೆಗೆ ಇಳಿದಿಲ್ಲ. ಕೇವಲ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳು ಮಾತ್ರ ಸಂಚರಿಸುತ್ತಿವೆ. ಲಾಕ್‌ಡೌನ್ ತೆರವುಗೊಳಿಸಿದ ಬಳಿಕವೂ ಟ್ರಕ್‌ಗಳ ಸಂಚಾರ ಸಾಮಾನ್ಯಸ್ಥಿತಿಗೆ ಬರಲು 2ರಿಂದ 3 ತಿಂಗಳು ಬೇಕಾಗಲಿದೆ ಎಂದು ಅಖಿಲ ಭಾರತ ಸಾರಿಗೆ ಸಂಘಟನೆ ತಿಳಿಸಿದೆ.